KGF 2 ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಅವರಿಗೆ ಆರಂಭದಲ್ಲಿ ಯಾರೂ ಕಾಲ್ ಶೀಟ್ ನೀಡಿರಲಿಲ್ವಂತೆ..!!!
KGF 2 ಹವಾ ಮುಂದೆ ಬೀಸ್ಟ್ ಊಸ್ಟ್ ಆಗಿದೆ.. RRR ಹವಾ ಸ್ಟಾಪ್ ಆಗಿದೆ… ಯುದ್ಧಕ್ಕೂ ಮುನ್ನವೇ ಬಾಲಿವುಡ್ ನ ಜೆರ್ಸಿ ಫಲಾಯಾನ ಮಾಡಿದೆ.. ಬಾಕ್ಸ್ ಆಫೀಸ್ ನಡುಗುತ್ತಿದೆ…
ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನವೇ KGF 2 ಕರ್ನಾಟಕದಲ್ಲಿ 38 ಕೋಟಿ , ಹಿಂದಿ ಅವತರಣಿಕೆಯಲ್ಲಿ 40 ಕೋಟಿಗೂ ಅದಿಕ ಕಲೆಕ್ಷನ್ ಮಾಡಿದೆ.. ಓವರ್ ಆಲ್ ಆಗಿ ಕೇವಲ ಭಾರತದಲ್ಲೇ 134 ಕೋಟಿ ರೂಪಾಯಿ ಗಳಿಸಿದೆ.. ಅದು ಫಸ್ಟ್ ಡೇ… ಗ್ಲೋಬಲ್ ಆಗಿ ತೆಗೆದುಕೊಂಡ್ರೆ ಬಾಕ್ಸ್ ಆಫೀಸ್ ಕಲಲೆಕ್ಷನ್ ಫಸ್ಟ್ ಡೇ , ಬಾಹುಬಲಿ , ಬಾಹುಬಲಿ 2 , RRR , ಬೀಸ್ಟ್ ಎಲ್ಲದರ ರೆಕಾರ್ಡ್ ಚಿಂದಿ ಚಿತ್ರಾನ್ನ ಮಾಡಿದೆ..
ಕೆಜಿಎಫ್ ಚಿತ್ರದ ಮೂಲಕ ಹೀರೋ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಕೇವಲ ಹಣ ಗಳಿಸುವ ಉದ್ದೇಶದಿಂದ ಸಿನಿಮಾ ಮಾಡುವ ಕೋರ್ಸ್‌ಗೆ ಸೇರಿಕೊಂಡ ಪ್ರಶಾಂತ್ ನೀಲ್.
ಆರಂಭದಲ್ಲಿ ಎರಡು ಮೂರು ಸಣ್ಣ ಚಿತ್ರಗಳಿಗೆ ಚಿತ್ರಕಥೆ ಬರಹಗಾರರಾಗಿ ಕೆಲಸ ಮಾಡಿದರು. ಆ ಸಮಯದಲ್ಲಿ ಸ್ವಂತ ಕಥೆ ಬರೆದು ಸಿನಿಮಾ ಮಾಡುವ ಪ್ಲಾನ್ ಮಾಡಿಕೊಂಡಿದ್ದರು. ಹೊಸಬ.. ಅದರಲ್ಲೂ ‘ರೂಟಿನ್’ ಕಥೆ. ಹಾಗಾಗಿಯೇ ಯಾವ ನಟರೂ ಕಾಲ್ಶೀಟ್ ಕೊಟ್ಟಿಲ್ಲ. ಹೀಗಾಗಿ ಪ್ರಶಾಂತ್ ತಮ್ಮ ಬಾವ, ಹೀರೋ ಶ್ರೀಮುರಳಿ ಜೊತೆ ಸಿನಿಮಾ ಮಾಡಿದ್ರು. ಪರಿಣಾಮ.. ‘ಉಗ್ರಂ’ (2014) ಹಿಟ್ ಟಾಕ್ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತು. ಮೊದಲ ಸಿನಿಮಾದಿಂದಲೇ ಪ್ರಶಾಂತ್ ಮಾಸ್ ನಿರ್ದೇಶಕರಾದರು.
