Mollywood : ಹಿರಿತೆರೆಗೆ ಕಮ್ ಬ್ಯಾಕ್ ಮಾಡಲು ಸಜ್ಜಾದ ಸಜೀತಾ..!!
ಕೊಚ್ಚಿ : ಬಾಲನಟಿಯಾಗಿ ಬಣ್ಣದ ದುನಿಯಾಗೆ ಎಂಟ್ರಿಕೊಟ್ಟು ಮಲಯಾಳಂ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಹೆಸರು ಮಾಡಿರುವ ಸಜಿತಾ ಬೆಟ್ಟಿ ಮದುವೆಯ ನಂತರ ನಟನೆಯಿಂದ ಹಿಂದೆ ಸರಿದಿದ್ದ ಸಜಿತಾ ಮತ್ತೆ ಕಮ್ ಬ್ಯಾಕ್ ಮಾಡಲು ತಯಾರಿ ನಡೆಸುತ್ತಿದ್ದಾರೆ.
ಇದೀಗ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ನಟಿ ಬಹಳ ದಿನಗಳಿಂದ ತನ್ನ ನಂಬಿಕೆಯಂತೆ ಬದುಕುತ್ತಿದ್ದೇನೆ.. ಸಿನಿಮಾದಲ್ಲಿ ಮತ್ತೊಂದು ಜಗತ್ತಿದೆ. ನಾನು ಯಾವಾಗಲೂ ನನ್ನ ನಂಬಿಕೆಗಳ ಮೇಲೆ ಬದುಕಿದ್ದೇನೆ.
Beast : ಕುವೈತ್ ನ ನಂತರ ಕತಾರ್ ನಲ್ಲೂ ಬ್ಯಾನ್..!!
ಸಿನಿಮಾದಲ್ಲಿ ವಿಷಯ ಅದಲ್ಲ, ಬೇರೆ ಪ್ರಪಂಚವಿದೆ. ಕೆಲಸವೆಂದರೆ ನಟನೆ. ವೈಯಕ್ತಿಕ ಹಿತಾಸಕ್ತಿಗಳಿಗೆ ಅಲ್ಲಿ ಸ್ಥಾನವಿಲ್ಲ. ಆದರೆ ಮೊದಲು ನಟನೆಗೆ ಬಂದಾಗ, ನಾನು ಅಪ್ಪ ಅಮ್ಮನಿಂದ ಗುರತಿಸಿಕೊಂಡಿದ್ದೆ. ಈಗ ನಾನು ಶಾಮಸ್ ‘ಹೆಂಡತಿ’ ಎಂದು ಹೇಳಿಕೊಳ್ಳಲು ಬಯಸುತ್ತೇನೆ ಎಂದು ಸಜಿತಾ ಬೆಟ್ಟಿ ಹೇಳಿದರು.
ಇನ್ನು ತಮ್ಮ ಕುಟುಂಬವೇ ತನ್ನ ಪ್ರಪಂಚ ಎಂದ ನಟಿ ನಟನೆಯನ್ನು ಬಿಟ್ಟಿಲ್ಲ. ಮಗಳಿಗಾಗಿ ಸ್ವಲ್ಪ ದಿನ ದೂರವಿದ್ದು, ಶೀಘ್ರದಲ್ಲೇ ಉತ್ತಮ ಪಾತ್ರದಲ್ಲಿ ಮರಳುತ್ತೇನೆ ಎಂದು ಹೇಳಿದ್ದಾರೆ.