‘ಗಾಡ್ ಫಾದರ್’ ಶೂಟಿಂಗ್ ನಲ್ಲಿ ಮೆಗಾಸ್ಟಾರ್ ಬ್ಯುಸಿ
ಸದ್ಯ ಚಿರಂಜೀವಿ ಅವರ ನಟನೆಯ ಬಹುನಿರೀಕ್ಷೆಯ ಆಚಾರ್ಯ ಸಿನಿಮಾ ರಿಲೀಸ್ ಆಗಬೇಕಿದೆ.. ಈ ಸಿನಿಮಾದಲ್ಲಿ ಚಿರು ಪುತ್ರ , ಟಾಲಿವುಡ್ ನ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರೂ ಸಹ ಕಾಣಿಸಿಕೊಂಡಿರುವುದು ವಿಶೇಷ.. ಅವರಿಗೆ ನಾಯಕಿಯಾಗಿ ಪೂಜಾ ಹೆಗ್ಡೆ ಬಣ್ಣ ಹಚ್ಚಿದ್ದಾರೆ..
ಮೋಹನ್ ರಾಜಾ ನಿರ್ದೇಶನದ ‘ಗಾಡ್ ಫಾದರ್‘ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.
ಇದು ಮಲಯಾಳಂನಲ್ಲಿ ಯಶಸ್ವಿಯಾದ ‘ಲೂಸಿಫರ್‘ ಚಿತ್ರದ ತೆಲುಗು ರಿಮೇಕ್ ಆಗಿದೆ.
ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಅವರು ತಮ್ಮ ಪಾತ್ರದ ಚಿತ್ರೀಕರಣವನ್ನೂ ಪೂರ್ಣಗೊಳಿಸಿದ್ದಾರೆ.
ಈ ನಡುವೆ ಮತ್ತೊಂದು ಸುದ್ದಿ ಹೊರಬಂದಿದ್ದು, ಟಾಲಿವುಡ್ ನ ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದರಂತೆ.
ಈ ವಿಷಯವನ್ನು ಸ್ವತಃ ಚಿರಂಜೀವಿಯೇ ಟ್ವಿಟ್ಟರ್ ನಲ್ಲಿ ಬಹಿರಂಗಪಡಿಸಿದ್ದಾರೆ.
ಈ ಚಿತ್ರದಲ್ಲಿ ಪೂರಿ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ನಯನತಾರಾ, ಸತ್ಯದೇವ್, ಬ್ರಹ್ಮಾಜಿ ಮತ್ತು ಸುನೀಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರಕ್ಕೆ ತಮನ್ ಸಂಗೀತ ನೀಡುತ್ತಿದ್ದಾರೆ.