ಉಗ್ರಂ’ ನಂತರ ಪ್ರಶಾಂತ್ ಜೊತೆ ಸಿನಿಮಾ ಮಾಡಲು ಸಾಕಷ್ಟು ಮಂದಿ ಮುಂದೆ ಬಂದ್ರು. ಆದ್ರೆ ಪ್ರಶಾಂತ್ ಹೀರೋಗಳ ಬಾಡಿ ಲಾಂಗ್ವೇಜ್‌ಗೆ ಹೊಂದುವ ಕಥೆಯನ್ನು ಬರೆದುಕೊಳ್ಳುತ್ತಾರೆ. ಅದಕ್ಕಾಗಿಯೇ ಯಶ್ ಗೋಸ್ಕರ ಕೆಜಿಎಫ್ ಕಥೆಯನ್ನು ಬರೆದುಕೊಂಡಿದ್ದರು. ಪ್ರಶಾಂತ್ ನೀಲ್ ಹೇಳುವಂತೆ ಈ ಕಥೆಗೆ ಸ್ಪೂರ್ತಿ ಬಾಲಿವುಡ್ ಕಲ್ಟ್ ಕ್ಲಾಸಿಕ್ ‘ಶೋಲೆ’ ಸಿನಿಮಾವಂತೆ. ಮುಖ್ಯವಾಗಿ ಆ ಸಮಯದಲ್ಲಿ ಆಂಗ್ರಿ ಯಂಗ್ ಮ್ಯಾನ್ ಹೆಸರಿದ್ದ ಅಮಿತಾಬ್ ಬಚ್ಚನ್ ಸ್ಫೂರ್ತಿಯಿಂದಲೇ ಯಶ್ ಗೆ ರಾಕಿಭಾಯ್ ಕ್ಯಾರೆಕ್ಟರ್ ಬರೆದುಕೊಂಡೆ ಎಂದಿದ್ದಾರೆ ಪ್ರಶಾಂತ್ ನೀಲ್.
ವಾಸ್ತವವಾಗಿ, ಪ್ರಶಾಂತ್ ಮೊದಲು ಕೌಟುಂಬಿಕ ಕಥೆಯೊಂದಿಗೆ ನಿರ್ಮಾಪಕ ವಿಜಯ್ ಕಿರಗಂದೂರ್ (ಹೋಮ್ ಫಿಲ್ಮ್ಸ್) ಅವರನ್ನು ಸಂಪರ್ಕಿಸಿದರು. ಅಂತಿಮವಾಗಿ ಭಾರಿ ಬಜೆಟ್ ಕಥೆ ಕೆಜಿಎಫ್ ಗೆ ಓಕೆ ಅಂದ್ರು. ಕೋಲಾರದ ಚಿನ್ನದ ಗಣಿ ಬಗ್ಗೆ ಈವರೆಗೂ ಸಿನಿಮಾ ಬಂದಿಲ್ಲ. ಆದರೆ, ‘ವಿವಾದ’ಗಳ ಭಯದ ನಡುವೆಯೂ ಪ್ರಶಾಂತ್-ವಿಜಯ್-ಯಶ್ ಈ ಪ್ರಾಜೆಕ್ಟ್ ಕೈಗೆತ್ತಿಕೊಂಡರು.
ಕೆಜಿಎಫ್ ಚಾಪ್ಟರ್ 1 ಸಿನಿಮಾ ಮೂಲಕ ಪ್ರಶಾಂತ್ ನೀಲ್ ಕನ್ನಡ ಸಿನಿಮಾದ ತಾಖತ್ತನ್ನ ಇಡೀ ವಿಶ್ವಕ್ಕೆ ಪರಿಚಯಿಸಿದರು. ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್-1 ಮೂಲಕ ಸ್ಯಾಂಡಲ್‌ವುಡ್ ಮಾರ್ಕೆಟ್ ಅನ್ನೇ ಸಮುದ್ರದಾಚೆಗೆ ಬೆಳೆಸಿದರು. ಪ್ರಸ್ತುತ ರಿಲೀಸ್ ಆಗಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾ ಕೂಡ ಇಂಡಿಯಾಸ್ ಬ್ಲಾಕ್ ಬಸ್ಟರ್ ಹಿಟ್ ಆಗಿದೆ.