BEAST ಸಿನಿಮಾದಿಂದ ನಿರಾಸೆ : ಥಿಯೇಟರ್ ಸ್ಕ್ರೀನ್ ಗೆ ಬೆಂಕಿ ಇಟ್ಟ ಫ್ಯಾನ್ಸ್ : Video
ತಮಿಳಿನ ಸೂಪರ್ ಸ್ಟಾರ್ ದಳಪತಿ ವಿಜಯ್ ನಟನೆಯ ಬೀಸ್ಟ್ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಿದ್ದು , ಸಿನಿಮಾ ಎಲ್ಲಾ ಕಡೆ ಹೌಸ್ ಫುಲ್ ಓಡ್ತಿದೆ.. ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡ್ತಿದ್ದಾರೆ.. ಆದ್ರೆ ಬಹುನಿರೀಕ್ಷೆಯ ಈ ಸಿನಿಮಾಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಮಿಶ್ರ ಪ್ರತಿಕ್ರೆಯೆ ವ್ಯಕ್ತವಾಗ್ತಿದೆ..
ಹೌದು,,!! ಡಾಕ್ಟರ್ ಖ್ಯಾತಿಯ ನೆಲ್ಸನ್ ನಿರ್ದೇಶನದ , ಪೂಜಾ ಹೆಗ್ಡೆ ನಾಯಕಿಯಾಗಿರುವ , ಮಾಲ್ ಹೈಜಾಕ್ , ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ವಿಜಯ್ Stylish ಲುಕ್ , ಅವರ ಆಕ್ಟಿಂಗ್ , ಅವರ ಡ್ಯಾನ್ಸ್ ಅಪಿಯರೆನ್ಸ್ ನ ಜನರು ಇಷ್ಟಪಟ್ಟು ಸೋಷಿಯಲ್ ಮೀಡಿಯಾದಲ್ಲಿ ಹೊಗಳುತ್ತಿದ್ದಾರೆ..
https://twitter.com/i/status/1514094100114509827
ಇತ್ತ ಇನ್ನೂ ಕೆಲವರು , ಔಟ್ ಡೇಟೆಡ್ ಕಥೆ ,,, ಸ್ಟೋರಿ ಪ್ಲಾಟ್ ಬೋರಿಂಗ್ ,,, ನಿರೀಕ್ಷೆಯನ್ನ ತಲುಪುವಲ್ಲಿ ಎಡವಿದೆ ಎಂದು ಕಮೆಂಟ್ ಗಳನ್ನ ಮಾಡ್ತಿದ್ದಾರೆ… ಅಲ್ಲದೇ ಅನೇಕರು ವೇಯಿಟಿಂಗ್ ಫಾರ್ KGF 2 ಎಂದೂ ಕಮೆಂಟ್ ಮಾಡ್ತಿದ್ದು ವಿಜಯ್ ಅಭಿಮಾನಿಗಳು ಸಿನಿಮಾವನ್ನ ಹೊಗಳುತ್ತಿದ್ದಾರೆ..
ಆದ್ರೆ ತಮಿಳುನಾಡಿನ ಥಿಯೇಟರ್ ಒಂದ್ರಲ್ಲಿ ಅಭಿಮಾನಿಳು ಸಿನಿಮಾ ನೋಡುತ್ತಿದ್ದ ವೇಳೆ ಸ್ರೀನ್ ಗೆ ಬೆಂಕಿ ಬಿದ್ದಿದೆ… ಅಂದ್ಹಾಗೆ ಸಿನಿಮಾ ಚನಾಗಿಲ್ಲ ಎಂಬ ಹತಾಶೆಯಿಂದ ಅಭಿಮಾನಿಗಳೇ ಆವೇಶಕ್ಕೆ ಒಳಗಾಗಿ ಬೆಂಕಿ ಹಚ್ಚಿದ್ದಾರೆ ಎನ್ನಲಾಗ್ತಿದೆ.. ಅಲ್ಲದೇ ಶಾರ್ಟ್ ಸರ್ಕ್ಯೂಟ್ ನಿಂದಲೂ ಬೆಂಕಿ ಹೊತ್ತುಕೊಂಡಿರಬಹುದು ಎನ್ನಲಾಗಿದೆ.. ನಿಖರ ಮಾಹಿತಿ ಮುಂದಷ್ಟೇ ಗೊತ್ತಾಗಬೇಕಿದೆ..
ವಿಜಯ್ ಫ್ಯಾನ್ಸ್ ಥಿಯೇಟರ್ ಸ್ಕ್ರೀನ್ ಗೆ ಬೆಂಕಿ ಹಚ್ಚಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದ್ದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ..
ಅಂದ್ಹಾಗೆ ಸಿನಿಮಾ ಚನಾಗಿಲ್ಲ ಎಂಬ ಪ್ರತಿಕ್ರಿಯೆಗಳು ಬರುತ್ತಿದ್ದಂತೆ ಅಜಿತ್ ಫ್ಯಾನ್ ಫುಲ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್ ಹರಿಬಿಟ್ಟಿದ್ದು ಮತ್ತಷಷ್ಟು ವಿಜಯ್ ಅಭಿಮಾನಿಗಳನ್ನ ಕೆರಳಿಸಿದೆ ಎನ್ನಬಹುದು..