ತಾಯಿಯಾಗ್ತಿದ್ದಾರೆ ಸ್ಯಾಂಡಲ್ ವುಡ್ ನಟಿ ಪ್ರಣೀತಾ..!!!
ಸ್ಯಾಂಡಲ್ ವುಡ್ ನಲ್ಲಿ ಮಿಂಚಿ ಖ್ಯಾತಿ ಪಡೆದಿರುವ ಬಹುಭಾಷಾ ನಟಿ ಪ್ರಣೀತಾ ,,, 2021 ರ ಮೇ 30 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು… ಇದೀಗ ಈ ನಟಿ ತಾಯಿಯಾಗ್ತಿರುವ ವಿಚಾರವನ್ನ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಡಿಫರೆಂಟ್ ಆಗಿ ಹಂಚಿಕೊಂಡಿದ್ದಾರೆ…
ಅಂದ್ಹಾಗೆ ಪತಿಯ ಹುಟ್ಟುಹಬ್ವಬದಂದು ಈ ಗುಡ್ ನ್ಯೂಸ್ ಬಗ್ಗೆ ಬಹಿರಂಗ ಪಡಿಸಿದ್ದಾರೆ.. ಈ ಕುರಿತು ಪ್ರಣೀತಾ ಇನ್ಸ್ಟಾಗ್ರಾಮ್ನಲ್ಲಿ, ನನ್ನ ಪತಿಯ 34ನೇ ಹುಟ್ಟುಹಬ್ಬದಂದು ಒಂದು ವಿಶೇಷ ಸುದ್ದಿಯನ್ನು ಹೇಳುತ್ತಿದ್ದೇನೆ. ನಮ್ಮ ಮನೆಗೆ ಏಂಜಲ್ಸ್ ಬರುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಪ್ರಣೀತಾ ಅವರು ತಮ್ಮ ಪತಿ ನಿತಿನ್ ರಾಜ್ ಜೊತೆ ಕುಳಿತುಕೊಂಡು ನಮ್ಮ ಪ್ರೆಗ್ನೆನ್ಸಿ ರಿಪೋರ್ಟ್ ತೋರಿಸಿದ್ದಾರೆ. ಪ್ರಣಿತಾಗೆ ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನ ಹರಿಸುತ್ತಿದ್ದಾರೆ..