Mollywood : ನಟಿ ಮೇಲೆ ಕಿರುಕುಳ ಪ್ರಕರಣದಲ್ಲಿ ತಿರುವು : ಸುದ್ದಿಯಲ್ಲಿರುವ ಕಾವ್ಯಾ ಯಾರು..??
ಮಾಲಿವುಡ್ ನಲ್ಲಿ ನಟಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅನೇಕರ ಹೆಸರುಗಳಿದ್ದು , ನಟ ದಿಲೀಪ್ ಕುಮಾರ್ ಸಹ ಪ್ರಮುಖ ರೋಪಿಯಾಗಿದ್ದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು..
ಅಂದ್ಹಾಗೆ ಈ ಪ್ರಕರಣಕ್ಕೆ ಇದೀಗ ಹೊಸದೊಂದು ತಿರುವು ಸಿಕ್ಕಿದ್ದು , ದಿಲೀಪ್ ಪತ್ನಿ ಕಾವ್ಯಾ ಮಾಧವನ್ ಗೋಸ್ಕರ ನಟಿಗೆ ಕಿರುಕುಳ ನೀಡಲಾಗಿದೆ ಎಂಬುದನ್ನ ಸಾಬೀತು ಪಡಿಸುವಂತಹ ಸ್ಪೋಟಕ ವಾಯ್ಸ್ ಮೆಸೇಜ್ ಒಂದು ವೈರಲ್ ಆಗ್ತಿದೆ..
2017ರಲ್ಲಿ ನಡೆದಿದ್ದ ಈ ಪ್ರಕರಣದಿಂದಾಗಿ ಕಾವ್ಯಾ ಮಾಧವನ್ ಸದ್ಯ ಸುದ್ದಿಯಲ್ಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನು ವಿಚಾರಣೆಗೆ ಕರೆಯಲಾಗಿದೆ. ಕಾವ್ಯಾ ಮಲಯಾಳಂನ ಪ್ರಸಿದ್ಧ ನಟಿ ಮತ್ತು ಪ್ರಮುಖ ಆರೋಪಿ ನಟ ದಿಲೀಪ್ ಅವರ ಪತ್ನಿ. ಇದೀಗ ಆಕೆಯನ್ನು ಏಪ್ರಿಲ್ 11ರ ಸೋಮವಾರದಂದು ವಿಚಾರಣೆಗೆ ಕರೆಯಲಾಗಿದೆ.
ಆರೋಪಿಯೊಬ್ಬರ ಫೋನ್‌ನಿಂದ ಕ್ರೈಂ ಬ್ರಾಂಚ್ ವಶಪಡಿಸಿಕೊಂಡ ಧ್ವನಿ ಸಂದೇಶವು ಕಾವ್ಯಾ ಮಾಧವನ್ ಅಪರಾಧಕ್ಕೆ ಸಂಚು ರೂಪಿಸಿರೋದಾಗಿ ತೋರಿಸಿದೆ.. ಸೋರಿಕೆಯಾದ ಆಡಿಯೋ ನೋಟ್ ಆರೋಪಿ ಸೂರಜ್ (ದಿಲೀಪ್ ಅವರ ಸೋದರ ಮಾವ) ಮತ್ತು ಶರತ್ ನಡುವಿನ ಚರ್ಚೆಯನ್ನು ಒಳಗೊಂಡಿದೆ. ಸಂದರ್ಶನದ ಸಮಯದಲ್ಲಿ, ಪ್ರಕರಣದ ಮುಖ್ಯ ಮಾಸ್ಟರ್ ಮೈಂಡ್ ಕಾವ್ಯಾ ಮಾಧವನ್ ಎಂದು ಸೂರಜ್ ಹೇಳಿಕೊಂಡಿದ್ದಾರೆ. ತನ್ನ ಮಾಜಿ ಸ್ನೇಹಿತರನ್ನು (ಅಪಹರಣಕ್ಕೊಳಗಾದ ನಟಿ) ಅಪಾಯಕ್ಕೆ ಸಿಲುಕಿಸುವ ಉದ್ದೇಶ ಹೊಂದಿದ್ದಾಗಿ ತಿಳಿಯಪಡಿಸಲಾಗಿದೆ..
ಈ ಹಿಂದೆ ನಟಿ ಮಂಜು ವಾರಿಯರ್ ಅವರನ್ನು ವಿವಾಹವಾದ ದಿಲೀಪ್ ಅವರು ನವೆಂಬರ್ 25, 2016 ರಂದು ಕಾವ್ಯಾಳನ್ನು ವಿವಾಹವಾದರು.. ಈ ದಂಪತಿಗೆ ಅಕ್ಟೋಬರ್ 19, 2018 ರಂದು ಮಗಳು ಜನಿಸಿದ್ದಳು..
ಕಾವ್ಯಾ ಮಾಲಿವುಡ್‌ನ ಪ್ರಸಿದ್ಧ ನಟಿಯರಲ್ಲಿ ಒಬ್ಬರು, 75 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.. ನಟನೆಯ ಜೊತೆಗೆ, ಗಾಯಕಿ ಸಹ ಹೌದು…