ಕನ್ನಡದ ಆ ಸ್ಟಾರ್ ನಟನಿಗೆ ಮಾತು ಕೊಟ್ಟಿದ್ದೀನಿ ,, ನಾನು ಕನ್ನಡಿಗ ಕನ್ನಡ ಸಿನಿಮಾಗಳನ್ನ ಮಾಡ್ತೀನಿ : ಪ್ರಶಾಂತ್ ನೀಲ್
ಪ್ರಶಾಂತ್ ನೀಲ್ ……. ಕನ್ನಡ ಸಿನಿಮಾ ಇಂಡಸ್ಟ್ರಿಯ ಪವರ್ ನ ಇಡೀ ವಿಶ್ವಕ್ಕೆ ತೋರಿಸಿದವರು.. KGF ಹವಾದ ಸೃಷ್ಟಿಸಿದವರು.. ಉಗ್ರಂ ತೂಫಾನ್ ನಂತರ KGF ಸುನಾಮಿ ಎಬ್ಬಿಸಿ , ಈಗ ಸದ್ಯಕ್ಕೆ KGF 2 ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ..
ಪ್ರಶಾಂತ್ ನೀಲ್ ಅವರ ಜೊತೆಗೆ ಸಿನಿಮಾ ಮಾಡಲು ಸ್ಟಾರ್ ನಟರು ಕಾತರರಾಗಿದ್ದಾರೆ.. ಸದ್ಯ ಪ್ರಶಾಂತ್ ನೀಲ್ ಅವರು ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ ಅವರಿಗೆ ಸಲಾರ್ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದು , ಮುಂದೆ ಜ್ಯೂನಿಯರ್ NTR ಜೊತೆ ಸಿನಿಮಾ ಮಾಡಲಿದ್ದಾರೆ..
ಆದ್ರೆ ಕನ್ನಡದಿಂದ ಹೆಸರು ಮಾಡಿದ ಮೇಲೆ ಈಗ ನ್ನಡ ಸಿನಿಮಾರಂಗದಿಂದ ಹೊರಗಡೆ ಉಳಿದುಕೊಂಡಿದ್ದಾರೆ ಪ್ರಶಾಂತ್ ನೀಲ್ , ನಮ್ಮಲ್ಲೇ ಸ್ಟಾರ್ ನಟರಿದ್ದಾರೆ.. ಅವರಿಗೆ ಸಿನಿಮಾ ಮಾಡುವುದನ್ನ ಬಿಟ್ಟು ಪರಭಾಷೆ ಸ್ಟಾರ್ ಗಳ ಮೇಲೆ ಹೆಚ್ಚು ಒಲವು ತೋರುತ್ತಿದ್ದಾರೆ.. ಈ ಮೂಲಕ ರಶ್ಮಿಕಾ ಮಂದಣ್ಣ ಸೇರಿದಂತೆ ಇನ್ನೂ ಕೆಲ ಕನ್ನಡಿಗರ ಮಾದರಿಯಲ್ಲೇ ಪ್ರಶಾಂತ್ ನೀಲ್ ಗೆ ಪರಭಾಷೆ ಮೇಲೆ ಹೆಚ್ಚು ಒಲವು ಎಂಬ ಆರೋಪಗಳಿವೆ.. ಪ್ರಶಾಂತ್ ನೀಲ್ ಅವರ ಮೇಲೆ ಅನೇಕರಿಗೆ ಅಸಮಾಧಾನವೂ ಇದೆ..
ಆದ್ರೀಗ ಪ್ರಶಾಂತ್ ನೀಲ್ ಅವರು ಈ ಬಗ್ಗೆ ಮಾತನಾಡಿದ್ದು , ಕನ್ನಡದ ಸ್ಟಾರ್ ನಟರೊಬ್ಬರ ಬಗ್ಗೆ ಪ್ರಸ್ತಾಪ ಮಾಡಿ ಜೊತೆಗೆ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡಿ ಅಚ್ಚರಿ ಮೂಡಿಸಿದ್ಧಾರೆ..
