KGF 2 : ಕೇವಲ ಒಂದು ಗಂಟೆಯಲ್ಲಿ 500 NFT ಟೋಕನ್‌ಗಳ ಮಾರಾಟ
KGF 2 ಹವಾ ಮುಂದೆ ಬೀಸ್ಟ್ ಊಸ್ಟ್ ಆಗಿದೆ.. RRR ಹವಾ ಸ್ಟಾಪ್ ಆಗಿದೆ… ಯುದ್ಧಕ್ಕೂ ಮುನ್ನವೇ ಬಾಲಿವುಡ್ ನ ಜೆರ್ಸಿ ಫಲಾಯಾನ ಮಾಡಿದೆ.. ಬಾಕ್ಸ್ ಆಫೀಸ್ ನಡುಗುತ್ತಿದೆ…
ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನವೇ KGF 2 ಕರ್ನಾಟಕದಲ್ಲಿ 38 ಕೋಟಿ , ಹಿಂದಿ ಅವತರಣಿಕೆಯಲ್ಲಿ 40 ಕೋಟಿಗೂ ಅದಿಕ ಕಲೆಕ್ಷನ್ ಮಾಡಿದೆ.. ಓವರ್ ಆಲ್ ಆಗಿ ಕೇವಲ ಭಾರತದಲ್ಲೇ 134 ಕೋಟಿ ರೂಪಾಯಿ ಗಳಿಸಿದೆ.. ಅದು ಫಸ್ಟ್ ಡೇ… ಗ್ಲೋಬಲ್ ಆಗಿ ತೆಗೆದುಕೊಂಡ್ರೆ ಬಾಕ್ಸ್ ಆಫೀಸ್ ಕಲಲೆಕ್ಷನ್ ಫಸ್ಟ್ ಡೇ , ಬಾಹುಬಲಿ , ಬಾಹುಬಲಿ 2 , RRR , ಬೀಸ್ಟ್ ಎಲ್ಲದರ ರೆಕಾರ್ಡ್ ಚಿಂದಿ ಚಿತ್ರಾನ್ನ ಮಾಡಿದೆ..
ಕೆಜಿಎಫ್ ಚಿತ್ರದ ಮೂಲಕ ಹೀರೋ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಈ ಸಿನಿಮಾಗೆ, ಇದರಲ್ಲಿನ ಪಾತ್ರಗಳಿಗೆ, ಪ್ರದೇಶಗಳನ್ನು ಮೀರಿ ಅಭಿಮಾನಿಗಳಿದ್ದಾರೆ.
ಹೀಗಾಗಿ ಸಿನಿಮಾದ ನಿರ್ಮಾಪಕರು ಅಭಿಮಾನಿಗಳಿಗೆ ವಿಶೇಷವಾಗಿ ನಾನ್ ಫಂಜಿಬುಲ್ ಟೋಕನ್ ಗಳು, ಕೆಜಿಎಫ್‌ವರ್ಸ್ ಗಳನ್ನು ಮುನ್ನಲೆಗೆ ತಂದಿದ್ದಾರೆ.
ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್ ಕ್ಯಾರೆಕ್ಟರ್ ಅನ್ನು ಆಧಾರವಾಗಿಟ್ಟುಕೊಂಡು ಹತ್ತು ಸಾವಿರಕ್ಕೂ ಹೆಚ್ಚು ನಾನ್ ಫಂಜಿಬುಲ್ ಟೋಕನ್ ಗಳನ್ನು (NFT) ಬಿಡುಗಡೆ ಮಾಡಲಾಗಿದೆ..
ಕೇವಲ ಒಂದು ಗಂಟೆಯಲ್ಲಿ 500 NFT ಟೋಕನ್‌ಗಳನ್ನು ಮಾರಾಟವಾಗಿವೆ. ಇದುವರೆಗೆ ಎರಡು ಸಾವಿರಕ್ಕೂ ಹೆಚ್ಚು ಟೋಕನ್‌ಗಳು ಮಾರಾಟವಾಗಿವೆ.
ಬ್ಲಾಕ್ ಚೈನ್ ತಂತ್ರಜ್ಞಾನ ಹೆಚ್ಚಾದ ಬಳಿಕ ಸಿನಿಮಾಗಳ ಪ್ರಮೋಷನ್ ಎನ್ ಎಫ್ ಟಿಯಲ್ಲಿ ಒಂದು ಭಾಗವಾಗಿದೆ. ಅಮಿತಾಬ್ ಬಚ್ಚನ್, ರಾಮ್ ಗೋಪಾಲ್ ವರ್ಮಾ ಮುಂತಾದವರು ಈಗಾಗಲೇ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ರಾಧೇಶ್ಯಾಮ್ ಅವರ ಟ್ರೇಲರ್ ಅನ್ನು ಮೆಟಾವೇರ್ಸ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಪರಂಪಪರೆಯನ್ನು ಕೆಜಿಎಫ್ ನಿರ್ಮಾಪಕರು ಕೂಡ NFT ರೂಪದಲ್ಲಿ ಹೊಸ ರೀತಿಯ ಪ್ರಚಾರ ಶೂರು ಮಾಡಿದ್ದಾರೆ.
ಹೌದು… ವಿಮರ್ಶಕರ ವರದಿಇಗಳ ಪ್ರಕಾರ ಸಿನಿಮಾ ಗ್ಲೋಬಲ್ ವೈಸ್ ಫಸ್ಟ್ ಡೇ 2550 -275 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ.. ಇದು ಕನ್ನಡ ಸಿನಿಮಾರಂಗದ ಇತಿಹಾಸದಲ್ಲೇ ಮೊದಲು.. ಕನ್ನಡಿಗರ ಹೆಮ್ಮೆ KGF 2…