RRR ದಾಖಲೆ ಉಡೀಸ್ ಮಾಡಿದ KGF 2..!!
KGF 2 ಸಿನಿಮಾ ರಿಲೀಸ್ ಗೆ ಇನ್ನುಳಿದಿರೋದು ಕೇವಲ 3 ದಿನಗಳಷ್ಟೇ..
ಈಗಿನಿಂದಲೇ ಥಿಯೇಟರ್ ಗಳ ಮುಂದೆ ರಾಕಿ ಅಬ್ಬರ ಶುರುವಾಗ್ತಿದೆ… KGF ಕಾವು ರಂಗೇರುತ್ತಿದೆ.. ಟೀಸರ್ , ಟ್ರೇಲರ್ ಕಡೆಗೆ ಪ್ರಮೋಷನ್ ವಿಚಾರದಲ್ಲೂ ಬ್ಲಾಕ್ ಬಾಸ್ಟರ್ ಸಿನಿಮಾಗಳ ದಾಖಲೆ ಮುರಿದಿರು KGF 2 ಈಗ ಮತ್ತೊಂದು ವಿಚಾರದಲ್ಲಿ RRR ರೆಕಾರ್ಡ್ ಚಿಂದಿ ಚಿತ್ರಾನ್ನ ಮಾಡಿದೆ..
ಸಿನಿಮಾ ತಂಡ ಭರ್ಜರಿ ಪ್ರಮೋಷನ್ ಮಾಡ್ತಿದೆ.. ಇತ್ತೀಚೆಗೆ ಮುಂಬೈಗೆ ತೆರಳಿ ಪ್ರಚಾರ ಮಾಡಿದ ರಾಕಿ ಭಾಯ್ ನೋಡಲು ಫ್ಯಾನ್ಸ್ ಮುಗಿಬಿದ್ದಿದ್ದರು… ಸಿನಿಮಾ ತಂಡ ಪ್ರಮೋಷನ್ ಗೆ ವಿಭಿನ್ನ ಸ್ಟ್ರಾಟಜಿಗಳನ್ನ ಬಳಸಿಕೊಳ್ತಿದೆ..
ಅಂದ್ಹಾಗೆ ಡಿಫರೆಂಟ್ ಆದ್ರೆ ನೆಕ್ಸ್ಟ್ ಲೆವೆಲ್ ಪ್ರಚಾರ ತೆಗೆದುಕೊಂಡಿರುವ ಸಿನಿಮಾತಂಡ ,, ಮಾರ್ಕೆಂಟಿಗ್ ಸ್ಟ್ರಾಟಜಿಯನ್ನೂ ಪ್ರಚಾರದ ಭಾಗವಾಗಿಸಿಕೊಂಡಿದೆ..
KGF 2 ಈಗ RCB ಜೊತೆಗೆ ಕೊಲ್ಯಾಬರೇಷನ್ ಕೂಡ ಮಾಡಿಕೊಂಡು ದೊಡ್ಡ ಮಟ್ಟದಲ್ಲಿ ಸಿನಿಮಾ ಪ್ರಚಾರ ಮಾಡ್ತಿದೆ..
ಇದೆಲ್ಲದರ ನಡುವೆ
ಕೆಜಿಎಫ್ 2 RRR ನ ಮತ್ತೊಂದು ದಾಖಲೆ ಮುರಿದಿದೆ.. RRR ಸಿನಿಮಾಗೆ ಉತ್ತರ ಭಾರತದಲ್ಲಿ ರಿಲೀಸ್ ಗೂ ಮುನ್ನವೇ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು.. ಸಿನಿಮಾ ಬಿಡುಗಡೆ ಆಗುವ ಕೆಲವು ದಿನಗಳ ಮುಂಚೆಯೇ ಸಿನಿಮಾದ ಟಿಕೆಟ್ ಗಳು ಬುಕಿಂಗ್ ಆಗಿದ್ದವು. ಅತಿ ಹೆಚ್ಚು ಅಡ್ವಾನ್ಸ್ ಬುಕಿಂಗ್ ಆಗಿದ್ದ ಸಿನಿಮಾ ಎನಿಸಿಕೊಂಡಿತ್ತು.. ಆದ್ರೆ RRR ನ ಈ ದಾಖಲೆಯನ್ನ ಮುರಿದಿದೆ ನಮ್ಮ KGF 2 ಸಿನಿಮಾ.
5 ದಿನದಲ್ಲಿ RRR ಸಿನಿಮಾದ ಟಿಕೆಟ್ ಗಳು ಎಷ್ಟು ಮಾರಾಟವಾಗಿದ್ದವೋ ಅಷ್ಟೇ KGF 2 ಟಿಕೆಟ್ ಗಳು ಕೇವಲ 2 ದಿನಗಳಲ್ಲೇ ಮಾರಾಟವಾಗಿದ್ದು ಈ ಮೂಲಕ RRR ಮುಂದೆ KGF 2 ಅಬ್ಬರ ಎಷ್ಟಿರಲಿದೆ ಅನ್ನೋದಕ್ಕೆ ಸಾಕ್ಷಿ ನೀಡಿದೆ..
ಆ ಮೂಲಕ ಅತಿ ಹೆಚ್ಚು ಅಡ್ವಾನ್ಸ್ ಟಿಕೆಟ್ ಮಾರಾಟವಾದ ಸಿನಿಮಾ ಎಂಬ ದಾಖಲೆಯನ್ನು ಕೆಜಿಎಫ್ 2 ಸಿನಿಮಾ ತನ್ನದಾಗಿಸಿಕೊಂಡಿದೆ..
ಕ್ಯಾನ್ಸರ್ ರೋಗಿಗಳಿಗಾಗಿ ತಮ್ಮ ಕೂದಲು ದಾನ ಮಾಡಿದ ಅನುಪಮಾ
RCB ಜೊತೆ ಸೇರಿಕೊಂಡ KGF 2 ಟೀಮ್ .!!
ಕಿರುತೆರೆಗೆ ಹ್ಯಾಟ್ರಿಕ್ ಹೀರೋ : ಡ್ಯಾನ್ಸ್ ಶೋನ ಜಡ್ಜ್ ಶಿವಣ್ಣ
KGF 2