Roja : ಜಬರ್ದಸ್ತ್ ಗೆ ಗುಡ್ ಬೈ ಹೇಳಿ ಇನ್ಮುಂದೆ ನಟಿಸುವುದಿಲ್ಲ ಎಂದ ರೋಜಾ…!!!
ಬಹುಭಾಷಾ ನಟಿ ಹಾಗೂ ರಾಜಕಾರಣಿಯಾಗಿರುವ ರೋಜಾ ಕನ್ನದಲ್ಲೂ ಒಂದು ಕಾರಲದಲ್ಲಿ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡು ಮಿಂಚಿದ್ದರು.. ಪ್ರಸ್ತುತ ರಿಯಾಲಿಟಿ ಶೋಗಳಲ್ಲೂ ಜಡ್ಜ್ ಆಗಿದ್ದರು.. ಅನೇಕ ರಿಯಾಲಿಟಿ ಶೋಗಳನ್ನ ಹೋಸ್ಟ್ ಸಹ ಮಾಡಿದ್ದರು. ರೋಜಾ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ..
ಆದ್ರೀಗ ರೋಜಾ ಸಂಪೂರ್ಣ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಳ್ಳುವ ಪ್ಲಾನ್ ನಲ್ಲಿದ್ದಾರೆ.. ಇದರ ಮೊದಲ ಹೆಜ್ಜೆಯೇ ಜಬರ್ದಸ್ತ್ ಶೋನಿಂದ ಹೊರಬಂದಿರುವುದು..
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ಅವರು ತಮ್ಮ ನೂತನ ಸಚಿವ ಸಂಪುಟದಲ್ಲಿ ನಗರಿ ಶಾಸಕಿ ಆರ್ ಕೆ ರೋಜಾ ಅವರಿಗೆ ಅವಕಾಶ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ರೋಜಾ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಇನ್ಮುಂದೆ ಜಬರ್ದಸ್ತ್ ಶೋನಲ್ಲಿ ಭಾಗವಹಿಸೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರೋಜಾ ಅವರು ಶಾಸಕಿಯಾಗಿ ಗೆಲ್ಲುವಲ್ಲಿ ಜಬರ್ದಸ್ತ್ ಕಾರ್ಯಕ್ರಮ ಪ್ರಮುಖ ಪಾತ್ರವಹಿಸಿತ್ತು. ಇದನ್ನ ಸ್ವತಃ ರೋಜಾ ಅವರೇ ಹೇಳಿಕೊಂಡಿದ್ದಾರೆ.
ಆದ್ರೆ ಇದೀಗ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕ ಕಾರಣ ಅವರು ಇನ್ಮುಂದೆ ಯಾವುದೇ ಶೂಟಿಂಗ್ ನಲ್ಲಿ ಭಾಗವಹಿಸುವುದಿಲ್ಲ.
ಸಿನಿಮಾಗಳನ್ನ ಮಾಡೋದಿಲ್ಲ. ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಜೊತೆಗೆ ಜಬರ್ದಸ್ತ್ ಶೋನಲ್ಲಿ ಭಾಗವಹಿಸುವುದಿಲ್ಲ ಎಂದು ರೋಜಾ ಘೋಷಿಸಿದ್ದಾರೆ.