ಫೋಟೋ ನೋಡಿ ಮೋಸಹೋಗಬೇಡಿ , ಸೆಲೆಬ್ರಿಟಿಗಳ ತ್ವಚೆ ನೋಡಿ ಪರಿಪೂರ್ಣ ಅಂದುಕೊಳ್ಬೇಡಿ : ಮಾಳವಿಕ
ಸಲೆಬ್ರಿಟಿಗಳು ಅಂದಾಕ್ಷಣ ಅವರ ಲುಕ್ಸ್ , ಅವರ ತ್ವಚೆ , ಅವರ ಫಿಟ್ ನೆಸ್ ಅವರ ಸೌಂದರ್ಯದ ಬಗ್ಗೆಯೇ ಹೆಚ್ಚು ಚರ್ಚೆ ಮಾಡ್ತೇವೆ.. ವಿಸೇಷವಾಗಿ ನಟಿಯರು ಅಂದ್ರೆ ಅವರ ಸೌಂದರ್ಯ ಅವರ ತ್ವಚೆ ಎಷ್ಟು ಪರಿಪೂರ್ಣ ಅನಿಸುತ್ತದೆ..
ಆದ್ರೆ ಅಸಲಿಯಾಗಿ ಅವರು ಸಹ ನಮ್ಮಂತೆಯೇ ಸಾಕಷ್ಟು ತ್ವಚೆ ಸಮಸ್ಯೆಗಳನ್ನ ಎದುರಿಸುತ್ತಾರೆ. ಆದ್ರೆ ಮೇಕಪ್ ಹೊರತಾಗಿ ನೈಜವಾಗಿ ಕ್ಯಾಮೆರಾಗೆ ಫೋಸ್ ಕೊಡುವ ನಟಿಯರು ವಿರಳದಲ್ಲೇ ಅತ್ಯಂತ ವಿರಳ..
ಆದ್ರೆ ಇದೀಗ ಮಾಲಿವುಡ್ ನ ಗ್ಲಾಮರಸ್ ಗೊಂಬೆ ಮಾಳವಿಕ ಮೋಹನ್ , ಸೆಲಬ್ರಿಟಿಗಳ ಸತ್ಯ ಬಿಚಚ್ಚಿಟ್ಟು ತಾವೂ ಸಹ ಪರಿಪೂರ್ಣ ಅಲ್ಲ ಎಂದು ಹೇಳುತ್ತಾ , ಮೇಕಪ್ ರಹಿತ ಫೋಟೋ ಪೋಸ್ಟ್ ಮಾಡಿದ್ದಾರೆ.. ಅದ್ರಲ್ಲಿ ಅವರ ಮೊಡವೆಗಳು ಸ್ಪಷ್ಟವಾಗಿ ಕಾಣುತ್ತೆ..
ಆದ್ರೆ ವಿತೌಟ್ ಮೇಕಪ್ ಕೂಡ ಈ ನಟಿ ನ್ಯಾಚುರಲ್ ಆಗಿಯೇ ಸುಂದರವಾಗಿ , ಕ್ಯೂಟ್ ಆಗಿದ್ದಾರೆ.., ಅದನ್ನೇ ನೆಟ್ಟಿಗರು ಸಹ ಹೇಳುತ್ತಿದ್ದು , ತಮ್ಮ ನ್ಯಾಚುರಲ್ ಸ್ಕಿನ್ ತೋರಿಸಿ ಧೈರ್ಯ ಪ್ರದರ್ಶಿಸಿದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ..
KGF 2 : ಸುಲ್ತಾನಾ ಸಾಂಗ್ ನಲ್ಲಿ ರಾಕಿ ಖದರ್ ಖದರ್ ಪ್ರದರ್ಶನ
INSTAGRAM : ಪೋಸ್ಟ್ ನಲ್ಲಿ ಏನಿದೆ..??
“ಲೆಟ್ – ಯುವರ್ – ಸ್ಕಿನ್ – ಬ್ರೀಥ್ – ಡೇ” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಸುಧೀರ್ಗವಾಗಿ ಬರೆದುಕೊಂಡಿರುವ ನಟಿ “ ಚರ್ಮವು ಸಮಗ್ರ ಆರೋಗ್ಯದ ಪ್ರತಿಬಿಂಬವಾಗಿರುವುದರಿಂದ ನಾನು ಆರೋಗ್ಯಕರವಾಗಿ ತಿನ್ನಲು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಲು ಪ್ರಯತ್ನಿಸುತ್ತೇನೆ ಎಂದು ಹಂಚಿಕೊಂಡಿದ್ದಾರೆ..
ಫೋಟೋಗಳಲ್ಲಿ ನಟ ನಟಿಯರು ಚರ್ಮ/ಕೂದಲು/ಉಗುರುಗಳು/ ಲುಕ್ಸ್ ಗೆ ನೀವು ಫಿದಾ ಆಗಬಹುದು.. ಆದರೆ ಅದು ವಾಸ್ತವದಲ್ಲಿ ಹಾಗಲ್ಲ. ವಾಸ್ತವವಾಗಿ, ನಾನು ನಿನ್ನೆ ಚಿತ್ರೀಕರಿಸಿದ ಜಾಹೀರಾತನ್ನು ನೀವು ನೋಡಿದಾಗ ನೀವು ‘ವಾವ್ ಎಂಥ ದೋಷರಹಿತ ಚರ್ಮ!’ ಎಂಬಂತೆ ಇರುತ್ತೀರಿ.
ಇದು ದೋಷರಹಿತವಾಗಿ ಕಾಣಿಸಬಹುದು, ಆದರೆ ವಾಸ್ತವದಲ್ಲಿ ಅದು ಎಂದಿಗೂ ಪರಿಪೂರ್ಣವಲ್ಲ. ಅಲ್ಲದೆ ‘ಪರಿಪೂರ್ಣ’ ಎನ್ನುವುದು ತುಂಬಾ ವ್ಯಕ್ತಿನಿಷ್ಠವಾಗಿದೆ ಮತ್ತು ಮನುಷ್ಯ ನಿರ್ಮಿತವಾಗಿದೆ ನಾ?” ನಿರ್ಣಾಯಕವಾಗಿ, ಅವರು “ಪರಿಪೂರ್ಣ” ಎಂಬ ಕಲ್ಪನೆಯಲ್ಲಿ ಸಿಲುಕಿಕೊಳ್ಳಬೇಡಿ ಎಂದಿದ್ಧಾರೆ..