KGF 2 : ವಿಜಯ್ ಕಿರಗಂದೂರು ಹುಟ್ಟೂರಿಗೆ ಭೇಟಿ ನೀಡಿದ ರಾಕಿ ಭಾಯ್ ಅಂಡ್ ಟೀಮ್
KGF 2 ಸಿನಿಮಾ ದೇಶಾದ್ಯಂತ ಹವಾ ಸೃಷ್ಟಿಸಿದೆ. ಸಿನಿಮಾ ನಾಳೆ ( ಏಪ್ರಿಲ್ 14 ) ಅದ್ಧೂರಿಯಾಗಿ ವಿಶ್ವಾದ್ಯಂತ ರಿಲೀಸ್ ಆಗ್ತಿದೆ.. ರಿಲೀಸ್ ಗೂ ಮುನ್ನವೇ ಸಿನಿಮಾ ಹಲವಾರು ದಾಖಲೆ ಬರೆದಿದೆ.. ಥಿಯೇಟರ್ ಗಳ ಮುಂದೆ ರಾಕಿ ಭಾಯ್ ಕಟೌಟ್ ಗಳು ತಲೆ ಎತ್ತಿವೆ..
ಸಿನಿಮಾ ತಂಡ ಭರ್ಜರಿ ಪ್ರಮೋಷನ್ ಮಾಡ್ತಿದೆ. ಅಂದ್ಹಾಗೆ ಡಿಫರೆಂಟ್ ಆದ್ರೆ ನೆಕ್ಸ್ಟ್ ಲೆವೆಲ್ ಪ್ರಚಾರ ತೆಗೆದುಕೊಂಡಿರುವ ಹೊಂಬಾಳೆ ಫಿಲಮ್ಸ್ RCB ಜೊತೆಗೆ ಕೊಲ್ಯಾಬರೇಟ್ ಕೂಡ ಮಾಡಿದೆ.. ಅಂದ್ಹಾಗೆ ಸಿನಿಮಾ ಟೀಮ್ ಕುಕ್ಕೆ , ಧರ್ಮಸ್ಥಳಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದು ಗೊತ್ತೇ ಇದೆ…
ಈಗ ರಾಕಿಂಗ್ ಸ್ಟಾರ್ ಯಶ್ ಅವರು ವಿಜಯ್ ಕಿರಗಂದೂರು ಅವರ ಜೊತೆಗೆ ಅವರ ಹುಟ್ಟೂರಿನ ಪುಟ್ಟ ಮನೆಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದಿದ್ದಾರೆ..
ಮಂಡ್ಯದ ಕಿರಗಂದೂರಿಗೆ ಮಂಗಳವಾರ ರಾತ್ರಿ ಚಿತ್ರತಂಡ ಭೇಟಿ ಕೊಟ್ಟಿದೆ. ಈ ವೇಳೆ ಟೀಂ ಹಿರಿಯರ ಆಶೀರ್ವಾದ ಪಡೆದುಕೊಂಡಿದೆ. ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ ಕಿರಗಂದೂರು ತವರಿನಲ್ಲಿ ಪೂಜೆ ಸಲ್ಲಿಸಿ ಚಿತ್ರದ ಯಶಸ್ಸಿಗೆ ಕೋರಿದರು. ಶ್ರೀರಂಗಪಟ್ಟಣದ ನಿಮಿಷಾಂಬ ದೇವಾಲಯಕ್ಕೆ ಚಿತ್ರತಂಡ ತೆರಳಿ ಪೂಜೆ ಸಲ್ಲಿಸಿದೆ.
