KGF 2 ರಿಲೀಸ್ ದಿನವೇ ಆಲಿಯಾ – ರಣಬೀರ್ ಮದುವೆ..!!!
ಬಾಲಿವುಡ್ ನ ಸ್ಟಾರ್ ಗಳಾದ ಆಲಿಯಾ ಹಾಗೂ ರಣಪಬೀರ್ ಮದುವೆ ವದಂತಿ ಸಾಕಷ್ಟು ದಿನಗಳಿಂದ ಸದ್ದು ಮಾಡ್ತಿದೆ.. ಈಗ ಅಧಿಕೃತವಾಗಿ ಈ ವಿಚಾರ ಬಹಿರಂಗವಾಗಿದೆ.. ಈ ಜೋಡಿ ಇದೇ ಏಪ್ರಿಲ್ 14 ರಮದು ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ..
ಅಂದ್ರೆ KGF 2 ರಿಲೀಸ್ ಆಗ್ತಿರುವ ದಿನವೇ..
4 ವರ್ಷಗಳಿಂದ ಜೊತೆಗಿರುವ ಈ ಜೋಡಿ ಮದುವೆ ವಿಚಾರ ಪಾಗಾಗ ಸದ್ದು ಮಾಡ್ತಲೇ ಇರುತ್ತೆ.. ಆಲಿಯಾ ಅವರ ಚಿಕ್ಕಪ್ಪ ರಾಬಿನ್ ಭಟ್ ಸಂದರ್ಶನವೊಂದಲ್ಲಿ ಅವರ ಮದುವೆಯ ದಿನಾಂಕವನ್ನು ಬಹಿರಂಗಪಡಿಸಿದ್ಧಾರೆ.
ಏಪ್ರಿಲ್ 14 ರಂದು ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ವಿವಾಹವಾಗಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಆಲಿಯಾ ಅವರ ಮೆಹಂದಿ ಸಮಾರಂಭವು ಏಪ್ರಿಲ್ 13 ರಂದು ನಡೆಯಲಿದೆ. ರಣಬೀರ್ ಅವರ ಬಾಂದ್ರಾ ಮನೆಯಲ್ಲಿ ಮದುವೆ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ.
ರಣಬೀರ್ ಮತ್ತು ಆಲಿಯಾ 2017 ರಲ್ಲಿ ‘ಬ್ರಹ್ಮಾಸ್ತ್ರ’ ಸಿನಿಮಾ ಸೆಟ್ನಲ್ಲಿ ಭೇಟಿಯಾಗಿದ್ದರು. ಈ ವೇಳೆಯೇ ಅವರ ನಡುವೆ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ.. ಅಂದ್ಹಾಗೆ ಬ್ರಹ್ಮಾಸ್ತ್ರ ಸಿನಿಮಾ ಈ ವರ್ಷ ರಿಲೀಸ್ ಆಗಬೇಕಿದೆ..