ರಾಧಿಕಾ ಕಳ್ಳಿ ಅಲ್ಲ ಅಂತ ಚಿರಂತನ್ ಪ್ರೂವ್ ಮಾಡ್ತಾನಾ..!!!
ಸಿನಿಮಾಗಳಿಗೆ ಯಾವ ರೀತಿ ಕ್ರೇಜ್ ಇದ್ಯೋ ಅಷ್ಟೇ ಕ್ರೇಜ್ ಕಿರುತೆರೆ , ಧಾರವಾಹಿ ರಿಯಾಲಿಟಿ ಶೋಗಳಿಗಿದೆ.. ಸಂಜೆ ಆಯ್ತಂದ್ರೆ ಸಾಕು ಮನೆ ಮಮದಿ ಟಿವಿ ರಿಮೋಟ್ ಹಹಿಡಿದು ಕುಳಿತು ಬಿಡ್ತಾರೆ… ಸಾಕಷ್ಟು ಕಿರುತೆರೆ ಧಾರವಾಹಿಗಳು ಉತ್ತಮ ಪ್ರದರ್ಶನ ಕಾಣ್ತಿವೆ.. ಇದೇ ಲಿಸ್ಟ್ ಗೆ ಸೇರೋದು ,,,,, ರಾಧಿಕಾ….
ಮಹಿಳಾ ಪ್ರಧಾನ ಧಾರಾವಾಹಿ ರಾಧಿಕಾ… ಈ ಧಾರವಾಹಿಯಲ್ಲಿ ರಾಧಿಕಾ ಪಾತ್ರ ನಿಭಾಯಿಸುತ್ತಿರುವ ನಾಯಕಿ ನರ್ಸ್ ಆಗಿದ್ದು , ಧೈರ್ಯವಂತೆಯೂ ಆಗಿ ಕಾಣಿಸಿಕೊಂಡಿದ್ದಾರೆ…
ತಾಯಿ, ತಮ್ಮ, ಅತ್ತಿಗೆ, ತಂಗಿ, ಅಣ್ಣ ಅಂತ ಕುಟುಂಬದವರಿಗಾಗಿ ಕಷ್ಟ ಪಡುತ್ತಿರುವ ಹುಡುಗಿಯಾಗಿ ,,,, ಮನೆ ಮಾತಾಗಿರುವ ರಾಧಿಕಾ ಕಿರುತೆರೆ ಪ್ರಿಯರ ಅಚ್ಚುಮೆಚ್ಚಿನ ಹುಡುಗಿಯಾಗಿದ್ದಾರೆ… ಅಂದ್ಹಾಗೆ ಈ ಧಾರಾವಾಹಿಯ ನಾಯಕನಾಗಿರುವ ಚಿರಂತನ್ ಪಾಪ ತನ್ನ ಪ್ರೀತಿಯನ್ನು ರಾಧಿಕಾ ಬಳಿ ಹೇಳಿಕೊಳ್ಳಲು ಹೆದರಿಕೊಳ್ತಾ ಪಜೀತಿ ಪಡುತ್ತಿರುವುದನ್ನ ನೋಡುವ ವೀವರ್ಸ್ ಕೂಡ ಅವನ ಜೊತೆಗೆ ಒದ್ದಾಡುತ್ತಿದ್ಧಾರೆ..
ಒಂದ್ಕಡೆ ರಾಧಿಕಾಗೆ ಪ್ರಪೋಸ್ ಮಾಡಲು ಚಿರಂತನ್ ಪಜೀತಿ ಬೀಳ್ತಿದ್ರೆ ಅತ್ತ ರಾಧಿಕಾ ಸಹ ಸಿಬ್ಬಂದಿ ಆಕೆಯ ವಿರುದ್ಧವೇ ಷಡ್ಯಂತ್ರ ರಚಿಸುತ್ತಿದ್ದಾರೆ.. ರಾಧಿಕಾ ಒಬ್ಬ ಉತ್ತಮ ನರ್ಸ್ ಆಗಿ ಕೆಲಸ ಮಾಡುತ್ತಿದ್ದು , ರೋಗಿಗಳನ್ನು ಬಹಳ ಆತ್ಮೀಯತೆಯಿಂದ ಮಾತಾಡಿಸುತ್ತಾರೆ.. ಇದು ಅಲ್ಲಿನ ಕೆಲವರಿಗೆ ಉರಸಿದೆ… ಇದೇ ಕಾರಣಕ್ಕಾಗಿಯೇ ಆಸ್ಪತ್ರೆಗೆ ಅಡ್ಮಿಟ್ ಆಗುವವರೆಲ್ಲಾ ಮೊದಲ ಭೇಟಿಯಲ್ಲೇ ನಮಗೆ ರಾಧಿಕಾ ನರ್ಸ್ ಇರಲಿ ಎನ್ನುತ್ತಿದ್ದಾರೆ.
