ತೆಲುಗಿನ ಹಿರಿಯ ನಟ ಬಾಲಯ್ಯ ವಿಧಿವಶ..
ಟಾಲಿವುಡ್ ಸಿನಿಮಾರಂಗದ ಹಿರಿಯ ನಟರಾದ ಬಾಲಯ್ಯ ಅವರುನಿಧನರಾಗಿದ್ದಾರೆ. 94 ವರ್ಷ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ.. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ಬೆಳಗ್ಗೆ ಯೂಸುಫ್‌ಗುಡಾದಲ್ಲಿರುವ ತಮ್ಮ ನಿವಾಸದಲ್ಲಿ ಇಹಲೋಕ ತ್ಯೆಜಿಸಿದ್ದಾರೆ.
ಬಾಲಯ್ಯ ಅವರ ಪೂರ್ಣ ಹೆಸರು ಮನ್ನವ ಬಾಲಯ್ಯ. ಅವರು ಏಪ್ರಿಲ್ 9, 1930 ರಂದು ಗುಂಟೂರು ಜಿಲ್ಲೆಯ ಅಮರಾವತಿ ಬಳಿಯ ವೈಕುಂಠಪುರದಲ್ಲಿ ಜನಿಸಿದರು.
ಬಾಲಯ್ಯ ಅವರು ತಮ್ಮ ಬಹುಮುಖ ಪ್ರತಿಭೆಯಾಗಿದ್ದು, ನಟ, ನಿರ್ಮಾಪಕ, ನಿರ್ದೇಶಕ ಮತ್ತು ಬರಹಗಾರರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಅವರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.