KGF 2 : ರಿಲೀಸ್ ಗೂ ಮೊದಲೇ RRR ರೆಕಾರ್ಡ್ ಪೀಸ್ ಪೀಸ್..!!
KGF 2 ಸಿನಿಮಾ ಏಪ್ರಿಲ್ 14 ಕ್ಕೆ ವಿಶ್ವಾದ್ಯಂತ ರಿಲೀಸ್ ಆಗಲಿದೆ.. ಸಿನಿಮಾದ ಕ್ರೇಜ್ ನೆಕ್ಸ್ಟ್ ಲೆವೆಲ್ ನಲ್ಲಿದೆ.. ಅಂದ್ಹಾಗೆ ಭರ್ಜರಿ ಪ್ರಮೋಷನ್ ಮಾಡ್ತಿರುವ ಟೀಮ್ ,,, ಪ್ರಚಾರಕ್ಕೆ ವಿಭಿನ್ನ ಸ್ಟ್ರಾಟಜಿಗಳನ್ನೇ ಬಳಿಸಿಕೊಂಡಿದೆ..
ಈ ನಡುವೆ ಸಿನಿಮಾ ಪಕ್ಕಾ RRR ರೆಕಾರ್ಡ್ ಮುರಿಯುತ್ತದೆ ಎನ್ನಲಾಗ್ತಿದೆ… ಆದ್ರೆ ರಿಲೀಸ್ ಆದ ಮೇಲೆ ಬರೆಯೋ ದಾಖಲೆಯ ಲೆಕ್ಕಾಚಾರವೇ ಬೇರೆ.. ಸಿನಿಮಾ ರಿಲೀಸ್ ಗೂ ಮೊದಲೇ RRR ಸಿನಿಮಾದ ಹಲವಯ ರೆಕಾರ್ಡ್ ಗಳನ್ನ ಚಿಂದಿ ಚಿತ್ರಾನ್ನ ಮಾಡಿದೆ..
ಇದೀಗ RRR ನ ಮತ್ತೊಂದು ದಾಖಲೆ ಮುರಿದಿದೆ. ಮೊದಲ ದಿನವೇ ಮುಂಗಡ ಬುಕ್ಕಿಂಗ್‌ನಿಂದ ಬಂದ ಗಳಿಕೆಯಲ್ಲಿ ಕೆಜಿಎಫ್-2 ‘RRR’ ಚಿತ್ರದ ದಾಖಲೆಯನ್ನು ಮುರಿದಿದೆ. ಅಲ್ಲದೇ ರಿಲೀಸ್ ಆದ ನಂತರ ‘ದಂಗಲ್’, ‘ಬಾಹುಬಲಿ-2’ ಮತ್ತು RRR ಚಿತ್ರದ ಸಾರ್ವಕಾಲಿಕ ದಾಖಲೆಗಳನ್ನು ಬಿಡುಗಡೆಯಾದ ಮೊದಲ ದಿನವೇ ಕೆಜಿಎಫ್-2 ಮುರಿಯಲಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.
‘ಕೆಜಿಎಫ್-2’ ಬಿಡುಗಡೆಗೂ ಮುನ್ನವೇ ದೇಶಾದ್ಯಂತ ಮುಂಗಡ ಬುಕಿಂಗ್‌ನಿಂದ ಸುಮಾರು 28.51 ಕೋಟಿ ರೂಪಾಯಿ ಗಳಿಸಿದೆ, ಇದು RRR ಗಿಂತ ಹೆಚ್ಚು. RRR ಬಿಡುಗಡೆಗೆ ಮುನ್ನ ಮೊದಲ ದಿನದ ಮುಂಗಡ ಬುಕಿಂಗ್ ಮೂಲಕ 5 ಕೋಟಿ ಗಳಿಸಿತ್ತು. ಈ ಹಿನ್ನೆಲೆಯಲ್ಲಿ, ‘ಕೆಜಿಎಫ್-2’ ಮುಂಗಡ ಬುಕ್ಕಿಂಗ್ ಗಳಿಕೆಯು ‘RRR’ ಗಿಂತ ಐದು ಪಟ್ಟು ಹೆಚ್ಚಾಗಿದೆ. ವಿದೇಶಗಳಲ್ಲೂ ಮುಂಗಡ ಬುಕ್ಕಿಂಗ್‌ನಿಂದ ಚಿತ್ರ ಭರ್ಜರಿ ಗಳಿಕೆ ಆರಂಭಿಸಿದೆ.
‘ಕೆಜಿಎಫ್-2’ ಹಿಂದಿ ಆವೃತ್ತಿ ಕೂಡ ಮುಂಗಡ ಬುಕ್ಕಿಂಗ್ ಗಳಿಕೆಯಲ್ಲಿ RRR ಚಿತ್ರವನ್ನ ಹಿಂದಿಕ್ಕಿದೆ. ಬಿಡುಗಡೆಗೂ ಮುನ್ನವೇ ಮುಂಗಡ ಬುಕ್ಕಿಂಗ್‌ನಿಂದ ಹಿಂದಿ ಆವೃತ್ತಿಯು ಈಗಾಗಲೇ 16.30 ಕೋಟಿ ರೂ.ಗೂ ಹೆಚ್ಚು ಗಳಿಸಿದೆ. ವ್ಯಾಪಾರ ವಿಶ್ಲೇಷಕರ ಪ್ರಕಾರ, ಕೆಜಿಎಫ್-2 ನ ಹಿಂದಿ ಆವೃತ್ತಿಯು ಮುಂಗಡ ಬುಕಿಂಗ್‌ನಿಂದ 20 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಗಳಿಕೆ ಮಾಡಲಿದೆ.