ಚಿರಂಜೀವಿ , ರಾಮ್ ಚರಣ್ ‘ಆಚಾರ್ಯ’ ಟ್ರೇಲರ್ ಬೆಂಕಿ…!!!!
ಬಹು ನಿರೀಕ್ಷಿತ ಸೌತ್ ಚಿತ್ರ ಮೆಗಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ನಟನೆಯ ‘ಆಚಾರ್ಯ’ ಚಿತ್ರದ ಟ್ರೇಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಟ್ರೇಲರ್ ಬೆಂಕಿಯಾಗಿದೆ.. ಸಿನಾಟೋಗ್ರಾಫಿ , ವಿಶ್ಯುವಾಲಿಟಿ ಮಸ್ತಾಗಿದೆ..
ಆಚಾರ್ಯ ಚಿತ್ರದ ಟ್ರೇಲರ್ ಯೂಟ್ಯೂಬ್‌ನಲ್ಲಿ ರಿಲೀಸ್ ಆಗುವ ಮೊದಲು ತೆಲಂಗಾಣ ಮತ್ತು ಆಂಧ್ರಪ್ರದೇಶದ ಹಲವಾರು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿತು. ಸಂಜೆ 5:49 ಕ್ಕೆ ಚಿತ್ರಮಂದಿರಗಳಲ್ಲಿ ಟ್ರೇಲರ್‌ನ ವಿಶೇಷ ಪ್ರದರ್ಶನದ ವ್ಯವಸ್ಥೆ ಮಾಡಲಾಗಿತ್ತು.
ತಂದೆ ಮತ್ತು ಮಗನನ್ನ ಒಟ್ಟಿಗೆ ದೊಡ್ಡ ಪರದೆಯ ಮೇಲೆ ನೋಡಲು ಅಭಿಮಾನಿಗಳು ಬಹಳ ವರ್ಷಗಳಿಂದ ಕಾಯುತ್ತಿದ್ದರು. ಇದೀಗ ಅಭಿಮಾನಿಗಳ ಆಸೆ ಈಡೇರುವ ಘಳಿಗೆ ಹತ್ತಿರವಾಗಿದೆ.. ಅಂದ್ಹಾಗೆ ರಾಮ್ ಚರಣ್ ತಮ್ಮ ತಂದೆ ಚಿರಂಜೀವಿ ಜೊತೆ ಬಿಗ್ ಸ್ಕ್ರೀನ್ ಮೇಲೆ ಮೊಗಧೀರ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರಾದ್ರೂ , ಕೆಲ ನಿಮಿಷಗಳಷ್ಟೇ,, ಪೂರ್ಣ ಪ್ರಮಾಣದಲ್ಲಿ ಇದೇ ಮೊದಲ ಬಾರಿಗೆ ನಾಯಕರಾಗಿ ಕಾಣಿಸಿಕೊಳ್ತಿದ್ದಾರೆ.. ಆಚಾರ್ಯ ಸಿನಿಮಾವು ಏಪ್ರಿಲ್ 29 ರಂದು ತೆರೆಗೆ ಬರಲಿದೆ.