KGF 2 : ರಿಲೀಸ್ ಗೂ ಮೊದಲೇ ದಾಖಲೆಗಳು ಛಿದ್ರ ಛಿದ್ರ… ಇನ್ನೂ ಬಂದ್ ಮೇಲೆ…. ಧೂಳೆಬ್ಬಿಸೋದೇ..!!!
ಬಾಕ್ಸ್ ಆಫೀಸ್ ನಲ್ಲಿ ಏಪ್ರಿಲ್ 14 ರಿಂದ ಧೂಳೆಬ್ಬಿಸಲು ಸಜ್ಜಾಗಿರುವ KGF 2 ಸಿನಿಮಾ ರಿಲೀಸ್ ಗೂ ಮುನ್ನವೇ , ಟ್ರೇಲರ್ , ಟೀಸರ್ ಸೇರಿದಂತೆ , ಟಿಕೆಟ್ ಬುಕಿಂಗ್ , ಅನೇಕ ವಿಚಾರದಲ್ಲಿ ಬ್ಲಾಕ್ ಬಾಸ್ಟರ್ ಸಿನಿಮಾಗಳ ರೆಕಾರ್ಡ್ ಮುರಿದು ಹಾಕಿದೆ..
ಹಿಂದಿಯಲ್ಲೂ ರಾಕಿ ಹವಾ ಜೋರಿದೆ… ಇದೀಗ ಹಿಂದಿಯಲ್ಲಿ ರಾಕಿ ಭಾಯ್ ಯಾವೆಲ್ಲಾ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ ಅನ್ನೋದನ್ನ ಒಮ್ಮೆ ನೋಡೋಣ.. ಅಂದ್ಹಾಗೆ RRR ಸಿನಿಮಾದ ಹಿಂದಿ ಅವತರಣಿಕೆಯು ಪ್ರೀ ಬುಕಿಂಗ್ ವಿಚಾರದಲ್ಲಿ ಹೊಸ ದಾಖಲೆ ಬರೆದಿತ್ತು.. ಇದೀಗ ಆ ದಾಖಲೆ ಅಳಿಸಿ KGF 2 ರೆಕಾರ್ಡ್ ಬರೆದಿದೆ..
ಮಾಲಿವುಡ್ ನಟಿ ನಿತ್ಯಾ ದಾಸ್ ಅವರ ಸ್ಟನಿಂಗ್ ಫೋಟೋ ಶೂಟ್..!!
RRR ಸಿನಿಮಾದ ಒಟ್ಟು ಅಡ್ವಾನ್ಸ್ ಬುಕಿಂಗ್ಸ್ ದಾಖಲೆಯನ್ನು ಕೆಜಿಎಫ್ 2 ಕೇವಲ ಎರಡೇ ದಿನಗಳಲ್ಲಿ ಅಳಿಸಿ ಹಾಕಿರೊದು ನೋಡಿದ್ರೆ ,,, ಬಾಲಿವುಡ್ ನಲ್ಲಿ ಸಿನಿಮಾ ರಿಲೀಸ್ ಆದ ಮೇಲೆ KGF 2 ಹೊಸ ದಾಖಲೆ ಬರೆಯೋದ್ರಲ್ಲಿ ಎರೆಡು ಮಾತಿಲ್ಲ..
ಮುಂಬೈನಲ್ಲಿ ಐದು ದಿನದಲ್ಲಿ ಆದ ‘RRR’ ಸಿನಿಮಾದ ಮುಂಗಡ ಟಿಕೆಟ್ ಅನ್ನು ‘ಕೆಜಿಎಫ್ 2’ ಕೇವಲ ಎರಡೇ ದಿನದಲ್ಲಿ ಮಾಡಿ ಮುಗಿಸಿದೆ.
ಇದಷ್ಟೇ ಅಲ್ಲ ಮುಂಗಡ ಟಿಕೆಟ್ ಬುಕ್ಕಿಂಗ್‌ನಲ್ಲೂ ಕೆಜಿಎಫ್ ಮುಂದಿದೆ. ‘RRR’ ಸಿನಿಮಾದ ಒಟ್ಟು ಅಡ್ವಾನ್ಸ್ ಬುಕಿಂಗ್ಸ್ ದಾಖಲೆಯನ್ನು ಕೆಜಿಎಫ್ 2 ಕೇವಲ ಎರಡೇ ದಿನಗಳಲ್ಲಿ ಅಳಿಸಿ ಹಾಕಿದೆ…