RGV : The Kashhmir Files ಗೇಮ್ ಚೇಂಜರ್ , RRR ಅಲ್ಲ…!!!
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಯಾರು ಏನು ಅಂದ್ರೂ ತಲೆ ಕಡೆಸಿಕೊಳ್ಳದ ರಾಮ್ ಗೋಪಾಲ್ ವರ್ಮಾ ಒಂದು ರೀತಿಯಾಗಿ ಸೋಲೋ ಮ್ಯಾನ್ ಇದ್ದಂತೆ.
ತಮಗೆ ಇಷ್ಟವಾಗಿದ್ದನ್ನೇ ಮಾಡುತ್ತಾ ಸುದ್ದಿಯಾಗುತ್ತಲೇ ಇರುತ್ತಾರೆ. ಆತ ಮಾಡುವ ಟ್ವೀಟ್ ಎಷ್ಟೋ ಜನರ ನಿದ್ರೆ ಕದಿಯುತ್ತೆ… ಮಾಡೆಲ್ಗಳ ಜತೆ ಬಾರ್ ನಲ್ಲಿ ಪಾರ್ಟಿ ಮಾಡುವುದು ಮತ್ತು ತಮ್ಮದೇ ಸಿನಿಮಾಗಳಲ್ಲಿ ನಟಿಸಿರುವ ನಟಿಯರ ಜತೆ ಪಬ್ ಗಳಲ್ಲಿ ತಮ್ಮಿಷ್ಟ ಬಂದಂತೆ ಇರೋದು.. ಟ್ರೋಲ್ ಆಗೋದು ಇದೆಲ್ಲಾ ಅವರಿಗೆ ಅಭ್ಯಾಸ ಹಾಗೂ ಹವ್ಯಾಸವೂ ಆಗಿಬಿಟ್ಟಿದೆ..
ಇದೀಗ ರಾಮ್ ಗೋಪಾಲ್ ವರ್ಮಾ ಅವರು ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿರುವ “ದಿ ಕಾಶ್ಮೀರ ಫೈಲ್ಸ್ ಸಿನಿಮಾ” ಬಗ್ಗೆ ಅಚ್ಚರಿಯಾಗಿ ಮಾತನಾಡಿದ್ದಾರೆ.. ಈ ಸಿನಿಮಾ ನಿಜವಾದ ಗೇಮ್ ಚೇಂಜರ್ ಎಂದು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ರಾಮ್ ಗೋಪಾಲ್ ವರ್ಮಾ, ಮಾರ್ಚ್ 25 ರಂದು ವಿಶ್ವಾದ್ಯಂತ ಬಿಡುಗಡೆಯಾದ ಆರ್ ಆರ್ ಆರ್ ಸಿನಿಮಾ ಸಿನಿಮಾವನ್ನು ಆರಂಭದಲ್ಲಿ ಹೊಗಳಿದರು.
‘ನನ್ನ ಪ್ರಕಾರ ಆರ್‌ಆರ್‌ಆರ್ ಸಿನಿಮಾ ದೊಡ್ಡ ಸಿನಿಮಾ. ಆದರೆ ಅದು ಗೇಮ್ ಚೇಂಜರ್ ಅಲ್ಲ. ಏಕೆಂದರೆ ರಾಜಮೌಳಿ ಸಿನಿಮಾ ಸಮಾಜದಲ್ಲಿ ಬದಲಾವಣೆ ತರುತ್ತದೆ ಎಂದು ನಾನು ಭಾವಿಸುವುದಿಲ್ಲ.
ಆರ್‌ಆರ್‌ಆರ್ ಒಂದು ರೀತಿಯ ಚಿತ್ರವಾಗಿದ್ದು, ಇದು ಭಾರಿ ಬಜೆಟ್‌ನಲ್ಲಿ ನಿರ್ಮಾಣವಾಗಿದೆ ಮತ್ತು ನಾಲ್ಕೂವರೆ ವರ್ಷಗಳಿಗೊಮ್ಮೆ ಹೊರಬರುತ್ತದೆ. ಈ ರೀತಿಯ ಸಿನಿಮಾ ಮಾಡಲು ರಾಜಮೌಳಿ ಅವರಂತಹ ದೊಡ್ಡ ದಾಖಲೆ ಇರುವ ನಿರ್ದೇಶಕರು ಬೇಕು ಎಂದರು.
ಆದ್ರೆ ದಿ ಕಾಶ್ಮೀರ ಫೈಲ್ಸ್ ಸಿನಿಮಾ ನೋಡಿ. ಇದು ನಿಜವಾದ ಗೇಮ್ ಚೇಂಜರ್ ಸಿನಿಮಾವಾಗಿದೆ. ಇಂತಹ ಚಿತ್ರಗಳು ನಿರ್ದೇಶಕ-ನಿರ್ಮಾಪಕರಿಗೆ ಬೇಕಾದ ಆತ್ಮವಿಶ್ವಾಸವನ್ನು ನೀಡುತ್ತವೆ. ಅಂದರೆ ರೂ. 10 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಿಸಿದ್ರೆ 250 ಕೋಟಿ ಕಲೆಕ್ಷನ್ ಮಾಡಿದಾಗೆ ಎಂದಿದ್ದಾರೆ.