ಕೆಜಿಎಫ್ ಜೊತೆಗೆ ಬಿಡುಗೆಯಾದ ಭಯಂಕರ “ಕಾಂತಾರ” ಟೀಸರ್
“ಕಾಂತಾರ” ಈ ಹೆಸರು ಕೇಳಿದ್ರೆ ಏನೋ ಒಂದು ರೀತಿ ಸ್ಪೆಷಲ್ ವಿಭಿನ್ನ ಅನಿಸುವಂತಿದೆ. ನಟ ಮತ್ತು ನಿರ್ದೇಶಕ ರಿಷಬ್ ಶೇಟ್ಟಿ ನಿರ್ದೇಶನದಲ್ಲಿ, ಹೊಂಬಾಳೆ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಹೈವೋಲ್ಟೇಜ್ ಚಿತ್ರ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಬಿಡುಗಡೆಯಾಗಿದ್ದ ಟೀಸರ್ ಕೂಡ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಕೆಜಿಎಫ್ ಚಾಪ್ಟರ್ 2 ಸಿನಿಮಾ ಜೊತೆಯೇ ಕಾಂತಾರ ಮತ್ತು ರಾಘವೇಂದ್ರ ಸ್ಟೋರ್ಸ್ ಎಂಬ ಎರಡು ಸಿನಿಮಾಗಳ ಟೀಸರ್ ಬಿಡುಗಡೆಯಾಗಿದೆ.
ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಕರಾವಳಿ ಭಾಗದ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಕರಾವಳಿಯ ಧಾರ್ಮಿಕ ಆಚಾರ ವಿಚಾರ, ಆಚರಣೆಗಳನ್ನು ನಂಬಿಕೊಂಡು ಬರುತ್ತಿರುವ ಸಮುದಾಯಕ್ಕೆ ಪೊಲೀಸ್ ಆಫೀಸರ್ ಪಾತ್ರದಲ್ಲಿ ಅಭಿನಯಿಸಿರುವ ಕಿಶೋರ್ ಸೆಡ್ಡು ಹೊಡೆಯುತ್ತಾರೆ. ಪೊಲೀಸ್ ಅಧಿಕಾರಿ ಮತ್ತು ಕರಾವಳಿ ಯುವಕನ ನಡುವಿನ ತಿಕ್ಕಾಟಗಳು ಚಿತ್ರದ ಬಗ್ಗೆ ತಿಳಿಸಿಕೊಡುತ್ತಿದೆ.
ಕೆಜಿಎಫ್ ಚಾಪ್ಟರ್ 2 ಜೊತೆಗೆ ನವರಸ ನಾಯಕ ಜಗ್ಗೇಶ ನಾಯಕನಾಗಿ ನಟಿಸುತ್ತಿರುವ ರಾಘವೇಂದ್ರ ಸ್ಟೋರ್ ಸಿನಿಮಾ ಟೀಸರ್ ಸಹ ಬಿಡುಗಡೆಯಾಗಿದೆ. ಇದೇ ಮೊದಲ ಭಾರಿಗೆ ಜಗ್ಗೇಶ್ ಅವರ ಚಿತ್ರಕ್ಕೆ ಹೊಂಬಾಳೆ ಬ್ಯಾನರ್ ಹಣ ಹೂಡಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡುತ್ತಿದ್ದಾರೆ. 40 ವಯಸ್ಸು ಕಳೆದರೂ ಮದುವೆಯಾಗದ ವ್ಯಕ್ತಿಯ ಪಾತ್ರದಲ್ಲಿ ಜಗ್ಗೇಶ್ ನಮ್ಮನ್ನ ನಗಿಸುತ್ತಾರೆ.