ಯಾಕೆ ಬಾಲಿವುಡ್ ಸಿನಿಮಾಗಳು ಸೌತ್ ನಲ್ಲಿ ಅಬ್ಬರಿಸುತ್ತಿಲ್ಲ : ಅಜಯ್ ದೇವಗನ್ ಕೊಟ್ಟ ಕಾರಣ
ಬಾಲಿವುಡ್ ಮುಂದೆ ಸೌತ್ ಸಿನಿಮಾಗಳ ಅಬ್ಬರದ ಬಗ್ಗೆ ಬಾಲಿವುಡ್ ನ ಸ್ಟಾರ್ ನಟ , ನಿರ್ದೇಶಕ , ನಿರ್ಮಾಪಕ ಅಜಯ್ ದೇವಗನ್ ಪ್ರತಿಕ್ರಿಯೆ ನೀಡಿದ್ಧಾರೆ.. ಹಿಂದಿಯೇತರ ಸಸಿನಿಮಾಗಳ ಯಶಸ್ಸಿನ ಹಿಂದಿನ ಕಾರಣ ಪ್ಯಾನ್ ಇಂಡಿಯಾ ಪ್ರಚಾರ ತಂತ್ರ ಎಂದು ಹೇಳಿದ್ದಾರೆ.
ದಕ್ಷಿಣದ ಪ್ರೇಕ್ಷಕರು ಇನ್ನೂ ಬಾಲಿವುಡ್ ಸಿನಿಮಾಗಳನ್ನ ಯಾಕೆ ಅಷ್ಟಾಗಿ ಇಷ್ಟಪಡ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.. ಇತ್ತೀಚೆಗೆ ಪ್ಯಾನ್ ಇಂಡಿಯಾ ಬ್ಲಾಕ್ ಬಸ್ಟರ್ RRR ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ 53 ವರ್ಷದ ನಟಅಜಯ್ ದೇವಗನ್ ಅವರು ,
“ಇಲ್ಲಿಂದ (ಉತ್ತರ ಭಾರತದಿಂದ) ಸಿನಿಮಾಗಳು ಅಲ್ಲಿಗೆ (ದಕ್ಷಿಣಕ್ಕೆ) ಹೋಗುತ್ತಿಲ್ಲವಲ್ಲ. ನನ್ನ ಅಭಿಪ್ರಾಯದಲ್ಲಿ, ಯಾರೂ ಉತ್ತರದಿಂದ ದಕ್ಷಿಣಕ್ಕೆ ದೊಡ್ಡ ಪ್ರಮಾಣದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಪ್ರಯತ್ನಿಸಲಿಲ್ಲ.
“ಭವಿಷ್ಯದಲ್ಲಿ ಯಾರಾದರೂ ಪ್ರಯತ್ನಿಸಿದರೆ, ಅದು ಖಂಡಿತವಾಗಿಯೂ ಸಕ್ಸಸ್ ಆಗಲಿದೆ.. ಏಕೆಂದರೆ ಅವರ ಸಿನಿಮಾಗಳು ಉತ್ತಮವಾಗಿವೆ ಮತ್ತು ಇಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ನಮ್ಮ ಸಿನಿಮಾಗಳೂ ಕೆಲಸ ಮಾಡುತ್ತಿವೆ. ಆದ್ರೆ ಪ್ಯಾನ್ ಇಂಡಿಯಾ ಸಿನಿಮಾಗಳ ರಿಲೀಸ್ ಮಾಡುವ ಪ್ರಯತ್ನ ಯಾರೂ ಮಾಡ್ತಿಲ್ಲ ಅಷ್ಟೇ , ದಕ್ಷಿಣ ಭಾರತೀಯ ಸಿನಿಮಾರಂಗದವರು ಬಾಲಿವುಡ್ ನಟರನ್ನು ಕರೆದೊಯ್ದು ಮತ್ತು ಅದಕ್ಕೆ ಅವರಿಗೆ ಅನುಗುಣವಾಗಿ ಅವರು ಸ್ಕ್ರಿಪ್ಟ್ ಅನ್ನು ಯೋಜಿಸುತ್ತಾರೆ.. ಇದರಿಂದ ಅದು ಭಾರತಾದ್ಯಂತ ವರ್ಕೌಟ್ ಆಗುತ್ತೆ ಎಂದು ಹೇಳಿದ್ಧಾರೆ..