KGF 2 : ಅನಂತ್ ನಾಗ್ ರಿಪ್ಲೇಸ್…!!! ಪ್ರಶಾಂತ್ ನೀಲ್ ಹೇಳಿದ್ದೇನು..??
ಈಗಿನಿಂದಲೇ ಥಿಯೇಟರ್ ಗಳ ಮುಂದೆ ರಾಕಿ ಅಬ್ಬರ ಶುರುವಾಗ್ತಿದೆ… KGF ಕಾವು ರಂಗೇರುತ್ತಿದೆ.. ಟೀಸರ್ , ಟ್ರೇಲರ್ ಕಡೆಗೆ ಪ್ರಮೋಷನ್ ವಿಚಾರದಲ್ಲೂ ಬ್ಲಾಕ್ ಬಾಸ್ಟರ್ ಸಿನಿಮಾಗಳ ದಾಖಲೆ ಮುರಿದಿರು KGF 2 ಈಗ ಮತ್ತೊಂದು ವಿಚಾರದಲ್ಲಿ RRR ರೆಕಾರ್ಡ್ ಚಿಂದಿ ಚಿತ್ರಾನ್ನ ಮಾಡಿದೆ..
ಸಿನಿಮಾ ತಂಡ ಭರ್ಜರಿ ಪ್ರಮೋಷನ್ ಮಾಡ್ತಿದೆ.. ಇತ್ತೀಚೆಗೆ ಮುಂಬೈಗೆ ತೆರಳಿ ಪ್ರಚಾರ ಮಾಡಿದ ರಾಕಿ ಭಾಯ್ ನೋಡಲು ಫ್ಯಾನ್ಸ್ ಮುಗಿಬಿದ್ದಿದ್ದರು… ಸಿನಿಮಾ ತಂಡ ಪ್ರಮೋಷನ್ ಗೆ ವಿಭಿನ್ನ ಸ್ಟ್ರಾಟಜಿಗಳನ್ನ ಬಳಸಿಕೊಳ್ತಿದೆ.. ಈ ನಡುವೆ ಅನಂತ್ ನಾಗ್ ಅವರ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ…
KGF ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಅನಂತ್ ನಾಗ್ ಅವರು ಯಾಕೆ ಈ ಸಿನಿಮಾದಲ್ಲಿ ಇಲ್ಲ.. ಬದಲಾಗಿ ಅವರ ಜಾಗದಲ್ಲಿ ಪ್ರಕಾಶ್ ಕಾಣಿಸಿಕೊಳ್ಳುತಿರೋದು ಯಾಕೆ ಅನ್ನೋ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಡ್ತಿದೆ..
ಅದಕ್ಕೆ ಈಗ ಖುದ್ದು ನಿರ್ದೇಶಕ ಪ್ರಶಾಂತ್ ನೀಲ್ , ಯಶ್ ಅವರೇ ಉತ್ತರಿಸಿದ್ಧಾರೆ.. ಸಂದರ್ಶನವೊಂದರಲ್ಲಿ ಈ ಬಗ್ಗೆ ಯಶ್ ಮಾತನಾಡಿದ್ದು ಅನಂತ್ ನಾಗ್, ಅದ್ಭುತವಾದ ನಟರು. ನಾನು ಧಾರಾವಾಹಿಯಲ್ಲಿ ನಟಿಸುವಾಗಲಿಂದಲೂ ಅವರೊಂದಿಗೆ ಸಾಕಷ್ಟು ಸಮಯ ಕಳೆದಿದ್ದೇನೆ.
ನನ್ನ ಬಗ್ಗೆಯೂ ಅವರಿಗೆ ವಿಶೇಷ ಪ್ರೀತಿ ಇದೆ. ನನಗಾಗಿ ಅವರು ಕೆಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಜಿಎಫ್: ಚಾಪ್ಟರ್ 1 ಯಶಸ್ವಿಯಾಗಲು ಅವರ ಯೋಗದಾನ ದೊಡ್ಡದಿದೆ. ಆದರೆ ‘ಕೆಜಿಎಫ್ 2’ ನಲ್ಲಿ ನಟಿಸದೇ ಇರುವುದು ಅವರ ವೈಯಕ್ತಿಕ ಆಯ್ಕೆ. ಅವರು ನಟಿಸದೇ ಇರಲು ಸ್ಪಷ್ಟ ಕಾರಣ ನನಗೂ ಗೊತ್ತಿಲ್ಲ ಎಂದಿದ್ದಾರೆ.
ಮತ್ತೊಂದು ಸಂದರ್ಶನದಲ್ಲಿ ಈ ಬಗ್ಗೆ ಪ್ರಶಾಂತ್ ನೀಲ್ ಅವರು ಮಾತನಾಡಿದ್ದು ಕೆಜಿಎಫ್ 2 ಸಿನಿಮಾದಲ್ಲಿ ನಟಿಸಬಾರದು ಎಂಬುದು ಅನಂತ್ ನಾಗ್ ಅವರ ವೈಯಕ್ತಿಕ ನಿರ್ಧಾರ. ನಾವು ಅವರ ನಿರ್ಧಾರಕ್ಕೆ ಗೌರವ ಕೊಟ್ಟು ಸುಮ್ಮಸಿದ್ವಿ.. ಆದರೆ ಅವರಿಗೆ ನಟಿಸುವಂತೆ ನಾವು ಮನವಿ ಮಾಡಿದ್ದೆವು ಎಂದಿದ್ಧಾರೆ..