ಬಾಡಿ ಶೇಮಿಂಗ್ ಗೆ ಒಳಗಾಗಿದ್ದ ಅನುಭವ ಬಿಚ್ಚಿಟ್ಟ ವೈಷ್ಣವಿ..!!!
ಕಿರುತೆರೆ ಮೂಲಕ ಮೋಡಿ ಮಾಡಿ ಈಗ ಸ್ಯಾಂಡಲ್ ವುಡ್ ನಲ್ಲಿ ನೆಲೆ ಕಂಡುಕೊಳ್ತಿರುವ ಚೆಂದುಳ್ಳಿ ಎಚಲುವೆ ವೈಷ್ಣವಿಗೆ ಅವರದ್ದೇ ಆದ ಅಭಿಮಾನಿಗಳ ಬಳಗವಿದೆ.. ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ವಿಭಿನ್ನ ವ್ಯಕ್ತಿತ್ವದಿಂದಲೇ ಮತ್ತಷ್ಟು ಜನಾಭಿಮಾನ ಗಳಿಸಿ ಫೈನಲ್ಸ್ ವರೆಗೂ ಬಂದಿಉದ್ದರು ವೈಷ್ಣವಿ..
ಆದ್ರೆ ಅನೇಕ ನಟಿಯರಂತೆ ವೈಷ್ಣವಿ ಅವರೂ ಸಹ ಬಾಡಿ ಶೇಮಿಂಗ್ ಗೆ ಒಳಗಾಗಿದ್ದರಂತೆ.. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ,..
ಹೌದು ಕೆಲ ವರ್ಷಗಳ ಹಿಂದೆ ಅವರನ್ನ ‘ಡುಮ್ಮಿ’ ಎಂದು ರೇಗಿಸುತ್ತಿದ್ದರಂತೆ. ‘ನಾನು ಹೈಸ್ಕೂಲ್ ದಿನಗಳಲ್ಲಿದ್ದಾಗ ಅಪ್ಪ ಅಮ್ಮನೇ ಎಲ್ಲ ಕೆಲಸವನ್ನು ಮಾಡುತ್ತಿದ್ದರು. ಕುಳಿತುಕೊಂಡು ತಿನ್ನುವುದಷ್ಟೇ ನನ್ನ ಕೆಲಸ. ಹಾಗಾಗಿ ದಪ್ಪ ಆಗಿದ್ದೆ.
ಎಲ್ಲರೂ ನನ್ನನ್ನು ಡುಮ್ಮಿ ಎಂದು ರೇಗಿಸುತ್ತಿದ್ದರು. ನನ್ನ ಹೈಟ್ ಕಡಿಮೆ ಇದ್ದ ಕಾರಣಕ್ಕೆ ನಾನು ಡುಮ್ಮಿಯ ರೀತಿಯಲ್ಲೇ ಕಾಣಿಸುತ್ತಿದ್ದೆ. ಜನರು ಹಾಗೆ ರೇಗಿಸಿದಾಗ ಕೋಪ ಬರುತ್ತಿತ್ತು ಎಂದು ಹೇಳಿಕೊಂಡಿದ್ದಾರೆ ..
ಅಲ್ಲದೇ ನಾನು ಈಗ ಸಣ್ಣಗಿದ್ದೇನೆ. ಆದರೂ, ನನ್ನ ದೇಹಾಕಾರದಲ್ಲಿ ಕೆಲ ಸಮಸ್ಯೆಗಳು ಇವೆ. ಅವುಗಳನ್ನು ಈಗಲೂ ನಾನು ಸರಿ ಪಡಿಸಿಕೊಳ್ಳುತ್ತಲೇ ಇರುತ್ತೇನೆ. ಯಾವುದೂ ಪರ್ ಫೆಕ್ಟ್ ಅಲ್ಲ. ನಿರಂತರವಾಗಿ ನಮ್ಮ ಸೌಂದರ್ಯವನ್ನು ನಾವು ಕಾಪಾಡಿಕೊಳ್ಳುತ್ತಲೇ ಇರಬೇಕು. ಜನರು ಅದಕ್ಕೆ ಅವಮಾನ ಮಾಡುವ ರೀತಿಯಲ್ಲಿ ಮಾತನಾಡಬಾರದು ಎಂದಿದ್ಧಾರೆ..