ಒಂದೇ ದಿನ 30 ಕ್ಕೂ ಹೆಚ್ಚು ಮಕ್ಕಳಿಗೆ ಹಾರ್ಟ್ ಸರ್ಜರಿ ಮಾಡಿಸಿದ ಮಹೇಶ್ ಬಾಬು
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರು ದೊಡ್ಡ ಸೂಪರ್ ಸ್ಟಾರ್ .. ಅವರ ಮಾಸ್ ಆಕ್ಟಿಂಗ್ ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ.. ಆದ್ರೆ ಮಹೇಶ್ ಬಾಬು ಅವರು ನಟನೆಯ ಹೊರತಾಗಿಯೂ ಜನಮೆಚ್ಚುಗೆ ಕೆಲಸ ಮಾಡ್ತಾ ಮತ್ತಷ್ಟು ಅಭಿಮಾನಿಗಳನ್ನ ಸಂಪಾದಿಸಿದ್ಧಾರೆ.. ಮಹೇಶ್ ಬಾಬು ಅವರು ಗ್ರಾಮ ದತ್ತು ಪಡೆಯುವುದು , ಬಡವರಿಗೆ ಸಹಾಯ ಮಾಡುವುದು ಹಾರ್ಟ್ ಸರ್ಜರಿ ಮಾಡಿಸುವಂತಹ ಸಮಾಜಮುಖಿ ಕೆಲಸಗಳನ್ನ ಮಾಡುತ್ತಿರುತ್ಥಾರೆ..
ಈ ಮೂಲಕ ಸಿನಿಮಾದಲ್ಲಷ್ಟೇ ಅಲ್ಲ, ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ಸಾವಿರಾರು ಮಕ್ಕಳ ಪಾಲಿಗೆ ದೇವರು ಆಗಿದ್ದಾರೆ..
ತಮ್ಮ ಮಹೇಶ್ ಬಾಬು ಫೌಂಡೇಷನ್ ಮೂಲಕ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಸ್ವಂತ ಹಣದಿಂದ ಹೃದಯ ಸರ್ಜರಿ ಮಾಡಿಸುತ್ತಿದ್ದಾರೆ.
ಮಹೇಶ್ ಬಾಬು ಫೌಂಡೇಶನ್ ಹಾರ್ಟ್ ತೊಂದರೆಯಿಂದ ಬಳಲುತ್ತಿರುವ ಮಕ್ಕಳನ್ನು ಹುಡುಕಿ ಚಿಕಿತ್ಸೆ ಕೊಡಿಸುತ್ತಾರೆ. ಇತ್ತೀಚೆಗೆ ಆಂಧ್ರಾ ಆಸ್ಪತ್ರೆ ಜೊತೆ ಸೇರಿ ಮಹೇಶ್ ಬಾಬು ಒಂದು ದಿನದಲ್ಲಿ ಸುಮಾರು 30 ಮಕ್ಕಳಿಗೆ ಹೃದಯ ಸರ್ಜರಿ ಮಾಡಿಸಿದ್ದಾರೆ.