KGF 2 – RRR : ಯಶ್ ಹೊಗಳಿದ ಮೀರಾ – NTR ಅಭಿಮಾನಿಗಳಿಂದ ಟ್ರೋಲ್ ಆಗಿದ್ದೇಕೆ..??
ಟಾಲಿವುಡ್ ನಲ್ಲಿ ಜ್ಯೂ. NTR ಸೂಪರ್ ಸ್ಟಾರ್… ಸ್ಯಾಂಡಲ್ ವುಡ್ ನಲ್ಲಿ ಯಶ್ ಸೂಪರ್ ಸ್ಟಾರ್.. ಇಬ್ಬರೂ ಸೌತ್ ಸೂಪರ್ ಸ್ಟಾರ್ ಗಳು.. ಇಬ್ಬರೂ ಪ್ಯಾನ್ ಇಂಡಿಯಾ ಸ್ಟಾರ್ ಗಳೇ.. ತೆಲುಗು , ಕನ್ನಡ ಮಾತ್ರವಲ್ದೇ ಇಬ್ಬರೀಗೂ ಭಾರತದಾದ್ಯಂತ ದೊಡ್ಡ ಅಭಿಮಾನಿಗಳ ಬಳಗವಿದೆ.. ಕ್ರೇಜ್ ಇದೆ.. ಇಬ್ಬರಿಗೂ ಪವರ್ ಫುಲ್ ಫ್ಯಾಂಡಂ ಇದೆ… ಅದ್ರಲ್ಲೂ ಇತ್ತೀಚೆಗೆ RRR ಸಿನಿಮಾ ಬಳಿಕ ಎನ್ ಟಿ ಆರ್ ಕ್ರೇಜ್ ಹೆಚ್ಚಾಗಿದೆ…
ಇತ್ತ ಕೆಜಿಎಫ್ 2 ಗಾಗಿ ಜನ ಕಾಯ್ತಾ ಇದ್ದಾರೆ.. ಇದೆಲ್ಲದರ ನಡುವೆ ಸೆಲೆಬ್ರಿಟಿಗಳು , ಅದ್ರಲ್ಲೂ ಬಾಲಿವುಡ್ ಸ್ಟಾರ್ ಗಳು ಸಹ ,,, ಕೆಜಿಎಫ್ 2 , RRR , ಪುಷ್ಪ ಸಿನಿಮಾಗಳನ್ನ ಹಾಡಿ ಹೊಗಳುತ್ತಿದ್ದಾರೆ..
ಆದ್ರೆ ನಟಿ ಮೀರಾ ಚೋಪ್ರಾ ಯಶ್ , ಕೆಜಿಎಫ್ 2 ಸಿನಿಮಾ , ರಾಮ್ ಚರಣ್ , ಅಲ್ಲು ಅರ್ಜುನ್ ಅವರನ್ನ ಹೊಗಳುವ ಭರದಲ್ಲಿ NTR ಅವರನ್ನ ಮರೆತುಬಿಟ್ಟಿದ್ದಾರೆ.. ಇದೇ ಎನ್ ಟಿ ಆರ್ ಅಭಿಮಾನಿಗಳ ಕಣ್ಣು ಕೆಂಪಾಗಿಸಿದೆ..
ಸೋಷಿಯಲ್ ಮೀಡಿಯಾದಲ್ಲಿ ಮೀರಾ ಚೋಪ್ರಾ ಮಾಡಿರುವ ಪೋಸ್ಟ್ ನಲ್ಲಿ ಅಂತಹದ್ದೇನಿದೆ..??
ದಕ್ಷಿಣದ ಸ್ಟಾರ್ ನಟರು ಇಡೀಯ ಭಾರತದಲ್ಲಿ ಗುರುತು ಸಂಪಾದಿಸುತ್ತಿರುವುದು ಖುಷಿ ತಂದಿದೆ. ಅವರಿಂದ ಎಲ್ಲರೂ ಕಲಿಯಬೇಕಾದುದು ಸಾಕಷ್ಟಿದೆ. ಪ್ರತಿಭೆ, ಮಾನವೀಯತೆ ಹಾಗೂ ಸಿನಿಮಾದ ಬಗ್ಗೆ ಅವರಿಗಿರುವ ಬದ್ಧತೆ, ಪ್ರೀತಿಯನ್ನು ಇತರೆ ಉದ್ಯಮಗಳವರು ಕಲಿಯಬೇಕು ಎಂದಿದ್ದಾರೆ.
ಅಲ್ಲು ಅರ್ಜುನ್ , ಪ್ರಭಾಸ್, ರಾಮ್ ಚರಣ್ ಹಾಗೂ ಯಶ್ ಹೆಸರನ್ನು ಮೀರಾ ಚೋಪ್ರಾ ಉಲ್ಲೇಖಿಸಿದ್ದಾರೆ.
ಆದ್ರೆ ಸಿನಿಮಾ ಅತಿ ದೊಡ್ಡ ಹಿಟ್ ಆದ ಕಾರಣ ರಾಮ್ ಚರಣ್ ಹೆಸರನ್ನು ತಮ್ಮ ಟ್ವೀಟ್‌ನಲ್ಲಿ ಸೇರಿಸಿರುವ ಈ ನಟಿ ಅದೇ ಸಿನಿಮಾದಲ್ಲಿ ನಟಿಸಿರುವ ನಟ ಜೂ ಎನ್‌ಟಿಆರ್ ಹೆಸರನ್ನು ಟ್ವೀಟ್‌ಕೈ ಬಿಟ್ಟಿದ್ದಾರೆ. ಇದು ಜೂ ಎನ್‌ಟಿಆರ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮೀರಾ ಚೋಪ್ರಾ ಟ್ವೀಟ್‌ಗೆ NTR ಅಭಿಮಾನಿಗಳು ನಾನಾ ರೀತಿಯ ಪ್ರತಿಕ್ರಿಯೆ ನೀಡ್ತಿದ್ಧಾರೆ.. ಅಲ್ಲದೇ ಇವರ ಟ್ವೀಟ್ ಗೆ ದೀಪಿಕಾ ಪಡುಕೋಣೆಯ ಸಂದರ್ಶನವೊಂದರ ಗ್ಲಿಂಪ್ಸ್ ಹಂಚಿಕೊಂಡಿದ್ದಾರೆ.. ಈ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ, ”ನನಗೆ ಜೂ ಎನ್‌ಟಿಆರ್ ಜೊತೆ ಹಾಗೂ ಅಲ್ಲು ಅರ್ಜುನ್ ಜೊತೆ ನಟಿಸುವ ಆಸೆಯಿದೆ. ಅದರಲ್ಲೂ ನಾನು ಜೂ ಎನ್‌ಟಿಆರ್ ಅವರ ದೊಡ್ಡ ಅಭಿಮಾನಿ ಆಗಿಬಿಟ್ಟಿದ್ದೇನೆ. ಅವರದ್ದು ಅದ್ಭುತವಾದ ವ್ಯಕ್ತಿತ್ವ ಹಾಗೂ ನಟನೆ. ಅವರ ಅಭಿಮಾನಿ ನಾನು ಎಂದಿದ್ದಾರೆ.