Beast : ಕುವೈತ್ ನ ನಂತರ ಕತಾರ್ ನಲ್ಲೂ ಬ್ಯಾನ್..!!
ದಳಪತಿ ವಿಜಯ್ ನಟನೆಯ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಬೀಸ್ಟ್ ಗೆ ಕುವೈತ್ ನಲ್ಲಿ ನಿರ್ಬಂಧ ವಿಧಿಸಿದ ನಂತರ ಇದೀಗ ಕತಾರ್ ನಲ್ಲೂ ನಿಷೇಧ ಹೇರಲಾಗಿದೆ..
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಬೀಸ್ಟ್ ಏಪ್ರಿಲ್ 13 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಈ ಹಿಂದೆ, ಇಸ್ಲಾಮಿಕ್ ಭಯೋತ್ಪಾದನೆಯ ಚಿತ್ರ ಎಂದು ಅಭಿಪ್ರಾಯ ಪಟ್ಟು ಕುವೈತ್ ಸರ್ಕಾರ ಬೀಸ್ಟ್ ಅನ್ನು ನಿಷೇಧಿಸಿತು. ಈಗ ಕತಾರ್ ನಲ್ಲಿ ಬ್ಯಾನ್ ಆಗಿದೆ. ಬೀಸ್ಟ್ ಏಪ್ರಿಲ್ 13 ರಂದು ಗ್ರ್ಯಾಂಡ್ ರಿಲೀಸ್ ಆಗಲಿದೆ. ಟ್ರೇಲರ್ ನೋಡಿದ್ರೆ ಇದೊಂದು ಮಾಲ್ ಹೈಜಾಕ್ ಥ್ರಿಲ್ಲಿಂಗ್ ಡ್ರಾಮಾ ಅನ್ನೋದು ಗೊತ್ತಾಗುತ್ತೆ. ಈ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ದಳಪತಿ ವಿಜಯ್ ಅವರ ಬೀಸ್ಟ್ ಸಿನಿಮಾದ ಗ್ರ್ಯಾಂಡ್ ರಿಲೀಸ್‌ಗೆ ಉಳಿದಿರೋದು ಇನ್ನೆರೆಡೇ ದಿನಗಳು.
ದಳಪತಿ ವಿಜಯ್ ಅಭಿನಯದ ಬೀಸ್ಟ್ ಕತಾರ್‌ನಲ್ಲಿಯೂ ನಿಷೇಧಿಸಲಾಗಿದೆ. ಚಿತ್ರದ ಟ್ರೈಲರ್ ಇಸ್ಲಾಮಿಕ್ ಭಯೋತ್ಪಾದನೆಯನ್ನು ತೋರಿಸುತ್ತದೆ, ಇದು ಕತಾರ್ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯ ಬಂದಿದೆ.. ಆದ್ದರಿಂದ ಅವರು ಬೀಸ್ಟ್ ಅನ್ನು ನಿಷೇಧಿಸಿದ್ದಾರೆ. ಈ ಹಿಂದೆ, ಇದೇ ಕಾರಣಕ್ಕಾಗಿ ಕುವೈತ್‌ನಲ್ಲಿ ವಿಷ್ಣು ವಿಶಾಲ್ ಅವರ ಎಫ್‌ಐಆರ್ ಮತ್ತು ದುಲ್ಕರ್ ಸಲ್ಮಾನ್ ಅವರ ಕುರುಪ್ ಸಿನಿಮಾವನ್ನು ನಿಷೇಧಿಸಲಾಗಿತ್ತು.
After #Kwait , #Beast is banned in #Qatar too..
Recent Tamil movie #FIR was banned in both the countries too..
— Ramesh Bala (@rameshlaus) April 9, 2022
Beast Banned in quatar