KGF 2 : ರಾಕಿ ಭಾಯ್ ಟೀಮ್ ಗೆ ಬಿಗ್ ಶಾಕ್ ಕೊಟ್ಟ ಆಂಧ್ರ ಸರ್ಕಾರ
ಜಗನ್ ಸರ್ಕಾರದ ನಿಯಮದಿಂದ KGF 2 ಗೆ ದೊಡ್ಡ ಹೊಡೆತ ಬೀಳಲಿದೆ.. ಬಾಕ್ಸ್ ಆಫೀಸ್ ಕಲೆಕ್ಷನ್ ಗೆ ದೊಡ್ಡ ಹೊಡೆತ ಬೀಳಲಿದೆ.. ಏಪ್ರಿಲ್ 14 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಲಿರುವ KGF 2 ಸಿನಿಮಾದ ಟಿಕೆಟ್ ಬೆಲೆ ಎಲ್ಲೆಡೆ ದುಬಾರಿ ಇರಲಿದೆ.. ಆದ್ರೆ ಆಂಧ್ರದಲ್ಲಿ ಮಾತ್ರ 100 ರೂಪಾಯಿಗಿಂತಲೂ ಕಡಿಮೆಯಿರಲಿದೆ ಟಿಕೆಟ್ ದರ..
ಜಗನ್ ಸರ್ಕಾರ ಆಂಧ್ರ ಪ್ರದೇಶ ಸರ್ಕಾರವು ಟಿಕೆಟ್ ದರವನ್ನ ಹತ್ತಿರ ಹತ್ತಿರ 80 ರೂಪಾಯಿಗೆ ಇಳಿಸಿದೆ.
ಕೆಜಿಎಫ್ 2 ಗೆ ಸರ್ಕಾರವೇ ಟಿಕೆಟ್ ದರ ನಿಗದಿ ಪಡಿಸಿದೆ.. ಕಳೆದ ವಾರವಷ್ಟೇ RRR ಸಿನಿಮಾ ರಿಲೀಸ್ ಆಗಿದ್ದು ಆಂಧ್ರದಲ್ಲಿ ಟಿಕೆಟ್ ದರ 150 ರಿಂದ 250, 300 ರವರೆಗೆ ಮಾರಾಟವಾದವು.
ಈಗ ಕೆಜಿಎಫ್ 2 ಸಿನಿಮಾ ಸಹ ಆಂಧ್ರದಲ್ಲಿ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಕೆಜಿಎಫ್ 2 ಸಿನಿಮಾ ಸಹ ದೊಡ್ಡ ಬಜೆಟ್ ಸಿನಿಮಾ ಆದರೂ KGF 2 ಪರಬಾಷಾ ಸಿನಿಮಾ ಅನ್ನೋ ಕಾರಣಕ್ಕೆ ಟಿಕೆಟ್ ದರ ಹೆಚ್ಚಿಸಿಕೊಳ್ಳಲು ಅವಕಾಶ ನೀಡಲಾಗಿಲ್ಲ.