Megha Shetty : ಮಹೇಶ್ ಬಾಬು ಜೊತೆಗೆ ಮೇಘಾ ಶೆಟ್ಟಿ ನಟನೆ…???
ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕರುನಾಡಿಗರ ಮನೆ ಮನದಲ್ಲಿ ಸ್ಥಾನ ಪಡೆದಿರುವ ನಟಿ ಮೇಘಾ ಶೆಟ್ಟಿ ಸಸದ್ಯ ಸಿನಿಮಾರಂಗದಲ್ಲೂ ಮಿಂಚಲು ಸಜ್ಜಾಗ್ತಿದ್ದು , ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ತ್ರಿಬಲ್ ರೈಡ್ ಸಿನಿಮಾ ಮೂಲಕ ಅಬ್ಬರಿಸಲು ಸಜ್ಜಾಗಿದ್ದಾರೆ..
ಆದ್ರೀಗ ಮೇಘ ಟಾಳಿವುಡ್ ಗೆ ಪಾದಾರ್ಪಣೆ ಮಾಡಲಿದ್ದಾರಾ…?? ಅಷ್ಟೇ ಅಲ್ಲ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಜೊತೆಗೆ ಬಣ್ಣ ಹಚ್ಚಲಿದ್ಧಾರಾ ಎಂಬ ಸುದ್ದಿ ಸದ್ಯ ಹಲ್ ಚಲ್ ಸೃಷ್ಟಿ ಮಾಡಿದೆ.. ಕಾರಣ ಮಹೇಶ್ ಬಾಬು ಅವರ ಜೊತೆಗಿನ ಅವರ ಫೋಟೋ…
ಹೌದು.. ಮೇಘಾ ಶೆಟ್ಟಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಜೊತೆಗೆ ತೆಗೆಸಿಕೊಂಡಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು ಅಚಚ್ಚರಿ ಮೂಡಿಸಿದೆ,.
ಈ ನಟಿ ಮಹೇಶ್ ಬಾಬುರನ್ನ ಯಾಕೆ ಭೇಟಿಯಾದ್ರು ಅನ್ನೋ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಅಂದ್ಹಾಗೆ ಮಹೇಶ್ ಬಾಬು ಜೊತೆಗೆ ಸಿನಿಮಾದಲ್ಲಿ ಅಲ್ಲ ಬದಲಾಗಿ ಜಾಹಿರಾತುಯೊಂದರಲ್ಲಿ ಮಹೇಶ್ ಬಾಬು ಜೊತೆ ನಟಿಸಿದ್ದಾರೆ. ಜಾಹೀರಾತು ಶೂಟ್ ವೇಳೆ ತೆಗೆಸಿದದ ಫೋಟೋ ಈಗ ವೈರಲ್ ಆಗ್ತಿದೆ..
ಅಂದ್ಹಾಗೆ ತ್ರಿಬಲ್ ರೈಡಿಂಗ್ ಹೊರತಾಗಿ ಮೇಘಾ ದಿಲ್‌ಪಸಂದ್ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗಿದ್ದಾರೆ.. ರಾಮಚಂದ್ರ ನಿರ್ದೇಶನದ ಹೆಸರಿಡದ ಪ್ಯಾನ್ ಇಂಡಿಯಾ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ದೇ ಖಾಸಗಿ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಕೆಂಡಸಂಪಿಗೆ ಧಾರಾವಾಹಿಯ ನಿರ್ಮಾಪಕಿಯೂ ಆಗಿದ್ದಾರೆ ಈ ಪ್ರತಿಭಾನ್ವಿತ ಯುವ ನಟಿ..