ಹೀಗಾಗಿ ರಾಧಿಕಾಳನ್ನ ಕೆಲಸದಿಂದ ತೆಗೆಸಬೇಕೆಂದು ಪ್ಲಾನ್ ಮಾಡ್ತಿದ್ದು , ಇದರ ಆರಂಭಿಕ ಹಂತವಾಗಿ ರಾಧಿಕಾ ಸಹದ್ಯೋಗಿ ಒಬ್ಬಾಕೆ ರೋಗಿಯ ವಿಸಿಟರ್ ಒಬ್ಬರ ಮೊಬೈಲ್ ತೆಗೆದು ರಾಧಿಕಾ ಬ್ಯಾಗ್ ನೊಳಗೆ ಹಾಕಿದ್ದು , ರಾಧಿಕಾಗೆ ದೊಡ್ಡ ಸಂಕಷ್ಟವೇ ಎದುರಾಗಲಿದೆ.
ಆದ್ರೆ ಎಲ್ಲರ ಬ್ಯಾಗ್ ಚೆಕ್ ಮಾಡುವ ನಾಟಕವಾಡಿ, ಕಡೆಗೆ ರಾಧಿಕಾ ಬ್ಯಾಗ್‌ನಲ್ಲಿಯೇ ಮೊಬೈಲ್ ಸಿಕ್ಕಿದ್ದು ಷಡ್ಯಂತ್ರ ರಚಿಸಿದವರು ಫುಲ್ ಖುಷ್ ಆಗಿದ್ಧಾರೆ..
ಹೀಗಾಗಿ ಪ್ರೇಕ್ಷಕರು ಪಾಪ ರಾಧಿಕಾ ಪರಿಸ್ಥಿತಿ ಏನು ಎಂದು ಆತಂಕಕ್ಕೆ ಒಳಗಾಗಿದ್ದಾರೆ.. ಆದ್ರೆ ರಾಧಿಕಾಳ ರಕ್ಷಣೆಗೆ ಚಿರಂತನ್ ನಿಲ್ಲುವುದು ಪಕ್ಕಾ…
ಹೇಗೆ ಗೊತ್ತಾ..?? ಚಿರಂತನ್ ಪ್ರಪೋಸ್ ಮಾಡಲು ಒದ್ದಾಡ್ತಿದ್ದಾಗ ಅವರ ತಂದೆ ಹಿಂದೆಯಿಂದ ವಿಡಿಯೋ ಮಾಡ್ತಿದ್ದರು… ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿರೋವಾಗ ಪಕ್ಕಾ ರಾಧಿಕಾ ಸಹೋದ್ಯೋಗಿ ಮೊಬೈಲ್ ಕದ್ದ ದೃಶ್ಯ ಸೆರೆ ಆಗಿಯೇ ಇರುತ್ತೆ.. ಈ ವಿಡಿಯೋದಿಂದ ರಾಧಿಕಾ ಕಳ್ಳಿ ಅಲ್ಲ ಅನ್ನೋದು ಪ್ರೂವ್ ಆಗುತ್ತೆ.. ಆದ್ರೆ ರಾಧಿಕಾ ಕಳ್ಳಿ ಅಲ್ಲ ಅನ್ನೋದು ಗೊತ್ತಾಗುವ ನಡುವೆ ಏನೇನೆಲ್ಲಾ ಆಗುತ್ತೆ ಅನ್ನೋದನ್ನ ಕಾದುನೋಡ್ಬೇಕಿದೆ..
KGF 2 : ಬಟ್ಟೆ ವಿಚಾರಕ್ಕಲ್ಲ ,,, ಈ ಸಲ KGF ವಿಚಾರಕ್ಕೆ ಟ್ರೋಲ್ ಆದ ಉರ್ಫಿ