ಬಾಲಿವುಡ್ ನಟ ಶಿವಕುಮಾರ್ ಸುಬ್ರಮಣಿಯಂ ನಿಧನ…
ಮುಂಬೈ : 2 ಸ್ಟೇಟ್ಸ್ ಸಿನಿಮಾ ಖ್ಯಾತಿಯ ಬಾಲಿವುಡ್ ನಟ ಶಿವಕುಮಾರ್ ಸುಬ್ರಮಣಿಯಂ ಅವರು ನಿಧನರಾಗಿದ್ದಾರೆ..
ಅವರು ಇಂದು ಮುಂಜಾನೆ ತಮ್ಮ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ..
ಅನೇಕ ಬಾಲಿವುಡ್ ಸೆಲೆಬ್ರೆಟಿಗಳು ನಟನ ನಿಧನಕ್ಕೆ ಕಂಬನಿ ಮಿಡಿದು , ಅಂತಿಮ ದರ್ಶನ ಪಡೆದಿದ್ದಾರೆ..
ಸುಂದರೇಶ್ವರ, ನೇಲ್ ಪಾಲಿಶ್, ಹಿಚ್ಕಿ, ಮೀನಾಕ್ಷಿ , 2 ಸ್ಟೇಟ್ಸ್, ಸಿನಿಮಾಗಳ ಮೂಲಕ ಈ ನಟ ಖ್ಯಾತಿ ಗಳಿಸಿದ್ದರು..
ವಿಪರ್ಯಾಸವೆಂದ್ರೆ ಕಳೆದ ಎರಡು ತಿಂಗಳ ಹಿಂದೆ ಶಿವಕುಮಾರ್ ಸುಬ್ರಮಣಿಯಂ ಅವರಿಗೆ ಪುತ್ರವಿಯೋಗವಾಗಿತ್ತು.. ಕ್ಯಾನ್ಸರ್ ನಿಂದ ಅವರ ಪುತ್ರ ನಿಧನರಾಗಿದ್ದರು.. ಮುಂಬೈನಲ್ಲಿ ನಟ ಶಿವಕುಮಾರ್ ಸುಬ್ರಮಣಿಯಂ ಅವರ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ.
1989ರಲ್ಲಿ ವಿಧು ವಿನೋದ್ ಚೋಪ್ರಾ ಅವರ ʻಪರಿಂದಾʼ ಸಿನಿಮಾಗೆ ಕಥೆ ಬರೆಯುವ ಮೂಲಕ ಶಿವಕುಮಾರ್ ಸುಬ್ರಮಣಿಯಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು..
Mollywood : ಹಿರಿತೆರೆಗೆ ಕಮ್ ಬ್ಯಾಕ್ ಮಾಡಲು ಸಜ್ಜಾದ ಸಜೀತಾ..!!