ಸೋನಂ ಕಪೂರ್ ಮನೆಯಲ್ಲಿ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ಕಳವು..!!!
ಬಾಲಿವುಡ್ ನ ಪ್ರಮುಖ ಸ್ಟಾರ್ ಹೀರೋಯಿನ್ ಸೋನಂ ಕಪೂರ್ ಸದ್ಯದಲ್ಲೇ ತಾಯಿಯಾಗಲಿದ್ದಾರೆ.
ಇದೇ ವಿಚಾರವಾಗೇ ಸದ್ಯಕ್ಕೆ ಸೋನಂ ಸುದ್ದಿಯಲ್ಲಿದ್ದರು.. ಆದ್ರೀಗ ಅವರು ಚರ್ಚೆಯಲ್ಲಿರೋದು ಬೇರೆಯದ್ದೇ ವಿಚಾರಕ್ಕೆ. ಬಾಲಿವುಡ್ ನಟಿ ಸೋನಂ ಕಪೂರ್ ಅವರ ನವದೆಹಲಿಯಲ್ಲಿರುವ ಮನೆ ಕಳ್ಳತನವಾಗಿದೆ.
ಸುಮಾರು 1.41 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನ ಕಳ್ಳರು ದೋಚಿದ್ದಾರೆ. ಸೋನಂ ಅವರ ಅತ್ತೆ ಮತ್ತು ಆಕೆಯ ಮ್ಯಾನೇಜರ್ ರಿತೇಶ್ ಗೌರಾ ತುಘಲಕ್ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೈ ಪ್ರೊಫೈಲ್ ಕೇಸ್ ನಿಂದಾಗಿ ಪೊಲೀಸರ ಮೇಲೆ ಒತ್ತಡ ಹೇರಲಾಗಿದೆ, ಇದೇ ವೇಳೆ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.
ಸೋನಂ ಅವರ ಅತ್ತೆ ಸರಳ ಅಹೂಜಾ ಫೆಬ್ರವರಿ 23 ರಂದು ತುಘಲಕ್ ರಸ್ತೆ ಪೊಲೀಸ್ ಠಾಣೆಗೆ ಬಂದು ಮನೆಯಲ್ಲಿ 1.41 ಕೋಟಿ ಮೌಲ್ಯದ ನಗದು ಮತ್ತು ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದಾರೆ.
ಮನೆಯಲ್ಲಿ ಸುಮಾರು 25 ಕೆಲಸದಾಳುಗಳು ಮತ್ತು 9 ಜನ ಕೇರ್ ಟೇಕರ್ ಗಳಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.