ಅಬ್ಬಬ್ಬಾ…!!!! ಬಿಯರ್ ದಾನ ಮಾಡಿ ಎಂದವರಿಗೆ ಸೋನು ಕೊಟ್ರು ಮಸ್ತ್ ಉತ್ತರ..!!!
ಸೋನು ಸೂದ್… ಬಗ್ಗೆ ಗೊತ್ತಿರದವರು ಬಹುಶಃ ಭಾರತದಲ್ಲಿ ಬೆರಳೆಣಿಕೆಯಷ್ಟು ಜನ… ಲಾಕ್ ಡೌನ್ ನಿಂದ ಹಿಡಿದು ಸೋನು ಸೂದ್ ಅವರು ಇಲ್ಲಿಯವರೆಗೂ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನ ಮಾಡುತ್ತಾ ಸಾಗ್ತಿದ್ಧಾರೆ…
ಬಾಲಿವುಡ್, ಚಂದವನ , ಸೌತ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟ ಸೋನು ಸೂದ್ ಸದ್ಯಕ್ಕೆ ರೀಲಲ್ ನಲ್ಲಿ ಹೆಚ್ಚು ವಿಲ್ಲನ್ ಆಗಿಯೇ ಕಾಣಿಸಿಕೊಂಡಿದ್ದಾರೆ.. ಆದ್ರೆ ಅವರು ರಿಯಲ್ ಲೈಫ್ ನ ಹೀರೋ ಎಂದು ಜನರೇ ಕೊಂಡಾಡ್ತಿದ್ಧಾರೆ..
बियर के साथ भुजिया चलेगा ? 🤣 https://t.co/SX3rEtoYgL
— sonu sood (@SonuSood) April 6, 2022
ಸಾಮಾನ್ಯ ಜನರಿಗೆ ರಿಯಲ್ ಸ್ಟಾರ್ ಆಗಿದ್ದಾರೆ. ಕೊರೊನಾ ಸಮಯದಲ್ಲಿ ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡ್ತಿದ್ದರು. ಆದ್ರೆ ಸೋನು ಬಳಿ ಅನೇಕರು ಅಸಮಂಜದ ಬೇಡಿಕೆಗಳನ್ನ ಇಟ್ಟಿದ್ದೂ ಉಂಟು.. ಅಷ್ಟೇ ಅಲ್ಲ ಅಂತವರಿಗೆ ಅವರದ್ದೇ ಶೈಲಿಯಲ್ಲಿ ಉತ್ತರಿಸೋದು ಸೋನು ಸೂದ್ ಸ್ಪೆಷಾಲಿಟಿ..
ಇಂತಹದ್ದೇ ಒಂದು ಬೇಡಿಕೆ ಇಟ್ಟಿದ್ದ ಒಬ್ಬ ನೆಟ್ಟಿಗನೆ ಸೂನು ಮಸ್ತ್ ಉತ್ತರ ಕೊಟ್ಟಿದ್ದಾರೆ.. “ ಸರ್ ನನಗೆ ಬಿಯರ್ ದಾನ ಮಾಡಿ” ಎಂದು ಕೇಳಿರುವುದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ..
ಮೀಮ್ ಒಂದರಲ್ಲಿ ಸೋನು ಅವರಿಗೆ ನೆಟ್ಟಿಗನೊಬ್ಬ ಬೀರ್ ಕೇಳಿದ್ದಾನೆ. ಈ ಟ್ವೀಟ್ ಫುಲ್ ವೈರಲ್ ಆಗುತ್ತಿದ್ದು, ಸೋನು ಸಹ ಕಾಮಿಡಿಯಾಗಿ ಉತ್ತರಕೊಟ್ಟಿದ್ದಾರೆ.
‘ಚಿಲ್ಡ್ ಬಿಯರ್ ದಾನ ಮಾಡಿ ಸೋನು’ ಎಂಬ ಮೀಮ್ ಟ್ವಿಟ್ಟರ್‌ನಲ್ಲಿ ವೈರಲ್ ಆಗುತ್ತಿದೆ. ಇದನ್ನು ಗಮನಿಸಿದ ಸೋನು ‘ಚಿಲ್ಡ್ ಬಿಯರ್ ಜೊತೆ ಮಿಕ್ಸ್ಚರ್ ಬೇಕಾ’ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.