KGF 2 : ಸವಾಲಾಕೋಕು ಮೀಟರ್ ಬೇಕು : ರಾಕಿ ಭಾಯ್ ಗೆ ಹೆದರಿ ರಿಲೀಸ್ ದಿನಾಂಕ ಮುಂದೂಡಿದ Jercy
ಈಗಿರುವ ಸೌತ್ ಸಿನಿಮಾಗಳ ಪವರ್ ಮುಂದೆ ಬಾಲಿವುಡ್ ಸಿನಿಮಾಗಳು ಏನೇನೂ ಅಲ್ಲ,,, ಬಾಹುಬಲಿ , ಪುಷ್ಪ , RRR , KGF ನಿಂದ ಈಗಾಗಲೇ ಬಾಲಿವುಡ್ ಡಬ್ಬಿ ಅನ್ನೋದು ಸಾಬೀತಾಗಿದೆ..
ಪುಷ್ಪ ಮುಂದೆ 83 ಸಿನಿಮಾ ಮಕಾಡೆ ಮಲಗಿತ್ತು , KGF ಮುಂದೆ ಬಾಲಿವುಡ್ ಬಾಕ್ಸ್ ಆಫೀಸ್ ಸರದಾರ , ಕಿಂಗ್ ಖಾನ್ ಝೀರೋ ಹೆಸರು ಝೀರೋದಂತೆಯೇ ಫ್ಲಾಪ್ ಆಯ್ತು.. RRR ಸಿನಿಮಾ ಮುಂದೆ ಅಟ್ಯಾಕ್ ಮಕಾಡೆ ಮಲಗಿತು..
ಒಂದು ಕಾಲದಲ್ಲಿ ಸೌತ್ ಸಿನಿಮಾಗಳು ಅಂದ್ರೆ ಕೇವಲವಾಗಿ ನೋಡ್ತಿದ್ದ ಬಾಲಿವುಡ್ ಮಂದಿ ಈಗ ಸೌತ್ ನಿರ್ದೇಶಕರತ್ತ ಮುಖ ಮಾಡಿದ್ದಾರೆ.. ಸೌತ್ ಸಿನಿಮಾಗಳ ರೀಮೇಕ್ ನಿಂದಷ್ಟೇ ಗೆಲ್ಲೋಕೆ ಸಾಧ್ಯ ಎನ್ನುವಷ್ಟರ ಮಟ್ಟಿಗೆ ರೀಮೇಕ್ ಸಿನಿಮಾಗಳನ್ನ ಮಾಡ್ತಿದ್ದಾರೆ..
ಸೌತ್ ಸ್ಟಾರ್ ಗಳಿದ್ರೆ ಸಿನಿಮಾ ಹಿಟ್ ಆಗುವ ನಿರೀಕ್ಷೆಯಲ್ಲಿ ಬಾಲಿವುಡ್ ಸಿನಿಮಾಗಳಲ್ಲಿ ಸೌತ್ ಸ್ಟಾರ್ ಗಳನ್ನ ತೋರಿಸಲು ಪ್ರಯತ್ನಿಸುತ್ತಿದ್ದಾರೆ.. ಇದಕ್ಕೆ ತಾಜಾ ಉದಾಹರಣೆಯೇ ಬ್ರಹ್ಮಾಸ್ತ್ರ..
ನಮ್ಮ ಕೆಜಿಎಫ್ 2 ಸಿನಿಮಾ ಮುಂದೆ ಕಾಂಪಿಟೇಶನ್ ಕೊಡೋಕಾಗದೇ ಅಮಿರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನೇ ಪೋಸ್ಟ್ ಪೋನ್ ಮಾಡಲಾಯ್ತು.. ಆದ್ರೆ ಶಾಹಿದ್ ನಟನೆಯ ಬಾಲಿವುಡ್ ಸಿನಿಮಾ ಜೆರ್ಸಿ ಕೆಜಿಎಫ್ 2 ಗೆ ಟಕ್ಕರ್ ಕೊಡಬಲ್ಲೇ ಅನ್ನೋ ಭ್ರಮೆಯಲ್ಲಿತ್ತು.. ಆದ್ರೆ ಅದ್ಯಾವಾಗ ಕೆಜಿಎಫ್ ಪ್ರಮೋಷನ್ ನ ತಾಕತ್ತು ಮುಂಬೈನಲ್ಲಿ ಕೆಜಿಎಫ್ ಕ್ರೇಜ್ ಗೊತ್ತಾಯ್ತೋ ,,, ಜೆರ್ಸಿಗೆ ನಡುಕ ಶುರುವಾಗಿ ಬಿಟ್ಟಿದೆ…
ಹೀಗಾಗಿಯೇ ನೋಡಿ ಕೇವಲ ಮೂರೇ ಮೂರು ದಿನಗಳಿರೋವಾಗ್ಲೇ ಸಿನಿಮಾ ರಿಲೀಸ್ ದಿನಾಂಕವನ್ನೇ ಮುಂದೂಡಿಬಿಟ್ಟಿದ್ಧಾರೆ ಮೇಕರ್ಸ್… ಈ ಮೂಲಕ KGF 2 ಮುಂದೆ ಕಾಂಪಿಟೇಷನ್ ಕೊಡೋದು ಇಂಪಾಸಿಬಲ್ ,,, ನಮ್ಮ ಸೇಫ್ಟಿ ಮುಖ್ಯ ಎನ್ನುವ ನಿಲುವನ್ನ ಮೇಕರ್ಸ್ ತಾಳಿದ್ದು ಸಿನಿಮಾ ತಂಡಕ್ಕೆ ಈ ಮೂಲಕ ಮತ್ತಷ್ಟು ಮುಖಭಂಗವೇ ಆಗಿದೆ..
