ರಶ್ಮಿಕಾಗೆ ಶೀಘ್ರದಲ್ಲೇ ಶುರುವಾಗಲಿದೆ Bad Time
ರಶ್ಮಿಕಾ…. ರಶ್ಮಿಕಾ… ರಶ್ಮಿಕಾ… ಸದ್ಯಕ್ಕಂತೂ ರಶ್ಮಿಕಾ ಮೇನಿಯಾ ಇದೆ.. ಟಾಲಿವುಡ್ , ಕಾಲಿವುಡ್ , ಬಾಲಿವುಡ್ ನಲ್ಲಿ ರಶ್ಮಿಕಾ ಬಹುಬೇಡಿಕೆಯ ನಟಿಯಾಗಿಬಿಟ್ಟಿದ್ದಾರೆ..
ಬಿಗ್ ಬಜೆಟ್ ಸಿನಿಮಾ ಮೇಕರ್ ಗಳ ಫೇವರೇಟ್ ಆಗಿಬಿಟ್ಟಿದ್ದಾರೆ… ರಶ್ಮಿಕಾ… ಕನ್ನಡ ಸಿನಿಮಾ ಮೂಲಕವೇ ಹಿಟ್ ಆದರೂ ಕನ್ನಡ ಸಿನಿಮಾರಂಗಕ್ಕೆ ಟಾಟಾ ಬಾಯ್ ಬಾಯ್ ಹೇಳಿ ಬೇರೆ ಭಾಷೆ ಸಿನಿಮಾ ರಂಗದವರ ಪೈಕಿ ಒಬ್ಬರಾಗಿಬಿಟ್ಟಿದ್ಧಾರೆ..
ಪುಷ್ಪ ಸಕ್ಸಸ್ ನಲ್ಲಿರುವ ರಶ್ಮಿಕಾ , ಪುಷ್ಪ 2 ಸಿನಿಮಾದಲ್ಲಿ ಬ್ಯುಸಿಪಯಿದ್ದಾರೆ.. ಅತಿ ಹೆಚ್ಚು ಟ್ರೋಲ್ ಆಗೋ ನಟಿಯಾದ್ರೂ ,,, ತಲೆ ಕೆಡಿಸಿಕೊಳ್ದೇ ತಾವು ಮಾಡಿದ್ದೇ ಮಾಡೋದು ರಶ್ಮಿಕಾ…
ಇತ್ತೀಚೆಗೆ ದಳಪತಿ ವಿಜಯ್ ಅವರ 66 ಸಿನಿಮಾದ ನಾಯಕಿಯಾಗಿ ಅಧಿಕೃತವಾಗಿ ರಶ್ಮಿಕಾ ಹೆಸರು ರಿವೀಲ್ ಮಾಡಲಾಗಿದ್ದು , ಆ ಸಿನಿಮಾದ ಮುಹೂರ್ತದ ವೇಳೆ ರಶ್ಮಿಕಾ ವಿಜಯ್ ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ವು..
ಸದ್ಯ ಯಶಸ್ಸಿನ ಉತ್ತುಂಗದಲ್ಲಿರುವ ರಶ್ಮಿಕಾ ವರ್ಚಸ್ಸು ಕುಗ್ಗುವ ಟೈಮ್ ಹತ್ರ ಬಂದಿದೆ… ಹೀಗಂತ ರಶ್ಮಿಕಾ ಅವರೇ ನಂಬುವ ಜ್ಯೋತಿಷಿ ಭವಷ್ಯ ನುಡಿದಿದ್ದಾರೆ..
ತೆಲುಗು ಮತ್ತು ತಮಿಳು ಸಿನಿಮಾ ರಂಗದಲ್ಲಿ ಜ್ಯೋತಿಷಿ ವೇಣು ಸ್ವಾಮಿ ಅವರ ಮಾತುಗಳನ್ನು ಅನೇಕ ಸೆಲೆಬ್ರಿಟಿಗಳು ನಂಬುತ್ತಾರೆ. ಅಂದ್ಹಾಗೆ ಇದೇ ಜ್ಯೋತಿಷಿ ಸಮಂತಾ – ನಾಗಚೈತನ್ಯ ದೂರಾಗ್ತಾರೆಂದು ಭವಿಷ್ಯ ನುಡಿದಿದ್ದರು ಅಂತೆಯೇ ಆಯ್ತು ಸಹ..
ಇದೀಗ ಇವರೇ ‘ಕಿರಿಕ್’ ರಾಣಿ ಬಗ್ಗೆ ಭವಿಷ್ಯ ನುಡಿದಿದ್ದಾರೆ.. ಅಂದ್ಹಾಗೆ ರಶ್ಮಿಕಾ ಆಗಾಗ ತಮ್ಮನ್ನ ಭೇಟಿಯಾಗ್ತಿದ್ದ ಬಗ್ಗೆ ಈ ಹಿಂದೆ ಜ್ಯೋತಿಷಿ ವೇಣು ಸ್ವಾಮಿ ಅವರು ಸಂದರ್ಶನವೊಂದ್ರಲ್ಲಿ ಹೇಳಿಕೊಂಡಿದ್ದರು,..
ಆದ್ರೆ ರಶ್ಮಿಕಾ ಮತ್ತು ಜಕ್ಯೋತಿಷಿಗಳ ನಡುವೆ ಮನಸ್ತಾಪ ಉಂಟಾಗಿದೆ. ಅದು ಸಹ ಪ್ರೀತಿ ವಿಚಾರಕ್ಕೆ.. ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಹೆಸರು ಸೇರಿ ಆಗಾಗ ರೂಮರ್ಸ್ಗಳು ಹರಿದಾಡುತ್ತಲೇ ಇರುತ್ತವೆ… ಈ ಜೋಡಿ ಆಗಾಗ ಒಟ್ಟಾಗಿ ಕಾಣಿಸಿಕೊಳ್ತಾ ವದಂತಿಗಳಿಗೆ ತುಪ್ಪ ಸುರಿಯುತ್ತಲೇ ಬಂದಿದ್ದಾರೆ..
ಆದ್ರೆ ಈ ಇಬ್ಬರೂ ಪರಸ್ಪರ ಪ್ರೀತಿಸುತ್ತಾರೆ ಎನ್ನುವ ಸುದ್ದಿ ಇರುವ ಬೆನ್ನಲ್ಲೇ. ವೇಣು ಸ್ವಾಮಿ ಅವರು ರಶ್ಮಿಕಾ ಅವರಿಗೆ , ಸದ್ಯಕ್ಕೆ ಪ್ರೀತಿ , ಪ್ರೇಮ ಅವರಿಗೆ ಆಗಿ ಬರುವುದಿಲ್ಲ.
ಆ ಹುಡುಗನಿಂದ ದೂರವಿದ್ದು ಬಿಡು ಅಂದಿದ್ದರಂತೆ. ಆದ್ರೆ ಆಗ ರಶ್ಮಿಕಾ ನಮ್ಮ ವೈಯಕ್ತಿಕ ವಿಚಾರಕ್ಕೆ ಮೂಗು ತೂರಿಸಬೇಡಿ ಎಂದು ಹೇಳಿದ್ದರು ಎಂದು ಖುದ್ದು ವೇಣು ಸ್ವಾಮಿ ಅವರೇ ವಿಡಿಯೋ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಅಲ್ಲದೇ ಆ ಹುಡುಗಿಗೆ ಒಳ್ಳೆಯದಾಗಲಿ ಎಂದು ಹೇಳಿದ್ದೆ.
ಅವರು ಅದನ್ನು ಗಂಭೀರವಾಗಿ ತಗೆದುಕೊಳ್ಳಲಿಲ್ಲ. ಖಾಸಗಿ ವಿಚಾರಕ್ಕೆ ಬರಬೇಡಿ ಎಂದು ದೂರವಾದರು. ಅವರು ನನ್ನಿಂದ ದೂರವಾಗಿದ್ದಕ್ಕೆ ಯಾವುದೇ ಬೇಸರವಿಲ್ಲ. 2024ರವರೆಗೂ ಅಷ್ಟೇ ಅವರಿಗೆ ಒಳ್ಳೆಯ ದಿನಗಳು. ಆ ನಂತರ ಅವರಿಗೆ ಒಂದೊಂದೇ ಕಷ್ಟಗಳು ಎದುರಾಗುತ್ತವೆ ಎಂದಿದ್ದಾರೆ..