KGF 2 RRR ಗಿಂತಲೂ ಕೆಟ್ಟ ಸಿನಿಮಾ : ವಿಮರ್ಶಕ KRK ತಲೆ ಸರಿ ಇಲ್ಲ ಎಂದ ನೆಟ್ಟಿಗರು..!!!
KGF…. KGF… KGF… ಅಬ್ಬಬ್ಬಾ ಏನ್ ಗುರು KGF2 ಹವಾ..!! ಎಲ್ಲಿ ನೋಡಿದ್ರೂ ರಾಕಿ ಗುಣಗಾನ ,,, ಯಾರ್ ನೋಡಿದ್ರೂ ಪ್ರಶಾಂತ್ ನೀಲ್ ಸಿನಿಮಾದ ಬಗ್ಗೆಯೇ ಚರ್ಚೆ… ಕನ್ನಡ ಸಿನಿಮಾವನ್ನ ಇಡೀ ದೇಶಕ್ಕೇ ದೇಶವೇ ಕೊಂಡಾಡುತ್ತಿದೆ.. ರಾಕಿ ಭಾಯಯ್ ಹವಾಗೆ ಎಲ್ಲರೂ ದಂಗಾಗಿದ್ದಾರೆ.. ಸಿನಿಮಾದ ಮೇಕಿಂಗ್ ಸ್ರೀನ್ ಪ್ಲೇ ನೋಡಿ ಅದ್ಭುತ ಎನ್ನುತ್ತಿದ್ದಾರೆ..
ಬಾಲಿವುಡ್ ಗೆ ರಾಕಿ ಭಾಯ್ ನಡುಕ ಹುಟ್ಟಿಸಿದ್ದಾರೆ.. ಅಪ್ಪಿ ತಪ್ಪಿ ಜೆರ್ಸಿ ಸಿನಿಮಾ ರಿಲೀಸ್ ಆಗಿದ್ರೆ ,,, ಉಸಿರು ಗಟ್ಟಿ ಹೇಳ ಹೆಸರಿಲ್ಲದಂತೆ ಹೊರಟುಉಹೋಗ್ತಿತ್ತು.. ಬೀಸ್ಟ್ ನಂತಹ ಬೀಸ್ಟ್ ಸಿನಿಮಾವೇ ರಾಕಿ ಭಾಯ್ ಹವಾ ಮುಂದೆ ಮಂಕಾಗಿದೆ..
ಆದ್ರೆ ಕೆಲವರಿಗೆ ಸೌತ್ ಸಿನಿಮಾಗಳ ಕಂಡ್ರೆ ಉರಿ… ಏನ್ ಮಾಡೋಕೆ ಆಗಲ್ಲ.. ಬಾಲಿವುಡ್ ಬಿದ್ದೋಗ್ತಿದೆ ಅನ್ನೋ ಹತಾಶೆಯಲ್ಲಿ ಹಾಗಾಡ್ತಾರೆ..

ಅಂದ್ಹಾಗೆ ‘ದೇಶದ್ರೋಹಿ’ ಖ್ಯಾತಿಯ ಕಮಲ್ ಆರ್ ಖಾನ್ ಬಗ್ಗೆ ನಿಮಗೆಲ್ಲಾ ಗೊತ್ತೇ ಇರುತ್ತೆ ಅಲ್ವಾ… ಗೊತ್ತಿಲ್ಲದೇ ಇರೊದಕ್ಕೆ ಹೇಗ್ ಸಾಧ್ಯ.. ಈ ಪುಣ್ಯಾತ್ಮರು ಹೇಳಿದ ಭವಿಷ್ಯ ಈವರೆಗೂ ಯಾವುದಾದ್ರೂ ನಿಜವಾಗಿದ್ರೆ ಅಲ್ವಾ.. KRK ಅಂದ್ರೆ ಕಮಾಲ್ ಆರ್ ಖಾನ್ ಒ್ಲಾಪ್ ಅಂತ ಒಂದು ಸಿನಿಮಾದ ಬಗ್ಗೆ ಭವಿಷ್ಯ ನುಡಿದರು ಅಂತ ಇಟ್ಕೊಳ್ಳಿ.. ಕನ್ ಫರ್ಮ್ ಅದು ಬ್ಲಾಕ್ ಬಾಸ್ಟರ್ ಸೂಪರ್ ಹಿಟ್ ಅಂತ ನೆಟ್ಟಿಗರು ಫಿಕ್ಸ್ ಆಗ್ತಾರೆ.. ಬ್ಲಾಕ್ ಬಾಸ್ಟರ್ ಆಗುತ್ತೆ ಸಹ.. ಇದಕ್ಕೆ ಉದಾಹರಣೆ , ಬಾಹುಬಲಿ ,. ಬಾಹುಬಲಿ 2 , RRR, The Kashmir Files ಈಗ KGF 2..
ಅದೇ ಅವರು ಒಂದು ಸಿನಿಮಾ ಹಿಟ್ , ಸೂಪರ್ ಹಿಟ್ ಆಗುತ್ತೆ ಅಂತ ಹೇಳಿದ್ರೂ ಅಂತಿಟ್ಟುಕೊಳ್ಳಿ,, ನೋ ವೇ ಚಾನ್ಸೇ ಇಲ್ಲ , ಯಾವುದೇ ಕಾರಣಕ್ಕೂ ಈ ಸಿನಿಮಾ ಮಾತ್ರ ನೋಡಲೇ ಬಾರದು ಅನ್ನೋ ನಿರ್ಧಾರಕ್ಕೆ ನೆಟಿಜನ್ಸ್ ಬರುತ್ತಾರೆ.. ಸೂಪರ್ ಹಿಟ್ ಅಂದ ಸಿನಿಮಾಗಳು ಉಸಿರಾಡೋದಕ್ಕೆ ಕಷ್ಟವಾಗಿ ಹೆಸರಿಲ್ಲದಂತೆ ಹೊರಟು ಹೋಗಿವೆ.. ಇದಕ್ಕೆ ಉದಾಹರಣೆಯೇ , ಬಚ್ಚನ್ ಪಾಂಡೆ , ರಾಧೆ ಶ್ಯಾಮ್ ಇತ್ಯಾದಿ..
ಹೌದು…!!! ಸೋ ಕಾಲ್ಡ್ ವಿಮರ್ಶಕ ‘ದೇಶದ್ರೋಹಿ’ ಖ್ಯಾತಿಯ ಕಮಾಲ್ ಆರ್ ಖಾನ್ ಸೌತ್ ಸ್ಟಾರ್ ಗಳನ್ನ ಕರಡಿಗೆ ಹೋಲಿಸಿದ್ದು , ಬಾಲಿವುಡ್ ಸ್ಟಾರ್ ಗಳಷ್ಟು ಸೌತ್ ಸ್ಟಾರ್ ಗಳು ಚನಾಗಿಲ್ಲ ಎಂದದ್ದು , ರಾಜಮೌಳಿಗೆ ಡೈರೆಕ್ಷನ್ ಬರಲ್ಲ , RRR ಫ್ಲಾಪ್ , RRR ನಲ್ಲಿ ಲಾಜಿಕ್ ಇಲ್ಲ , ಅತ್ಯಂತ ಕೆಟ್ಟ ಸಿನಿಮಾ ಐತಿಹಾಸಿಕ ಫ್ಲಾಪ್ ಎಂದವರು RRR ಅಬ್ಬರ ನೋಡಿ ಉರಿದುಕೊಂಡಿದ್ದರು.. 1000 ಕೋಟಿ ಕಲೆಕ್ಷನ್ ದಾಟಿದ್ರೂ ಸಿನಿಮಾತಂಡ ಫೇಕ್ ರಿಪೋರ್ಟ್ ನೀಡಿದೆ ಅಂತ ವಾದಿಸಿ , ಜನರನ್ನೇ ಮೂರ್ಖರನ್ನಾಗಿ ಮಾಡಲು ಹೋಗಿ ಜನರಿಂದ ಛೀಮಾರಿ ಹಾಕಿಸಿಕೊಂಡವರು..
ನೆಟ್ಟಿಗರು ಇವರನ್ನ ಕಾಮಿಡಿ ಪೀಸ್ ಅಂತ ಕರೆಯೋದು ಸುಮ್ನೆ ಅಲ್ಲ ಅಂತ ಆಗಾಗ ಪ್ರೂವ್ ಮಾಡಿಕೊಳ್ತಾರೆ..
ಇದೀಗ ,, ಇಡೀ ವಿಶ್ವದಲ್ಲಿ ಸೆನ್ಷೇಷನ್ ಸೃಷ್ಟಿ ಮಾಡಿರುವ , ಬಾಕ್ಸ್ ಆಫೀಸ್ ನಲ್ಲಿ ತೂಫಾನ್ ಎಬ್ಬಿಸಿರುವ , ಬಾಲಿವುಡ್ ನ ಶೇಕ್ ಮಾಡಿರುವ KGF 2 ಸಿನಿಮಾವನ್ನೇ ದಡಬ್ಬ ಸಿನಿಮಾ ಅಂದು ಡಬ್ಬಾ ರಿವ್ಯೂ ಕೊಟ್ಟು ಮತ್ತೊಮ್ಮೆ ನೆಟ್ಟಿಗರಿಂದ ಬಾಯಿಗೆ ಬಂದಹಾಗೆ ಉಗಿಸಿಕೊಳ್ತಿದ್ದಾರೆ ಸೋ ಕಾಲ್ಡ್ ಸಿನಿಮಾ ವಿಮರ್ಶಕ ಕಮಾಲ್ ಆರ್ ಖಾನ್..
ಕೆಜಿಎಫ್ 2 ಚಿತ್ರ ನೋಡಡಿರುವ ಪೀ ಮಹಾನುಭಾವರು ಚಿತ್ರದ ಬಗ್ಗೆ ವಿಮರ್ಶೆ ಮಾಡಿದ್ದಾರೆ. ಪೂರ್ತಿ ಚಿತ್ರವನ್ನು ನೋಡುವ ಮೊದಲೇ, 30 ನಿಮಿಷ ಚಿತ್ರವನ್ನು ನೋಡಿ, ಈ ಚಿತ್ರ ನೋಡಿ ತಲೆ ಹಾಳಾಗಿದೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ 30 ನಿಮಿಷಗಳ #KGF2 ಚಿತ್ರ ಮುಗಿದು ಹೋಗಿದೆ ಮತ್ತು ಇಲ್ಲಿ ಏನಾಗುತ್ತಿದೆ ಎನ್ನುವುದು ಗೊತ್ತೇ ಆಗುತ್ತಿಲ್ಲ , ಸಿಕ್ಕಾಪಟ್ಟೆ ಡೈಲಾಗ್. ತಲೆ ಕೆಟ್ಟು ಹೋಗಿದೆ. ಇದು #RRR ಗಿಂತ 10 ಪಟ್ಟು ದೊಡ್ಡದಾದ ಕೆಟ್ಟ ಸಿನಿಮಾ ಎಂದು ಬರೆದುಕೊಂಡಿದ್ದಾರೆ.
ಇವರು ಈ ರೀತಿ ಟ್ವೀಟ್ ಮಾಡಿದ ಮೇಲೆ ನೆಟ್ಟಿಗರು ಸುಮ್ಮನೆ ಬಿಡಬೇಕಲ್ಲ..
‘ದೇಶದ್ರೋಹಿ’ ನಟ ಎಂದೇ ಟ್ರೋಲ್ ಮಾಡುತ್ತಿದ್ದಾರೆ. ಬಾಯಿಗೆ ಬಂದ ಹಾಗೆ ಬಯ್ಯುತ್ತಾ KGF 2 ನ ಕೊಂಡಾಡ್ತಿದ್ದಾರೆ.. ಇನ್ನೂ ಕೆಲವರು ಕಣ್ಣನ್ನ ಟೆಸ್ಟ್ ಮಾಡಿಸಿಕೊಳ್ಳಿ ಅಂದ್ರೆ ಇನ್ನೂ ಕೆಲವರು ಹುಚ್ಚಾಸ್ಪತ್ರೆಗೆ ಸೇರಿಕೊಳ್ಳಿ ಎಂದೆಲ್ಲಾ ಕಾಮೆಂಟ್ ಗಳನ್ನ ಮಾಡ್ತಿದ್ದಾರೆ. ಇನ್ನು ಕೆಲವರು ಈತನ್ನು ಬಂಧಿಸುವಂತೆ ಮುಂಬೈ ಪೊಲೀಸರ ಬಳಿ ಮನವಿ ಮಾಡಿದ್ದಾರೆ.
ಉರ್ ಕೊಳ್ಳೋರು ಉರಿದುಕೊಳ್ಳಲಿ, ನಿಮ್ ಹವಾ ಹೀಗೆ ಮುಂದುವರೆಯಲಿ ಎನ್ನುತ್ತಾ KGF ಗೆ ನೆಟಿಜನ್ಸ್ ಹಾರೈಸುತ್ತಿದ್ದಾರೆ..
https://twitter.com/kamaalrkhan/status/1514531576343941120?ref_src=twsrc%5Etfw%7Ctwcamp%5Etweetembed%7Ctwterm%5E1514531576343941120%7Ctwgr%5E%7Ctwcon%5Es1_&ref_url=https%3A%2F%2Fwww.bollywoodlife.com%2Fhi%2Fsouth-gossip%2Fkgf-2-krk-review-kannada-star-yash-and-director-prashanth-neel-brutally-trolled-by-ex-bigg-boss-contestant-bollywood-gossips-entertainment-news-2049472%2F