Beast : ಕನ್ನಡ ಸಿನಿಮಾದ ಕಾಪಿ ಅಂತೆ Beast,….!!!
ಯಾವುದೇ ಒಂದು ದೊಡ್ಡ ಸಿನಿಮಾ ರಿಲೀಸ್ ಆಗಲಿದೆ ಎಂದ್ರೆ ಆ ಸಿನಿಮಾಗೆ ಸಾಕಷ್ಟು ಅಡಚಣೆಗಳು ಎದುರಾಗುವುದು ಸಹಜ.. ಸಿನಿಮಾಗೆ ಎಷ್ಟೇ ಪಾಸಿಟಿವ್ ರಿವೀವ್ಸ್ ಸಿಕ್ಕರೂ,,, ಕೆಲ ನೆಗೆಟಿವ್ ವಿಚಾರಗಳು ಸದ್ದು ಮಾಡೋದು ಹೆಚ್ಚು…
ಅಂತೆಯೇ ಏಪ್ರಿಲ್ 13 ಕ್ಕೆ ರಿಲೀಸ್ ಆಗಲಿರುವ , ದಳಪತಿ ವಿಜಯ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ Beast ಬಗ್ಗೆಯೂ ಸಾಕಷ್ಟು ನೆಗೆಟಿವ್ ವಿಚಾರಗಳನ್ನ ಹರಿಬಿಡಲಾಗ್ತಿದೆ… ಅಂದ್ಹಾಗೆ ಈ ಸಿನಿಮಾ ಥಿಯೇಟರ್ ಗಳಿಗಪ್ಪಳಿಸಿದ ಮರುದಿನವೇ ವಿಶ್ವಾದ್ಯಂತ KGF 2 ಹವಾ ಶುರುವಾಗಲಿದೆ..
KGF 2 ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಭಾರೀ ಪೈಟ್ ಇರಲಿದೆ…
ಆದ್ರೆ ಈಗ ಸುದ್ದಿ ಏನಂದ್ರೆ ಇತ್ತೀಚೆಗೆ ಕೆಲವರು ಸಿನಿಮಾದ ಟ್ರೇಲರ್ ನೋಡಿ ಇದನ್ನ ವಿದೇಶೀ ಮನಿ ಹೀಸ್ಟ್ ಸೀರೀಸ್ ಜೊತೆಗೆ ಹೋಲಿಸಿ , ಈ ಸಿನಿಮಾದ ಕಾಪಿ ಎಂದು ಕೆಲವರು ಟ್ರೋಲ್ ಮಾಡಿದ್ದರು.. ಎರಡೂ ಸಿನಿಮಾಗಳ ನಡುವೆ ಸಾಮ್ಯತೆ ಇದೆ ಎಂದು ಸೋಷಿಇಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಿತ್ತು..
ಟ್ರೇಲರ್ ನಲ್ಲಿ ಮಾಲ್ ಒಂದನ್ನ ಭಯೋತ್ಪಾದಕರು ಹೈಜಾಕ್ ಮಾಡಿದ್ದಾರೆ.. ಇದೇ ರೀತಿಯಾದ ಕಥೆ ಮನಿ ಹೀಸ್ಟ್ ನಲ್ಲಿದೆ ಅನ್ನೋದೇ ಇಂತಹದ್ದೊಂದು ಚರ್ಚೆಗೆ ಕಾರಣ..
ಆದ್ರೀಗ Beast ಸಿನಿಮಾ ಕನ್ನಡದ ಹಳೆಯ ಸಿನಿಮಾದ ಕಾಪಿ ಎಂದು ಸೋಷಿಯಲ್ ಮಿಡಿಯಾದಲ್ಲಿ ನೆಟ್ಟಿಗರು ವಾದಿಸುತ್ತಿದ್ದಾರೆ..
ಹೌದು..
1993 ರಲ್ಲಿ ಬಿಡುಗಡೆ ಆಗಿದ್ದ ಕನ್ನಡದ ಸೂಪರ್ ಹಿಟ್ ಸಿನಿಮಾ ವಿಷ್ಣುವರ್ಧನ್ ಅವರ ನಟನೆಯ ‘ನಿಷ್ಕರ್ಷ’ ಸಿನಿಮಾದ ಕತೆಯನ್ನು ಕದ್ದು ‘ಬೀಸ್ಟ್’ ಸಿನಿಮಾ ಮಾಡಲಾಗಿದೆ ಎಂದು ಹಲವರು ಆರೋಪಿಸಿದ್ದಾರೆ.. ಅಷ್ಟೇ ಅಲ್ಲ ‘ನಿಷ್ಕರ್ಷ’ ಸಿನಿಮಾಕ್ಕೂ ತಮಿಳಿನ Beast ಸಿನಿಮಾಕ್ಕೂ ಇರುವ ಹೋಲಿಕೆಗಳನ್ನೂ ಗುರುತಿಸಿ ಪೋಸ್ಟ್ ಗಳನ್ನ ಮಾಡ್ತಿದ್ಧಾರೆ..
ನಿಷ್ಕರ್ಷ ಸಿನಿಮಾದಲ್ಲಿ ದರೋಡೆಕೋರರ ಗ್ಯಾಂಗ್ ಒಂದು ಬ್ಯಾಂಕ್ ಒಂದರ ಮೇಲೆ ದಾಳಿ ಮಾಡಿ ಅಲ್ಲಿನ ಸಿಬ್ಬಂದಿ, ಗ್ರಾಹಕರನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುತ್ತಾರೆ. ಆಗ ಸೈನ್ಯಾಧಿಕಾರಿ ಮೇಜರ್ ವಿಷ್ವನಾಥ್ ಅನ್ನು ಕಾರ್ಯಾಚರಣೆಗೆ ಕರೆಸಲಾಗುತ್ತದೆ. ಮೇಜರ್ ವಿಶ್ವನಾಥ್ ಪಾತ್ರ ನಿರ್ವಹಿಸಿರುವ ನಟ ವಿಷ್ಣುವರ್ಧನ್ ತನ್ನ ಶಕ್ತಿ, ಯುಕ್ತಿ ಉಪಯೋಗಿಸಿ ಬ್ಯಾಂಕ್ ಸಿಬ್ಬಂದಿಯನ್ನು, ಗ್ರಾಹಕರನ್ನು ರಕ್ಷಿಸುತ್ತಾರೆ. ಇಡೀ ಕಾರ್ಯಾಚರಣೆ ಬ್ಯಾಂಕ್ ಒಳಗೆ ನಡೆಯುತ್ತದೆ.
ಬೀಸ್ಟ್ ಟ್ರೇಲರ್ ನೋಡಿದಾಗಲೂ ಇಂತಹದ್ದೇ ಕಥೆಯಿದೆ ಎನಿಸುತ್ತದೆ.. ಎರೆಡೂ ಸಿನಿಮಾದ ಸ್ಟೋರಿ ಲೈನ್ ಒಂದೇ ರೀತಿ ಇದೆ ಎಂಬುದನ್ನ ನೆಟ್ಟಿಗರು ಗುರುತಿಸಿದ್ದಾರೆ..
ಅಷ್ಟೇ ಅಲ್ಲ ಈ ಸಿನಿಮಾವನ್ನ ಹಾಲಿವುಡ್ ನ ‘ಪಾಲ್ ಬ್ರಾಟ್: ದಿ ಮಾಲ್ ಕಾಪ್’ ಸಿನಿಮಾದ ಜೊತೆಗೂ ಹೋಲಿಸಲಾಗುತ್ತಿದೆ.
why netizens calling beast is copy of nishkarsha