KGF ಚಾಪ್ಟರ್ 2 ಅಬ್ಬರ ನೋಡಿ ಸಹಿಸಿಕೊಳ್ಳೋದಕ್ಕೆ ಆಗ್ತಿಲ್ವಾ..??? ಬಾಲಿವುಡ್ ಮಾಫಿಯಾ..???
KGF 2 ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನವೇ KGF 2 ಕರ್ನಾಟಕದಲ್ಲಿ 38 ಕೋಟಿ , ಹಿಂದಿ ಅವತರಣಿಕೆಯಲ್ಲಿ 40 ಕೋಟಿಗೂ ಅದಿಕ ಕಲೆಕ್ಷನ್ ಮಾಡಿದೆ.. ಓವರ್ ಆಲ್ ಆಗಿ ಕೇವಲ ಭಾರತದಲ್ಲೇ 134 ಕೋಟಿ ರೂಪಾಯಿ ಗಳಿಸಿದೆ.. ಅದು ಫಸ್ಟ್ ಡೇ… ಗ್ಲೋಬಲ್ ಆಗಿ ತೆಗೆದುಕೊಂಡ್ರೆ ಬಾಕ್ಸ್ ಆಫೀಸ್ ಕಲಲೆಕ್ಷನ್ ಫಸ್ಟ್ ಡೇ , ಬಾಹುಬಲಿ , ಬಾಹುಬಲಿ 2 , RRR , ಬೀಸ್ಟ್ ಎಲ್ಲದರ ರೆಕಾರ್ಡ್ ಚಿಂದಿ ಚಿತ್ರಾನ್ನ ಮಾಡಿದೆ..
ಹೌದು… ವಿಮರ್ಶಕರ ವರದಿಇಗಳ ಪ್ರಕಾರ ಸಿನಿಮಾ ಗ್ಲೋಬಲ್ ವೈಸ್ ಫಸ್ಟ್ ಡೇ 2550 -275 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ.. ಇದು ಕನ್ನಡ ಸಿನಿಮಾರಂಗದ ಇತಿಹಾಸದಲ್ಲೇ ಮೊದಲು.. ಕನ್ನಡಿಗರ ಹೆಮ್ಮೆ KGF 2…
ತಮಿಳುನಾಡು , ತೆಲುಗಿನಲ್ಲೂ KGF ಅಬ್ಬರಿಸುತ್ತಿದೆ.. ಹಾಗೆ ನೋಡಿದ್ರೆ ಹಿಂದೆಯಲ್ಲೂ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದರ್ಬಾರ್ ಮಾಡ್ತಿದೆ.. ಆದ್ರೆ ಇದೀಗ ಹಿಂದಿ ಮೀಡಿಯಾಗಳು
ರಾಕಿ ವಿರುದ್ಧ ಮುಗಿಬಿದ್ದಿದ್ದಾರೆ.. ಸಿನಿಮಾದ ಬಗ್ಗೆ ನೆಗೆಟಿವ್ ಆಗಿಯೇ ರಿವ್ಯೂ ಕೊಡ್ತಿದ್ದು ಮೈನಸ್ ಪಾಯಿಂಟ್ ಗಳನ್ನೇ ಹೈಲೇಟ್ ಮಾಡ್ತಿರೋದು ನೋಡ್ತಿದ್ರೆ ,, ಬಾಲಿವುಡ್ ಮಾಫಿಯಾ ಬಗ್ಗೆ ಸೈಲೆಂಟ್ ಆಗಿ ಟಾಕ್ ಶುರುವಾಗ್ತಿದೆ..
ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಸ್ಕ್ರೀನ್ ಪ್ರಜೆನ್ಸ್, ಮದರ್ ಸೆಂಟಿಮೆಂಟ್ ಸಿನಿಮಾದ ಹೈಲೆಟ್ ಆಗಿದೆ.
ಒಟ್ಟಾರೆಯಾಗಿ ಸಿನಿಮಾಗೆ ಅತ್ಯುತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಆದ್ರೆ ಬಾಲಿವುಡ್ ಮೀಡಿಯಾ ಮಾತ್ರ ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ನೆಗೆಟಿವ್ ರಿವ್ಯೂ ಕೊಡುತ್ತಿದೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾ ರಿಲೀಸ್ ಗೂ ಮುನ್ನಾ ತುಟಿಬಿಚ್ಚಿದ ಹಿಂದಿ ಮಿಡಿಯಾ, ಇದೀಗ ಕೆಜಿಎಫ್ ಚಾಫ್ಟರ್ 2 ಸಿನಿಮಾಗೆ ನೆಗೆಟಿವ್ ರಿವ್ಯೂ ಕೊಡುತ್ತಿದೆ.
ಮುಖ್ಯವಾಗಿ ಸಿನಿಮಾದ ಮೈನಸ್ ಪಾಯಿಂಟ್ ಗಳನ್ನೇ ಹೆಚ್ಚಾಗಿ ತೋರಿಸುತ್ತಿದೆ. ಹಿಂದಿ ಮಿಡಿಯಾದಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಗ್ಗೆ ಹೊಗಳಿ ಒಂದೆಡೆರು ವೆಬ್ ಸೈಟ್ ಗಳು ಮಾತ್ರ ಬರೆದಿವೆ.
ಒಂದಿಬ್ಬರು ವಿಮರ್ಷಕರು ಮಾತ್ರ ಪಾಸಿಟಿವ್ ಆಗಿ ಬರೆದಿದ್ದಾರೆ. ಆದ್ರೆ ಇನ್ನುಳಿದ ಬಾಲಿವುಡ್ ಪ್ರಿಯರು ಹೊಟ್ಟೆ ಕಿಚ್ಚನ್ನ ತಮ್ಮ ಬರವಣಿಗೆಯಲ್ಲಿ ತೋರಿಸಿದ್ದಾರೆ.
ಇದಲ್ಲದೇ ಮೊನ್ನೆ ಮೊನ್ನೆ ರಿಲೀಸ್ ಆದ ಆರ್ ಆರ್ ಆರ್ , ಪುಷ್ಪಾ ಸಿನಿಮಾ ವಿಷಯಗಳಲ್ಲಿಯೂ ಹಿಂದಿ ಮಿಡಿಯಾ ರೀತಿ ಮಾಡಿತ್ತು.