Beast : ಮೊದಲ ರಿವ್ಯೂ ಇಲ್ಲಿದೆ … ವಿಜಯ್ ವೃತ್ತಿಜೀವನದ ದಿ ಬೆಸ್ಟ್ ಸಿನಿಮಾ..!!
ಏಪ್ರಿಲ್ 13 ರಂದು ರಿಲೀಸ್ ಆಗಲಿರುವ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾ ದಳಪತಿ ವಿಜಯ್ ನಟನೆಯ Beast ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ..
ಈ ಸಿನಿಮಾದ ಬಗ್ಗೆ ಮೊದಲ ರಿವ್ಯೂ ಸಿಕ್ಕಾಗಿದೆ…
ದಳಪತಿ ವಿಜಯ್ ಅವರ ಬಹು ನಿರೀಕ್ಷಿತ ಚಿತ್ರ ಬೀಸ್ಟ್ ಗೆ ಕೋಲಮಾವು ಕೋಕಿಲ ಖ್ಯಾತಿಯ ನೆಲ್ಸನ್ ದಿಲೀಪ್ ಕುಮಾರ್ ಅವರ ನಿರ್ದೇಶನವಿದೆ.
ಹೆಸರಾಂತ ನಿರ್ಮಾಣ ಬ್ಯಾನರ್ ಸನ್ ಪಿಕ್ಚರ್ಸ್ ನಿರ್ಮಿಸಿದೆ..
ಇದೀಗ ಈ ಸಿನಿಮಾದ ಬಗ್ಗೆ ಓವರ್ ಸೀಸ್ ವಿಮರ್ಶಕರಾದ ಸೆನ್ಸಾರ್ ಮಂಡಳಿಯ ಸದಸ್ಯ ಉಮೈರ್ ಸಂಧು ರಿವ್ಯೂ ನೀಡಿದ್ದಾರೆ.. ಟ್ವೀಟ್ ಮಾಡಿರುವ ಅವರು ಬೀಸ್ಟ್ ಸಿನಿಮಾದಲ್ಲಿ ವಿಜಯ್ ಅವರ ಅಭಿನಯವು ಚಪ್ಪಾಳೆಗೆ ಅರ್ಹವಾಗಿದೆ. #Beast ಒಂದು ಆಕ್ಷನ್-ಥ್ರಿಲ್ಲರ್ ಆಗಿದ್ದು ಅದು ನಿಮ್ಮನ್ನು ಸಿನಿಮಾಲ್ಲಿ ಆಳವಾಗಿ ಇಳಿಯುವಂತೆ ಮಾಡುತ್ತದೆ.. ರೋಮಾಂಚನಗೊಳಿಸುತ್ತದೆ. ಇಂತಹ ಆಕರ್ಷಕ ಆವರಣ ಮತ್ತು ರೇಜರ್- ಶಾರ್ಪ್ ಚಿತ್ರಕಥೆಗೆ ಧನ್ಯವಾದಗಳು. ಸಿನಿಮಾ ಮಾತ್ರ ಅತ್ಯದ್ಭುತವಾಗಿದೆ ಎಂದಿದ್ಧಾರೆ..
ಇದೇ ವೇಳೆ ತಮಿಳುನಾಡಿನಲ್ಲಿ ಬೀಸ್ಟ್ ಸಿನಿಮಾ 200 ಕೋಟಿ ಕ್ಲಬ್ ಸೇರಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ. “#ಬೀಸ್ಟ್ #ವಿಜಯ್ ಅವರ ವೃತ್ತಿಜೀವನದ ಸ್ಟೈಲಿಶ್ ಮತ್ತು ಅತ್ಯುತ್ತಮ ಚಲನಚಿತ್ರವಾಗಿದೆ. ಈ ಎಪಿಕ್ ಥ್ರಿಲ್ಲರ್ ಸಿನಿಮಾ ತಮಿಳುನಾಡಿನಲ್ಲಿ 200 ಕೋಟಿ ಕ್ಲಬ್‌ಗೆ ಸೇರಲಿದೆ.. ಬ್ಲಾಕ್ ಬಸ್ಟರ್ ಹಿಟ್ ಆಗಲಿದೆ ಎಂದು ಬರೆದಿದ್ದಾರೆ”.
ಸಿನಿಮಾದಲ್ಲಿ ಪೂಜಾ ಹೆಗ್ಡೆ , ಅಪರ್ಣಾ ದಾಸ್, ಯೋಗಿ ಬಾಬು, ಶೈನ್ ಟಾಮ್ ಚಾಕೊ, ಜಾನ್ ವಿಜಯ್, ವಿಟಿವಿ ಗಣೇಶ್, ಲಿಲ್ಲಿಪುಟ್ ಫರುಕಿ ,ಅಂಕುರ್ ಅಜಿತ್ ವಿಕಲ್ ಸೇರಿದಂತೆ ದೊಡ್ಡ ತಾರಾಗಣವಿದೆ..
https://twitter.com/UmairSandu/status/1513119778633916417?ref_src=twsrc%5Etfw%7Ctwcamp%5Etweetembed%7Ctwterm%5E1513119778633916417%7Ctwgr%5E%7Ctwcon%5Es1_&ref_url=https%3A%2F%2Fwww.filmibeat.com%2Ftamil%2Fnews%2F2022%2Fbeast-first-review-out-vijay-s-hijack-drama-gets-thunderous-response-and-a-four-star-rating-332846.html
https://twitter.com/UmairSandu/status/1513046763854249991?ref_src=twsrc%5Etfw%7Ctwcamp%5Etweetembed%7Ctwterm%5E1513046763854249991%7Ctwgr%5E%7Ctwcon%5Es1_&ref_url=https%3A%2F%2Fwww.filmibeat.com%2Ftamil%2Fnews%2F2022%2Fbeast-first-review-out-vijay-s-hijack-drama-gets-thunderous-response-and-a-four-star-rating-332846.html