ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್
ಬಾಲಿವುಡ್‌ನ ಸೆಲೆಬ್ರಿಟಿ ಕಪಲ್ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪಾಲಿ ಹಿಲ್‌ನಲ್ಲಿರುವ ರಣಬೀರ್ ಕಪೂರ್ ಅವರ ವಾಸ್ತು ಅಪಾರ್ಟ್‌ಮೆಂಟ್‌ನಲ್ಲಿ ಜೋಡಿಯ ಸಪ್ತಪದಿಯನ್ನ ತುಳಿದಿದ್ದಾರೆ. ಈ ಮೂಲಕ ಕಪೂರ್ ಮತ್ತು ಭಟ್ ಬಾಲಿವುಡ್‌ನ ಎರಡು ದೊಡ್ಡ ಮತ್ತು ಹಳೆಯ ಸಿನಿಮಾ ಕುಟುಂಬಗಳು ನೆಂಟಸ್ತಿಕೆಯನ್ನ ಬೆಳೆಸಿವೆ.
ವಿಶೇಷವೆಂದರೆ ಎರಡೂ ಕುಟುಂಬಗಳ ತೀರಾ ಸರಳ ರೀತಿಯಲ್ಲಿ ವಿವಾಹವಾಗುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ರಣಬೀರ್-ಆಲಿಯಾ ಅವರ ಈ ಮದುವೆಗೆ ಅನೇಕ ಬಾಲಿವುಡ್ ಸೆಲೆಬ್ರೆಟಿಗಳನ್ನೆ ಆಹ್ವಾನಿಸಲಾಗಿಲ್ಲ. ಇಬ್ಬರ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.
ಈ ಮದುವೆಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ಮದುಮಗ ರಣಬೀರ್ ಕಪೂರ್ ತೆಗೆದುಕೊಂಡಿದ್ದಾರೆ. ರಣಬೀರ್ ಗೆ ವೀಜೃಂಭಣೆಯಿಂದ ಮದುವೆಯಾಗುವುದು ಇಷ್ಟವಿರಲಿಲ್ಲ. ಆದ್ದರಿಂದಲೇ ಅವರ ಇಷ್ಟವನ್ನ ಗಮನದಲ್ಲಿಟ್ಟುಕೊಂಡು ಈ ಮದುವೆ ನಡೆದಿದೆ. ಆದರೆ, ಮದುವೆ ವಿಜೃಂಭಣೆಯಿಂದ ನಡೆಯಬೇಕೆಂದು ಭಟ್ ಕುಟುಂಬದವರು ಬಯಸಿದ್ದರು. ಯಾಕೆಂದರೆ ಇದುವರೆಗೆ ಭಟ್ ಮನೆತನದಲ್ಲಿ ನಡೆದ ಎಲ್ಲಾ ಮದುವೆಗಳು ಅತ್ಯಂತ ಸರಳವಾಗಿ ನಡೆಯುತ್ತಿದ್ದವು.
ಅದಕ್ಕಾಗಿಯೇ ಭಟ್ ಕುಟುಂಬ ಆಲಿಯಾಳ ಮದುವೆಯನ್ನು ಅವಿಸ್ಮರಣೀಯವಾಗಿ ಮಾಡಲು ಬಯಸಿದ್ದರು. ಆದರೆ ರಣಬೀರ್ ನಿರ್ಧಾರವನ್ನು ಗೌರವಿಸಬೇಕು ಎಂದು ಆಲಿಯಾ ಕುಟುಂಬಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು. ಹಾಗಾಗಿ ಅಂತ್ಯಂತ ಸರಳ ರೀತಿಯ ಮದುವೆಗೆ ಭಟ್ ಕುಟುಂಬದವರು ಒಪ್ಪಿಗೆ ಸೂಚಿಸಿದರು.
ರಣಬೀರ್ ಕಪೂರ್ ಚಿತ್ರರಂಗದ ಅಂತರ್ಮುಖಿ ನಟ. ತುಂಬಾ ನಾಚಿಕೆ ಸ್ವಭಾವದ ಹುಡುಗ. ಇಂಡಸ್ಟ್ರಿಯಲ್ಲಿ ಸೆಲೆಬ್ರಿಟಿ ಪಾರ್ಟಿಗಳಿಗೂ ಅವರು ಹಾಜರಾಗುವುದಿಲ್ಲ. ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಲ್ಲ.