ಕಿರುತೆರೆಯ ನಟನಟಿಯರಿಗೂ ಸಹ ಸಿನಿಮಾರಂಗದ ಸ್ಟಾರ್ ಗಳಷ್ಟೇ ಕ್ರೇಜ್ ಇರುತ್ತೆ.. ಅಭಿಮಾನಿಗಳ ಬಳಗವಿರುತ್ತೆ.. ಕಿರುತೆರೆ ನಟನಟಿಯರು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್ ಆಗಿರುತ್ತಾರೆ.. ಅಂತವರ ಸಾಲಿಗೆ ಸೇರೋದೇ ಅಕ್ಕ ಧಾರವಾಹಿ ಖ್ಯಾತಿಯ , ಬಿಗ್ ಬಾಸ್ ಖ್ಯಾತಿಯ ಅನುಪಮ ಗೌಡ…
ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಅನುಪಮ , ನಿರೂಪಕಿ ಕೂಡ ಹೌದು… ರಿಯಾಲಿಟಿ ಶೋಗಳಲ್ಲಿ ನಿರೂಪಣೆ ಮೂಲಕ ಮನೆ ಮಾತಾಗಿದ್ದಾರೆ.. ಅಂದ್ಹಾಗೆ ಅನುಪಮ ಇದೀಗ ಮಾಡಿರುವ ಸಮಾಜಮುಖಿ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ…
ಹೌದು… ವರ್ಷಗಳಿಂದ ಬೆಳೆಸಿದ್ದ ತಮ್ಮ ಸುಂದರ ತಲೆಗೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ… ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಫೋಟೋ ಹಂಚಿಕೊಂಡಿರುವ ನಟಿ ನನ್ನ ವೃತ್ತಿ ಜೀವನದಲ್ಲಿ ಉದ್ದನೆಯ ಜಡೆ ನನ್ನ ಆತ್ಮವಿಶ್ವಾಸದ ಕುರುಹು ಆಗಿತ್ತು.
ಈ ತಲೆಗೂದಲನ್ನು ಪ್ರೀತಿಯಿಂದ ಪೋಷಣೆ ಮಾಡುತ್ತಾ ಬಂದಿದ್ದೆ. ಇದೀಗ ಅನೇಕರಿಗೆ ಈ ತಲೆಗೂದಲಿನ ಅವಶ್ಯಕತೆ ಇರುವುದು ಕಂಡು ಬಂತು. ಹಾಗಾಗಿ ನಾನು ಅವುಗಳನ್ನು ಕತ್ತರಿಸಿ, ಅಗತ್ಯವಿದ್ದರಿಗೆ ಕೊಡಲು ಮುಂದಾಗಿದ್ದೇನೆ. ಈ ಕೆಲಸ ಮಾಡಲು ನನಗೆ ಹೆಮ್ಮೆ ಅನಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ. ಅವರ ಈ ಕಾರ್ಯಕ್ಕೆ ಅಭಿಮಾನಿಗಳಿಂದ ಮೆಚಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ…
ಹಳ್ಳಿ ದುನಿಯಾ ಶೋ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದ ಅನುಪಮ ಆ ನಂತರ ಧಾರಾವಾಹಿಗಳಲ್ಲಿ ನಟಿಸಿದರು.