ರವೀನಾ ಆಲಿಯಾಸ್ ರಮಿಕಾ ಸೇನ್ ಪಾತ್ರವನ್ನ ಇಂದಿರಾ ಗಾಂಧಿಗೆ ಹೋಲಿಸುತ್ತಿರುವ ಅಭಿಮಾನಿಗಳು
ಬರೊಬ್ಬರಿ 21 ವರ್ಷಗಳ ಬಳಿಕ ರವೀನಾ ಟಂಡನ್ ಕನ್ನಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಉಪೇಂದ್ರ ನಿರ್ದೇಶನದ ಉಪೇಂದ್ರ ಸಿನಿಮಾದಲ್ಲಿ ಮಸ್ತ ಮಸ್ತು ಹುಡುಗಿ ಬಂದ್ಲು ಅಂತ ಕುಣಿದು ಹೋಗಿದ್ದ ಚೆಲುವೆ ಇದೀಗ ಪ್ರಧಾನಮಂತ್ರಿಯಂತಹ ಸೀರಿಯಸ್ ಕ್ಯಾರೆಕ್ಟರ್ ಮೂಲಕ ಮತ್ತೆ ಬಂದಿದ್ದಾರೆ.
ಹಲವು ವರ್ಷಗಳ ನಂತರ ಕನ್ನಡ ಸಿನಿಮಾ ರಂಗಕ್ಕೆ ಬಾಲಿವುಡ್ ತಾರೆ ರವೀನಾ ಟಂಡನ್ ಅವರನ್ನು ಕರೆತಂದಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಕೆಜಿಎಫ್ 2 ಸಿನಿಮಾದಲ್ಲಿ ರವೀನಾ ಪಾತ್ರದ ಬಗ್ಗೆ ಈಗ ಹಲವು ರೀತಿಯಲ್ಲಿ ಚರ್ಚೆಗಳು ನಡೆಯು
ಕೆಜಿಎಫ್ 2 ಸಿನಿಮಾದಲ್ಲಿ ರವೀನಾ ಟಂಡನ್ ಅವರು ರೀಮಾ ಸೇನಾ ಹೆಸರಿನ ಪಾತ್ರ ಮಾಡಿದ್ದಾರೆ. ರವೀನಾ ಟಂಡನ್ ಈ ಸಿನಿಮಾದಲ್ಲಿ ಪ್ರಧಾನ ಮಂತ್ರಿಯಾಗಿ ನಟಿಸಿದ್ದಾರೆ. ಥೇಟ್ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯನ್ನು ಹೋಲುವಂತೆಯೇ ನಟಿಸಿದ್ದಾರೆ. ರವೀನಾ ಆಡುವ ಮಾತಿನ ಶೈಲಿ, ಅವರ ಉಡುಗೆ ತೊಡುಗೆ, ಅವರ ಹಾವ ಭಾವ ಹೀಗೆ ಎಲ್ಲವೂ ಇಂದಿರಾ ಗಾಂಧಿಯಂತೆಯೇ ಹೋಲುತ್ತದೆ. ಇಂದಿರಾಗಾಂಧಿಯವರನ್ನೇ ಸ್ಪೂರ್ತಿಯಾಗಿ ತೆಗೆದುಕೊಂಡು ಪಾತ್ರವನ್ನ ಕ್ರಿಯೇಟ್ ಮಾಡಿರಬಹುದೇನೋ ಅನಿಸುವಂತಿದೆ.
ಈ ಬಗ್ಗೆ ಸಿನಿಮಾ ತಂಡವಾಗಲಿ ಅಥವಾ ಸ್ವತಃ ರವೀನಾ ಟಂಡನ್ ಆಗಲಿ ಈ ಕುರಿತು ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ, ಸಿನಿಮಾ ನೋಡಿ ಹೊರಬಂದವರು ಮಾತ್ರ ಇಂದಿರಾ ಗಾಂಧಿ ಅವರಿಗೆ ಹೋಲಿಕೆ ಮಾಡುತ್ತಿದ್ದಾರೆ. ಬಹಳ ಬಳಿಕ ರವಿನಾ ಅವರನ್ನ ಪ್ರತಿಭೆಯನ್ನ ಚೆನ್ನಾಗಿ ಉಪಯೋಗಿಸಿಕೊಳ್ಳಲಾಗಿದೆ ಎಂದು ಟ್ವೀಟರ್ ನಲ್ಲಿ ಅಭಿಮಾನಿಗಳು ಬರೆದುಕೊಳ್ಳುತ್ತಿದ್ದಾರೆ.