Darshan : ಜಮೀರ್ ಮನೆಯಲ್ಲಿ ಇಫ್ತಿಯಾರ್ ಕೂಟದಲ್ಲಿ ಭಾಗಿಯಾಗಿ ಭಾವೈಕ್ಯತೆ ಮೆರೆದ ದಾಸ
ಒಂದೆಡೆ ರಾಜ್ಯದಲ್ಲಿ ಧರ್ಮದ ವಿಚಾರದಲ್ಲಿ ಎದ್ದೆರುವ ಗಲಾಟೆ ಗದ್ದಲದಿಂದ ಅಶಾಂತಿ ಸೃಷ್ಟಿಯಾಗಿದೆ.. ಆದ್ರೆ ಅದೇ ಮತ್ತೊಂದೆಡೆ ಸೆಲೆಬ್ರಿಟಿಗಳು ಮತ್ತಿತರರು ಭಾವೈಕ್ಯತೆ ಉಳಿವಿಗೆ ಶ್ರಮದಾನ ಮಾಡ್ತಿದ್ದಾರೆ..
ಅಂದ್ಹಾಗೆ ರಂಜಾನ್ ಹಿನ್ನೆಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಮಾಜಿ ಸಚಿವ , ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಮನೆಗೆ ಭೇಟಿ ನೀಡಿ ಇಫ್ತಿಯಾರ್ ಕೂಟದಲ್ಲಿ ಭಾಗಿಯಾಗಿ ಭಾವೈಕ್ಯತೆ ಮೆರೆದಿದ್ದಾರೆ..
ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು , ಅಭಿಮಾನಿಗಳು ಮೆಚ್ಚುಗಿಯ ಮಹಾಪೂರವನ್ನೇ ಹರಿಸುತ್ತಿದ್ಧಾರೆ..
ಇಫ್ತಿಯಾರ್ ಕೂಟದ ವಿಡಿಯೋವನ್ನು, ಕೆಲವು ಚಿತ್ರಗಳನ್ನು ಜಮೀರ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ದರ್ಶನ್ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದ ಜಮೀರ್, ಬಳಿಕ ಅವರಿಗೆ ಶಾಲು, ಟೋಪಿ ಹಾಕಿ, ಸಂಪ್ರದಾಯದಂತೆ ಎಲ್ಲರೂ ನೆಲ ಹಾಸಿನ ಮೇಲೆ ಕುಳಿತು ಭೋಜನ ಸವಿದಿದ್ದಾರೆ.