ಯಾಕಂದ್ರೆ ಈ ಹಿಂದೆ ರಿಲೀಸ್ ಡೇಟ್ (April 14) ಅನೌನ್ಸ್ ಮಾಡಿ ಎಲ್ಲರೂ ಹುಬ್ಬೇರಿಸಿ ,, ಟೀಕಿಸುವಂತೆ ಮಾಡಿಕೊಂಡಿದ್ದ ಸಿನಿಮಾದ ನಿರ್ದೇಶಕರು ,,, ಜೆರ್ಸಿಗೆ KGF 2 ಕಾಂಪಿಟೇಷನ್ ಅಲ್ವೇ ಅಲ್ಲ ಎಂದಿದ್ದರು.. ನಾವು KGF 2 ಜೊತೆಗೆ ಗೆಲ್ಲುತ್ತೇವೆ ಎಂದಿದ್ದರು..
KGF 2 – beast – cinibazaar
ಇತ್ತೀಚೆಗೆ ಶಾಹಿದ್ ಇದೇ ಮಾತನ್ನೇ ಹೇಳಿದ್ರು.. ಆಗ ಬೀಸ್ಟ್ ಸಿನಿಮಾವನ್ನ , ವಿಜಯ್ ರನ್ನ ಹೊಗಳಿದ್ರು.. KGF 2 ಗೆ ಕೇವಲ ಆಲ್ ದ ಬೆಸ್ಟ್ ಹೇಳಿದ್ರು.. ಆದ್ರೀಗ ಅವರೇ ಹಿಂದೆ ಸರಿದುಬಿಟ್ಟಿದ್ದಾರೆ..
ಕೇವಲ ಕೆಜಿಎಫ್ ಅಷ್ಟೇ ಅಲ್ಲ ತಮಿಳಿನ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರ ನಟನೆಯ Beast ಸಿನಿಮಾ ಕೂಡ ಏಪ್ರಿಲ್ 13 ಅಂದ್ರೆ KGF 2 ರಿಲೀಸ್ ಗೂ ಒಂದು ದಿನ ಮೊದಲು ಬಿಡುಗಡೆಯಾಗ್ತಿದೆ…
ಬೀಸ್ಟ್ ಮತ್ತೆ KGF 2 ನಡುವೆ ಭಾರೀ ಫೈಟ್ ಇರುತ್ತೆ… ಇವೆರೆಡು ದೈತ್ಯ ಸಿನಿಮಾಗಳ ನಡುವೆ ಜೆರ್ಸಿ ಅನ್ನೋದು ಲೆಕ್ಕಕ್ಕೇ ಇಲ್ಲ ಯಾರಿಗೂ.. ಇವರೆಡರ ನಡುವೆ ಸಿಲುಕಿ ಒದ್ದಾಡಿ ಸಾಯೋದು ಖಾತ್ರಿ ಎನ್ನಿಸಿ ಜೆರ್ಸಿ ಸಿನಿಮಾದ ರಿಲೀಸ್ ದಿನಾಂಕವನ್ನ ಏಪ್ರಿಲ್ 22 ಕ್ಕೆ ಮುಂದೂಡಲಾಗಿದೆ..
ಈ ಮೂಲಕ ಇನ್ಮುಂದೆ ಬಾಲಿವುಡ್ ಹವಾ ನಡೆಯೋದಿಲ್ಲ.. ಏನಿದ್ರೂ ಸೌತ್ ದೇ ಅಬ್ಬರ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ..