ಬಾಲಿವುಡ್ ನ ಕರಾಳ ಮುಖ ಬಿಚ್ಚಿಟ್ಟ ವಿವೇಕ್ ಒಬೆರಾಯ್… ಯಾರದ್ದೋ ದ್ವೇಷಕ್ಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ.,.!!
ಬಾಲಿವುಡ್ ಮಾಫಿಯಾ… ನೆಪೋಟಿಸಮ್ ಬಗ್ಗೆ ಯಾರಿಗೂ ಗೊತ್ತಿರದ ಸಂಗತಿಯೇನಲ್ಲ.. ಬಾಲಿವುಡ್ ನಲ್ಲಿ ಸ್ಟಾರ್ ಕಿಡ್ ಗಳು ಅಂದ್ರೆ ಟ್ಯಾಲೆಂಟ್ ಇಲ್ಲಾ ಅಂದ್ರೂ ಅವರನ್ನ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಾಯಕಿ ನಾಟಯಕಿಯಾಗಿ ಮಾಡಲಾಗುತ್ತದೆ.. ಕೆಲವರಷ್ಟೇ ಟ್ಯಾಲೆಂಟ್ ಇರೋರು ಅನ್ನೋದು ಬಾಲಿವುಡ್ ನ ಸ್ಟ್ರಗಲಿಂಗ್ ಆಕ್ಟರ್ ಗಳು , ಹಾಗೂ ಸಿನಿಮಾ ಪ್ರಿಯರ ಆರೋಪಗಳು.. ಇಂದು ಬಾಲಿವುಡ್ ಅಬ್ಬರ ಕಡಿಮೆಯಾಗೋದಕ್ಕೆ ಕಾರಣವೇ ಇದು.. ಸುಶಾಂತ್ ಸಿಂಗ್ ನಿಧನದ ನಂತರವಂತೂ ಈ ನೆಪೋಟಿಸಮ್ ಬೆಂಕಿ ಹೊತ್ತಿ ಉರಿದಿತ್ತು.. ಬಾಲಿವುಡ್ ವಿರುದ್ಧ ಜನ ಮುಗಿಬಿದ್ದಿದ್ರು..
ಅದ್ರಲ್ಲೂ ಕಂಗನಾ ರಣಾವಂತ್ ಅಂತೂ ಬಾಲಿವುಡ್ ದೊಡ್ಡ ದೊಡ್ಡ ಮಂದಿ ವಿರುದ್ಧವೇ ಮುಗಿಬಿದ್ದಿದ್ದರು.. ಕರಣ್ ಜೋಹರ್ ನಂತಹ ದೊಡ್ಡ ಕುಳಗಳ ವಿರುದ್ಧ ನಿರ್ಭೀತವಾಗಿ ಮಾತನಾಡಿದ್ದರು.. ಇದೀಗ ಬಾಲಿವುಡ್ ನ ಕರಾಳ ಮುಖವಾಡವನ್ನ ಅದೇ ಬಾಲಿವುಡ್ ನ ನಟ ವಿವೇಕ್ ಓಬರಾಯ್ ಅವರು ಕಳಚಿದ್ದಾರೆ..
ಹೌದು ವಿಶ್ವದ ಅತಿ ದೊಡ್ಡ ಸಿನಿಮಾರಂಗಳಲ್ಲಿ ಒಂದೆನಿಸಿಕೊಂಡಿರುವ ಸೋ ಕಾಲ್ಡ್ ಬಾಲಿವುಡ್ ನ ಮತ್ತೊಂದು ಮುಖವಾಡವನ್ನ ವಿವೇಕ್ ಪರಿಚಿಯಿಸಿದ್ದಾರೆ.
ನಾನು ಇಲ್ಲಿ, ಸಾಕಷ್ಟು ಕೆಟ್ಟ ದಿನಗಳನ್ನು ನೋಡಿದ್ದೇನೆ. ಕೆಟ್ಟ ಕಮೆಂಟ್ ಗಳು, ನಿಂದನೆಗಳನ್ನು, ಅವಮಾನಗಳನ್ನ ಸಹಿಸಿಕೊಂಡಿದ್ದೇನೆ. ಅವೆಲ್ಲವೂ ನನ್ನನ್ನು ಇನ್ನಷ್ಟು ಗಟ್ಟಿಯಾಯಿಸಿದೆ. ಒಂದು ಸಮಯವಿತ್ತು ನಾನು ಸತತ ಹಿಟ್ ಸಿನಿಮಾಗಳನ್ನು ನೀಡಿದ್ದೆ, ಹಲವು ಪ್ರಶಸ್ತಿಗಳನ್ನು ಸಹ ಪಡೆದೆ. ಆದರೆ ಕೂಡಲೆ ಸಮಯ ಪಲ್ಲಟವಾಯ್ತು ಸತತವಾಗಿ ಒಂದುವರೆ ವರ್ಷ ನಾನು ಕೆಲಸವಿಲ್ಲದೆ ಮನೆಯಲ್ಲಿ ಕುಳಿತುಕೊಳ್ಳುವಂತಾಯಿತು. ಯಾರದ್ದೋ ದ್ವೇಷದಿಂದ ನನಗೆ ಆ ಗತಿ ಬಂದಿತ್ತು ಎಂದಿದ್ಧಾರೆ..
ನೀನು ಎಷ್ಟೇ ಚೆನ್ನಾಗಿ ನಟಿಸು, ಕೆಲಸ ಮಾಡು ನಿನಗೆ ಇನ್ನು ಮುಂದೆ ಈ ಉದ್ಯಮದಲ್ಲಿ ಕೆಲಸ ಸಿಗುವುದಿಲ್ಲ ಎಂದು ನೇರವಾಗಿ ನನಗೆ ಹೇಳಿದ್ದರು. ಆ ನಂತರವೂ ನಾನು ಸಾಕಷ್ಟು ಶ್ರಮ ಪಟ್ಟು ಕೆಲಸ ಮಾಡಿದೆ. ಈಗ ನಾನಿರುವ ಹಂತಕ್ಕೆ ಬರಲು ಬಹಳ ಕಷ್ಟಪಟ್ಟಿದ್ದೇನೆ. ಇನ್ನೂ ನಾನು ಸಾಕಷ್ಟು ದೂರ ಪ್ರಯಾಣ ಮಾಡಬೇಕಿದೆ. ಇನ್ನೂ ಸಾಕಷ್ಟು ಸಾಧಿಸಬೇಕಿದೆ ಎಂದಿದ್ದಾರೆ..
ಅಂದ್ಹಾಗೆ ವಿವೇಕ್ ಅವರು ಪರೋಕ್ಷವಾಗಿ ತಮ್ಮ ಸ್ಥಿತಿಗೆ ಸಲ್ಮಾನ್ ಕಾರಣವೆಂದು ಹೇಳಿರುವಂತಿದೆ.. ಯಾಕೆಂದ್ರೆ ವಿವೇಕ್ ಒಬೆರಾಯ್ ಹಾಗೂ ಸಲ್ಮಾನ್ ಖಾನ್ ನಡುವೆ ಜಗಳ ನಡೆದಿತ್ತು.. ಅದಾದ ಬಳಿಕವೇ ವಿವೇಕ್ ಒಬೆರಾಯ್ ವೃತ್ತಿ ಜೀವನ ಕುಸಿದಿತ್ತು. ಹಲವು ಪ್ರಾಜೆಕ್ಟ್‌ಗಳಿಂದ ವಿವೇಕ್ ಒಬೆರಾಯ್ ಅನ್ನು ಕೈಬಿಡಲಾಯಿತು. ಆದರೂ ಬಹಳ ಕಷ್ಟಗಳ ನಂತರ ಇನ್ನೂವರೆಗೂ ಬಾಲಿವುಡ್ ನಲ್ಲಿ ಸಕ್ರಿಯರಾಗಿದ್ದಾರೆ.