KGF 2 : ಕೊನೆಗೂ ಹಿಸ್ಟರಿ ಕ್ರಿಯೇಟ್ ಮಾಡಿಯೇ ಬಿಟ್ಟ ರಾಕಿ..!! ಫಸ್ಟ್ ಡೇ 134 ಕೋಟಿ ಕಲೆಕ್ಷನ್ ಕೇವಲ ಭಾರತದಲ್ಲಿ ಅಷ್ಟೇ..!!!
KGF 2 ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನವೇ KGF 2 ಕರ್ನಾಟಕದಲ್ಲಿ 38 ಕೋಟಿ , ಹಿಂದಿ ಅವತರಣಿಕೆಯಲ್ಲಿ 40 ಕೋಟಿಗೂ ಅದಿಕ ಕಲೆಕ್ಷನ್ ಮಾಡಿದೆ.. ಓವರ್ ಆಲ್ ಆಗಿ ಕೇವಲ ಭಾರತದಲ್ಲೇ 134 ಕೋಟಿ ರೂಪಾಯಿ ಗಳಿಸಿದೆ.. ಅದು ಫಸ್ಟ್ ಡೇ… ಗ್ಲೋಬಲ್ ಆಗಿ ತೆಗೆದುಕೊಂಡ್ರೆ ಬಾಕ್ಸ್ ಆಫೀಸ್ ಕಲಲೆಕ್ಷನ್ ಫಸ್ಟ್ ಡೇ , ಬಾಹುಬಲಿ , ಬಾಹುಬಲಿ 2 , RRR , ಬೀಸ್ಟ್ ಎಲ್ಲದರ ರೆಕಾರ್ಡ್ ಚಿಂದಿ ಚಿತ್ರಾನ್ನ ಮಾಡಿದೆ..
ಹೌದು… ವಿಮರ್ಶಕರ ವರದಿಇಗಳ ಪ್ರಕಾರ ಸಿನಿಮಾ ಗ್ಲೋಬಲ್ ವೈಸ್ ಫಸ್ಟ್ ಡೇ 2550 -275 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ.. ಇದು ಕನ್ನಡ ಸಿನಿಮಾರಂಗದ ಇತಿಹಾಸದಲ್ಲೇ ಮೊದಲು.. ಕನ್ನಡಿಗರ ಹೆಮ್ಮೆ KGF 2…
ಓವರ್ ಆಲ್ ಆಗಿ ಸಿನಿಮಾ ತೂಫಾನ್ ,,, ಸುಂಟರಗಾಳಿ , ಸುನಾಮಿ , ಚಂಡಮಾರುತ , ಬಿರುಗಾಳಿ ಎಲ್ಲವನ್ನೂ ಒಟ್ಟಾಗಿ ಎಬ್ಬಿಸಿ , ಬಾಲಿವುಡ್ ಡಲ್ ಅನ್ನೋದನ್ನ ಫಸ್ಟ್ ಡೇ ಕಲೆಕ್ಷನ್ ಮೂಲಕ ಸಾಬೀತು ಮಾಡಿದೆ..
ಏಪ್ರಿಲ್ 13 ರ ಮಧ್ಯರಾತ್ರಿಯಿಂದಲೇ ಶರುವಾದ ರಾಕಿಬಾಯ್ ವೈಯಲ್ಸ್ ನ್ನ ಕಂಡು ಗಲ್ಲಾ ಪೆಟ್ಟಿಗೆ ಬೆಚ್ಚಿಬಿದ್ದಿದೆ. ವಿಶ್ವಾದ್ಯಂತ 10.000 ಸಾವಿರ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದ್ದ ಚಿತ್ರ ದಾಖಲೆಯ ಮಟ್ಟಕ್ಕೆ ಕಲೆಕ್ಷನ್ ಮಾಡಿದೆ. ಭಾರತದಾದ್ಯಂತ ಚಿತ್ರದ ಕಲೆಕ್ಷನ್ 134.5 ಕೋಟಿ ತಲುಪಿದೆ. ಈ ಮಾಹಿತಿಯನ್ನ ಹೊಂಬಾಳೆ ಫೀಲಂಸ್ ನವರು ಅಧಿಕೃತವಾಗಿ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಆದರೆ ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ಕಲೆಕ್ಷನ್ ಕುರಿತು ಇನ್ನೂ ಮಾಹಿತಿಗಳು ಬರಬೇಕಿದೆ. ಕೆಲ ಸಿನಿ ಪಂಡಿತರ ಪ್ರಕಾರ ಚಿತ್ರ ವಿಶ್ವಾದ್ಯಂತ 180 ಕೋಟಿ ದಾಟಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಕೆಲವು ಬಾಕ್ಸ್ ಆಫೀಸ್ ಪಂಡಿತರು ಚಿತ್ರದ ಕಲೆಕ್ಷನ್ 250 ಕೋಟಿ ದಾಟಿದೆ ಎಂದು ಹೇಳುತ್ತಿದ್ದಾರೆ.
ಕರ್ನಾಟಕದಲ್ಲಿಯೇ ಈ ಚಿತ್ರ ಬರೊಬ್ಬರಿ 35 ಕೋಟಿಯನ್ನ ಗಳಿಸಿ ಮೊದಲ ದಿನದ ರೆಕಾರ್ಡ ಸೃಷ್ಟಿಮಾಡಿದೆ. ಹಿಂದಿಬೆಲ್ಟ್ ನಲ್ಲಿ ಹಿಂದಿ ಚಿತ್ರ ವಾರ್ ಸಿನಿಮಾದ ಮೊದಲ ದಿನದ ದಾಖಲೆಯನನ್ ಅಳಿಸಿ ಅತಿಹೆಚ್ಚು ಅಂದರೆ 53 ಕೋಟಿ ರುಪಾಯಿಯನ್ನ ಗಳಿಸಿದೆ.