Beast : Vijay : ರಾಜಕೀಯಕ್ಕೆ ದಳಪತಿ ವಿಜಯ್ ಎಂಟ್ರಿ..!!!
ಸ್ಟಾರ್ ಗಳು ರಾಜಕೀಯಕ್ಕೆ ಬರೋದು ಹೊಸ ವಿಚಾರವೇನಲ್ಲ.. ನಟ , ನಟಿಯರು ಬಣ್ಣದ ಜಗತ್ತಿನಿಂದ ರಾಜಕೀಯಕ್ಕೂ ಧುಮುಕಿ ಅನೇಕರು ಅಲ್ಲಿ ಯಶಸ್ವಿಯಾಗಿದ್ರೆ ಇನ್ನೂ ಅನೇಕ ಸ್ಟಾರ್ ಗಳು ರಾಜಕೀಯವಾಗಿ ಸೋತಿದ್ದು ಇದೆ..
ಅಂದ್ಹಾಗೆ ತಮಿಳುನಾಡಿನ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರು ,,, ಕೋಟ್ಯಾಂತರ ಅಭಿಮಾನಿಗಳ ಪಾಲಿನ ಆರಾಧ್ಯ ದೈವ.. ಸದ್ಯಕ್ಕೆ ಬೀಸ್ಟ್ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ.. ಈ ಸಿನಿಮಾ ಏಪ್ರಿಲ್ 13 ಕ್ಕೆ ರಿಲೀಸ್ ಆಗಲಿದೆ.. ಅಂದ್ಹಾಗೆ ಇದೀಗ ವಿಜಯ್ ಅವರು ರಾಜಕೀಯಕ್ಕೆ ಬರುತ್ತಿದ್ದಾರೆ..
ಹೌದು..! ಅಂದ್ಹಾಗೆ ಅಧಿಕೃತವಾಗಿ ಈ ಬಗ್ಗೆ ಏನೂ ಮಾಹಿತಿ ಹೊರಬಂದಿಲ್ಲವಾದ್ರೂ ಸನ್ ನೆಟ್ ವರ್ಕ್ಸ್ ಜೊತೆಗಿನ ಸಂದರ್ಶನದಲ್ಲಿ ರಾಜಕೀಯದ ಬಗ್ಗೆ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ.. ಇದೇ ಇಂತಹದೊಂದು ಚರ್ಚೆ ಹುಟ್ಟುಹಾಕಿದೆ..
ನಾನು ರಾಜಕೀಯಕ್ಕೆ ಬರಬೇಕು ಎಂದು ನನ್ನ ಅಭಿಮಾನಿಗಳಿಗೆ ಆಸೆಯಿದೆ. ಹಲವು ಬಾರಿ ಅವರು ನನ್ನನ್ನು ಒತ್ತಾಯಿಸಿದ್ದಾರೆ. ಅವರು ಆಸೆ ಪಟ್ಟರೆ ಖಂಡಿತಾ ನಾನು ರಾಜಕೀಯಕ್ಕೆ ಪ್ರವೇಶ ಮಾಡುತ್ತೇನೆ ಎಂದು ಹೇಳಿದ್ದು , ಮುಂದೆ ಅವರು ರಾಜಕಾರಣಿಯಾಗಬಹುದೆಂದು ಪರೋಕ್ಷವಾಗಿ ತಿಳಿಸಿ ಅಭಿಮಾನಿಗಳನ್ನ ಥ್ರಿಲ್ ಗೊಳಿಸಿದ್ದಾರೆ..