ಹೌದು..! ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಡುತ್ತಾ , ನೀವು ಇನ್ನು ಮುಂದೆ ಕನ್ನಡ ಸಿನಿಮಾ ಮಾಡುವುದಿಲ್ಲವಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಪ್ರಶಾಂತ್ ನೀಲ್ ಅವರು , ನಾನು ಕನ್ನಡ ಸಿನಿಮಾ ಮಾಡುವ ಮೂಲಕ ಕನ್ನಡಕ್ಕೆ ನಾನೇನೋ ಕೊಡುತ್ತಿದ್ದೇನೆ, ಸೇವೆ ಮಾಡುತ್ತಿದ್ದೇನೆ ಎಂದೆಲ್ಲ ಏನೂ ಇಲ್ಲ. ನಾನು ಕನ್ನಡಿಗ ಹಾಗಾಗಿ ಕನ್ನಡದಲ್ಲಿ ಸಿನಿಮಾ ಮಾಡುವುದು ನನ್ನ ಕರ್ತವ್ಯ, ಮುಂದೆಯೂ ನಾನು ಕನ್ನಡದಲ್ಲಿ ಸಿನಿಮಾ ಮಾಡಿಯೇ ಮಾಡುತ್ತೀನಿ. ನಾನು ಎಲ್ಲಿಯೇ ಹೋದರು ನಾನು ಕನ್ನಡಿಗನೇ, ನಾನು ವಾಪಸ್ ಬಂದು ಕನ್ನಡ ಸಿನಿಮಾ ಮಾಡಬೇಕು ಎಂಬುದು ನನ್ನ ಆಸೆ ಎಂದಿದ್ದಾರೆ.
ಈಗ ನನಗೆ ಕೆಲವು ಅವಕಾಶಗಳು ಸಿಕ್ಕಿವೆ, ಅವುಗಳ ಮೇಲೆ ಕೆಲಸ ಮಾಡುತ್ತಿದ್ದೇನೆ. ಕೆಜಿಎಫ್: ಚಾಪ್ಟರ್ 1 ಸಿನಿಮಾ ಬಿಡುಗಡೆ ಆದ ಬಳಿಕ ಯಾರು ಬಂದು ನನ್ನನ್ನು ಸಂಪರ್ಕಿಸಿದರೊ ಅವರು ತೋರಿಸಿದ ಪ್ರೀತಿ, ಅವರು ನೀಡಿದ ಗೌರವ ಅತ್ಯಾಪ್ತವಾಗಿತ್ತು.. ನಾನೂ ಸಹ ನನ್ನ ವೃತ್ತಿಜೀವನವನ್ನು ಪ್ರಗತಿಯೆಡೆಗೆ ಕೊಂಡೊಯ್ಯಬೇಕಿತ್ತು. ನಾನೂ ಸಹ ವೃತ್ತಿಯಲ್ಲಿ ಮುಂದಿನ ಹೆಜಜ್ಜೆ ಇಡಬೇಕಿತ್ತು. ಈ ಎಲ್ಲ ಕಾರಣಗಳಿಗಾಗಿ ಬೇರೆ ಭಾಷೆಯ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದು , ಮುಂದೆ ಕನ್ನಡ ಸಿನಿಮಾ ಮಾಡುತ್ತೇನೆ ಎಂದಿದ್ದಾರೆ..
ಇದೇ ವೇಳೆ ನಾನು ಈಗಾಗಲೇ ಕನ್ನಡ ಸಿನಿಮಾ ನಿರ್ದೇಶನ ಮಾಡಲು ಯೋಜನೆ ಸಹ ರೂಪಿಸಿಕೊಂಡಿದ್ದೇನೆ. ಶ್ರೀಮುರಳಿ ಅವರ ಜೊತೆ ಒಂದು ಕನ್ನಡ ಸಿನಿಮಾ ಮಾಡಲೇ ಬೇಕು ನಾನು. ಅವರಿಗೆ ನಾನು ಮಾತು ಕೊಟ್ಟಿದ್ದೀನಿ. ಅವರಿಗಾಗಿ ಒಂದು ಸಿನಿಮಾ ನಿರ್ದೇಶನ ಮಾಡುತ್ತೇನೆ ಎಂದಿದ್ಧಾರೆ.. ಅಂದ್ಹಾಗೆ ಶ್ರೀಮುರುಳಿ ಅವರ ಕಮ್ ಬ್ಯಾಕ್ ಸಿನಿಮಾ,,, ಪವರ್ ಫುಲ್ ಬ್ರೇಕ್ ಕೊಟ್ಟ ಸಿನಿಮಾ ಉಗ್ರಂ ಪ್ರಶಾಂತ್ ನೀಲ್ ನಿರ್ದೇಶನದ ಚೊಚ್ಚಲ ಸಿನಿಮಾ.. ಈ ಸಿನಿಮಾ ಮೂಲಕವೇ ಪ್ರಶಾಂತ್ ನೀಲ್ ಅವರ ಪವರ್ ಗೊತ್ತಾಗಿತ್ತು.. ಶ್ರೀ ಮುರುಳಿ ಅವರ ರೋರಿಂಗ್ ಗೆ ಮುನ್ನುಡಿ ಬರೆದಿತ್ತು..