‘ಬಂಬೂ ಸವಾರಿ’ಗೆ ಸುನಿ..ಕಿಟ್ಟಿ..ಯಂಗ್ ಟೈಗರ್ ಸಾಥ್…ಜಂಬೂ ಸವಾರಿ ಮುಹೂರ್ತದ ಝಲಕ್
ಕೋಲಾರ, ಇಂಗ್ಲಿಷ್ ಮಂಜ ಸಿನಿಮಾದ ಸಾರಥಿ ಆರ್ಯ ಎನ್.ಮಹೇಶ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಬಂಬೂ ಸವಾರಿ ಸಿನಿಮಾದ ಮುಹೂರ್ತ ಇವತ್ತು ಬೆಂಗಳೂರಿನ ಗುಂಡಾಂಜನೇಯ ದೇಗುಲದಲ್ಲಿ ಅದ್ಧೂರಿಯಾಗಿ ನೆರವೇರಿತು. ಕನ್ನಡದ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ ಸಿಂಪಲ್ ಸುನಿ, ನಟ ಶ್ರೀನಗರ ಕಿಟ್ಟಿ, ವಿನೋದ್ ಪ್ರಭಾಕರ್ ಹಾಗೂ ನಿರ್ದೇಶಕ ಕೆ.ಎಂ.ಚೈತನ್ಯ ಯುವ ಪ್ರತಿಭೆಗಳ ಕನಸುಗಳಿಗೆ ಸಾಥ್ ನೀಡಿದರು.
ಸಿಂಪಲ್ ಸುನಿ, ಹೆಸರಲ್ಲಿಯೇ ಪಾಸಿಟಿವ್ ಇದೆ. ಸವಾರಿ ಅನ್ನುವ ಸಿನಿಮಾ ಮೈಲುಗಲ್ಲು ಸಾಧಿಸಿತ್ತು. ಮಹೇಶ್ ಪ್ರಚಲಿತ ವಿದ್ಯಮಾನಗಳ ಮೇಲೆ ಸಿನಿಮಾ ಕಥೆ ಹೇಳ್ತಾರೆ. ವರ್ಧನ್ ಒಳ್ಳೆ ಕಲಾವಿದ. ಹೊಸತಂಡದಲ್ಲಿ ಇರುವವರಿಗೆ ಎಲ್ಲರಿಗೂ ಶುಭ ಹಾರೈಕೆಗಳು. ಸವಾರಿ ನೂರು ದಿನ ಓಡಲಿ ಎಂದು ಹಾರೈಸಿದರು.
ಶ್ರೀನಗರ ಕಿಟ್ಟಿ, ಮಹೇಶ್ ಮುಂದಿನ ಪ್ರಯತ್ನ. ನಾನು ಜಂಬೂ ಸವಾರಿ ಅಂತಾ ಅಂದುಕೊಂಡಿದ್ದೆ. ಟೈಟಲ್ ಹೇಳಿದ ಮೇಲೆ ಬಂಬೂ ಸವಾರಿ ಅಂತಾ ಗೊತ್ತಾಯ್ತು. ತಂತ್ರಜ್ಞನರು, ಕಲಾವಿದರು ಎಲ್ಲರಿಗೂ ಒಳ್ಳೆದಾಲಿ ಎಂದು ಶುಭ ಕೋರಿದರು.
ವಿನೋದ್ ಪ್ರಭಾಕರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಆಶೀರ್ವಾದದೊಂದಿಗೆ ಸಿನಿಮಾ ಪ್ರಾರಂಭ ಮಾಡಿದ್ದಾರೆ. ನಾನು ಕೂಡ ಕಿಟ್ಟಪ್ಪನ ತರಹ ಜಂಬೂ ಸವಾರಿ ಅಂದುಕೊಂಡಿದ್ದೆ. ನವಗ್ರಹ ಮಾಡುವಾಗ ಜಂಬೂ ಸವಾರಿ ಫೇಮಸ್ ಆಗಿತ್ತು. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ಬೆಸ್ಟ್ ವಿಷಸ್ ತಿಳಿಸಿದರು.
ನಿರ್ದೇಶಕ ಕೆ.ಎಂ.ಚೈತನ್ಯ, ಒಳ್ಳೆ ದಿನ ಸಿನಿಮಾ ಆರಂಭಿಸಿದ್ದೀರ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.
ಬಂಬೂ ಸವಾರಿ ಸಿನಿಮಾದಲ್ಲಿ ತಾಂಡವ ರಾಮ, ವರ್ಧನ್, ದೀಪಕ್ ವಿ ಮುಖ್ಯಭೂಮಿಕೆಯಲ್ಲಿ ನಟಿಸ್ತಿದ್ದು, ಆದ್ಯ ಪ್ರಿಯಾ, ಅಭಿ ಸಾರಿಕಾ ನಾಯಕಿಯಾರಾಗಿ ಬಣ್ಣ ಹಚ್ಚಿದ್ದು, ಉಳಿದಂತೆ ಕವಿರತ್ನ ಡಾ ವಿ ನಾಗೇಂದ್ರ ಪ್ರಸಾದ್, ನಾಗೇಂದ್ರ ಅರಸ್, ಬಾಲರಾಜ್ ವಾಡಿ, ಷರೀಫ್ ಕಲಾ ಬಳಗದಲ್ಲಿದೆ.
ಬಿ ಆರ್ ಹೇಮಂತ್ ಕುಮಾರ್ ಸಂಗೀತ, ಮಂಜು ಛಾಯಾಗ್ರಾಹಣ, ಗಿರೀಶ್ ಕುಮಾರ್ ಕೆ ಸಂಕಲನ,
ಕವಿರತ್ನ ಡಾ ವಿ ನಾಗೇಂದ್ರ ಪ್ರಸಾದ್ ಸಿಂಪಲ್ ಸುನಿ, ವಿಜಯ್ ಟಿ ಪಿ ಸಾಹಿತ್ಯ, ವಿಜಯ್ ಟಿ ಪಿ ಸಹ ನಿರ್ದೇಶಕ, ವೇದಾನಂದ್ ಸಹಾಯಕ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇಂಗ್ಲಿಷ್ ಮಂಜ ಸಿನಿಮಾದಲ್ಲಿ ಕೆಲಸ ಮಾಡ್ತಿರುವ 90ರಷ್ಟು ಟೆಕ್ನಿಷಿಯನ್ ಬಂಬೂ ಸವಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಚಿತ್ರಕ್ಕೆ ಇನ್ಫ್ಯಾಂಟ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಡೇವಿಡ್ ಆರ್ ಬಂಡವಾಳ ಹೂಡಿದ್ದಾರೆ.
ಬಂಬೂ ಸವಾರಿ ಕಲ್ಟ್ ಜಾನರ್ ಸಿನಿಮಾವಾಗಿದ್ದು, ಬೆಂಗಳೂರು ಸುತ್ತಮುತ್ತ ಶೂಟಿಂಗ್ ಮಾಡಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.