ಸಲಾರ್ ಫ್ಯಾನ್ಸ್ ಗೆ ಬೇಸರ,… ಮುಂದೂಡಿಕೆಯಾದ ಶೂಟಿಂಗ್
ಸಲಾರ್ ಫ್ಯಾನ್ಸ್ ಗೆ ಬೇಸರ,… ಮುಂದೂಡಿಕೆಯಾದ ಶೂಟಿಂಗ್
ಪ್ರಭಾಸ್ ಅವರ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ರಾಧೆ ಶ್ಯಾಮ್ ಇತ್ತೀಚೆಗೆ ರಿಲೀಸ್ ಆಗಿದ್ದು ಫ್ಲಾಪ್ ಆಗಿದೆ…. ಇದೀಗ ಪ್ರಭಾಸ್ ಅವರ ಅಭಿಮಾನಿಗಳಿಗೆ ಸಲಾರ್ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ..
ಆದಿಪುರುಷ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಸಿನಿಮಾಗಳು ಯಾವಾಗ ಥಿಯೇಟರ್ ಗೆ ಬರುತ್ತವೆ ಎಂದು ಅಭಿಮಾನಿಗಳೆಲ್ಲ ಕಾತರದಿಂದ ಕಾಯುತ್ತಿದ್ದಾರೆ.
ಆದ್ರೆ ಪ್ರಭಾಸ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಗಿರಕಿ ಹೊಡೆಯುತ್ತಿದೆ.
ರಾಧೇಶ್ಯಾಮ ಚಿತ್ರ ಬಿಡುಗಡೆಯಾದ ನಂತರ ಪ್ರಭಾಸ್ ಮೊಣಕಾಲು ಶಸ್ತ್ರಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದು ಗೊತ್ತಿರುವ ವಿಚಾರವೇ. ಈ ಹಿನ್ನೆಲೆಯಲ್ಲಿ ಸೋಲಾರ್ ಶೂಟಿಂಗ್ ಸ್ಥಗಿತಗೊಂಡಿತ್ತು.
ಪ್ರಭಾಸ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಎರಡು ತಿಂಗಳು ಬೇಕು ಎಂದು ಆರಂಭದಲ್ಲಿ ಹೇಳಲಾಗಿತ್ತು.
ಆದರೆ, ಇತ್ತೀಚಿನ ಸುದ್ದಿಯ ಪ್ರಕಾರ, ಪ್ರಭಾಸ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ ಒಂದು ತಿಂಗಳು ತೆಗೆದುಕೊಳ್ಳುತ್ತದೆ.
ಅಂದರೆ ಸುಮಾರು 3 ತಿಂಗಳ ಕಾಲ ಪ್ರಭಾಸ್ ರೆಸ್ಟ್ ಮೋಡ್ ನಲ್ಲಿ ಇರಲಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ.
ಇದರಿಂದ ಸಲಾರ್ ಸಿನಿಮಾ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ. ಯಾಕೆಂದರೆ ಇಲ್ಲಿಯವರೆಗೆ ಸೋಲಾರ್ ಶೂಟಿಂಗ್ ಶೇ.60ರಷ್ಟು ಕೂಡ ಮುಗಿದಿಲ್ಲ.
ನಿರ್ಮಾಪಕರು ಮುಂದಿನ ವರ್ಷ ಸಲಾರ್ ಸಿನಮಾವನ್ನು ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ ಎಂದು ಚರ್ಚೆಯಾಗ್ತಿದೆ.