KGF 2 ಸಿನಿಮಾ ದೇಶಾದ್ಯಂತ ಹವಾ ಸೃಷ್ಟಿಸಿದೆ.. ಈ ಸಿನಿಮಾ ರಿಲೀಸ್ ಗೆ ದಿನಗಣನೆ ಶುರುವಾಗಿದೆ… ಇನ್ನೂ ಸಿನಿಮಾ ರಿಲೀಸ್ ಉಳಿದಿರುವುದು 5 ದಿನಗಳು ಮಾತ್ರವೇ…. ಥಿಯೇಟರ್ ಗಳ ಮುಂದೆ ರಾಕಿ ಭಾಯ್ ಕಟೌಟ್ ಗಳು ತಲೆ ಎತ್ತಲಿವೆ…
ಸಿನಿಮಾ ತಂಡ ಭರ್ಜರಿ ಪ್ರಮೋಷನ್ ಮಾಡ್ತಿದೆ.. ಇತ್ತೀಚೆಗೆ ಮುಂಬೈಗೆ ತೆರಳಿ ಪ್ರಚಾರ ಮಾಡಿದ ರಾಕಿ ಭಾಯ್ ನೋಡಲು ಫ್ಯಾನ್ಸ್ ಮುಗಿಬಿದ್ದಿದ್ದರು… ಸಿನಿಮಾ ತಂಡ ಪ್ರಮೋಷನ್ ಗೆ ವಿಭಿನ್ನ ಸ್ಟ್ರಾಟಜಿಗಳನ್ನ ಬಳಸಿಕೊಳ್ತಿದೆ..
ಅಂದ್ಹಾಗೆ ಡಿಫರೆಂಟ್ ಆದ್ರೆ ನೆಕ್ಸ್ಟ್ ಲೆವೆಲ್ ಪ್ರಚಾರ ತೆಗೆದುಕೊಂಡಿರುವ ಸಿನಿಮಾತಂಡ ,, ಮಾರ್ಕೆಂಟಿಗ್ ಸ್ಟ್ರಾಟಜಿಯನ್ನೂ ಪ್ರಚಾರದ ಭಾಗವಾಗಿಸಿಕೊಂಡಿದೆ..
ಅಂದ್ಹಾಗೆ ಸಿನಿಮಾಗೆ ವಿದೇಶಿ ಸೆನ್ಸಾರ್ ಬೋರ್ಡ್ ಸದಸ್ಯ ಉಮರ್ ಸಂಧು ಚಿತ್ರದ ಅವರು ವಿಮರ್ಶೆ ಬರೆದಿದ್ದಾರೆ. ಕೆಜಿಎಫ್ 2, ಆರಂಭದಿಂದ ಅಂತ್ಯದ ವರೆಗೂ ಆ್ಯಕ್ಷನ್, ಅಚ್ಚರಿಯ ಸಂಗತಿಗಳು, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳೇ ಇದೆ. ಚಿತ್ರದ ಡೈಲಾಗ್ಸ್ ತುಂಬಾ ನೀಟ್ ಮತ್ತು ಶಾರ್ಪ್ ಆಗಿವೆ. ಸಂಗೀತ ಡೀಸೆಂಟ್ ಆಗಿದೆ, ಆದರೆ ಬಿಜಿಎಂ ಅತಿರೇಕವಾಗಿದೆ. ಎಂದು ಉಮರ್ ಬರೆದುಕೊಂಡಿದ್ದಾರೆ.
ಅತ್ಯುತ್ತಮವಾದ ಚಿತ್ರ, ನಿರ್ದೇಶಕ ಉತ್ತಮವಾದ ಕೆಲಸ ಮಾಡಿದ್ದಾರೆ. ಕಥೆಯ ತೀವ್ರತೆಯನ್ನು ಚಿತ್ರದುದ್ದಕ್ಕೂ ಕಟ್ಟಿಕೊಡುವಲ್ಲಿ ಯಶಸ್ವಿ ಆಗಿದ್ದಾರೆ. ಪ್ರತಿಯೊಬ್ಬ ಕಲಾವಿದನಿಂದಲೂ ಸೊಗಸಾದ ಅಭಿನಯ ಮೂಡಿ ಬಂದಿದೆ. ಯಶ್ ಮತ್ತು ಸಂಜಯ್ ದತ್ ಇಬ್ಬರು ಅತ್ಯದ್ಭುತವಾಗಿ ತೆರೆಯ ಮೇಲೆ ಕಂಗೊಳಿಸಿದ್ದರೆ ಎಂದಿದ್ದಾರೆ..
ಅಲ್ಲದೇ ಕೆಜಿಎಫ್ 2 ಕೇವಲ ಸ್ಯಾಂಡಲ್‌ವುಡ್‌ನ ಬ್ಲಾಕ್ ಬಸ್ಟರ್ ಚಿತ್ರ ಅಲ್ಲ. ಇದು ಪ್ರಶಾಂತ್ ನೀಲ್ ಅವರ ವರ್ಲ್ಡ್ ಕ್ಲಾಸ್ ಚಿತ್ರ ಎಂದಿದ್ದಾರೆ.. ಅಷ್ಟೇ ಅಲ್ಲ ಕೆಜಿಎಫ್ 2 ಚಿತ್ರಕ್ಕೆ ಸ್ಟಾರ್‌ಗಳನ್ನು ಕೊಟ್ಟಿದ್ದಾರೆ.