ವೈಲೆನ್ಸ್ ….. ವೈಲೆನ್ಸ್… ವೈಲೆನ್ಸ್… ಐ ಡೋಂಟ್ ಲೈಕ್ ಲೈಕ್ ವೈಲೆನ್ಸ್ ಬಟ್ ವೈಲೆನ್ಸ್ ಲೈಕ್ ಮೀ…!!!! ಅಂದುಕೊಂಡೇ ಬಂದ KGF 2 ತೂಫಾನ್ ಗ್ಲೋಬಲ್ ಬಾಕ್ಸ್ ಆಫೀಸ್ ಶೇಕ್ ಮಾಡಿದೆ…
ಸಿನಿಮಾ ಯಾವ ರೀತಿ ಇದೆ ಅನ್ನೊದಕ್ಕಿಂತ.. ವಾವ್ಹಾ..!!! ಏನ್ ಗುರು ಸಿನಿಮಾ ಇದು.,..!!! ಚಿಲ್ಸ್… ಗೂಸ್ ಬಂಪ್ಸ್…. ಇದು ಕನ್ನಡದ ಸಿನಿಮಾನೇನಾ… ನೆಕ್ಸ್ಟ್ ಲೆವೆಲ್… ಅಬ್ಬೋ ಇಂಡಿಯನ್ ಸಿನಿಮಾನಾ ಇದು ಅನ್ನೋ ರೇಂಜ್ ಗಿದೆ… ಈ ಸಿನಿಮಾ… ಇಂಡಿಯನ್ ಸಿನಿಮಾ ಹಿಸ್ಟರಿಯಲ್ಲಿ ರೆಕಾರ್ಡ್ ಮಾಡೋದ್ರಲ್ಲಿ ಡೌಟೇ ಇಲ್ಲ…
ನಾನ್ ಬರೋವರೆಗೂ ಮಾತ್ರ ಬೇರೆಯವರ ಹವಾ..!! ಬಂದ್ ಮೇಲೆ ನಂದೇ ಹವಾ,,,!!! ಅಮದು ಕೊಂಡೇ ಮೇ ಐ ಕಮ್ ಇನ್ ಅಂತ ಬಂದ ‘ಸುರ ಸುಲ್ತಾನಾ’ ರಾಕಿ ಭಾಯ್ ಹವಾ ಅಬ್ಬಬ್ಬಾ ಬೇರೆ ಲೆವೆಲ್…!!!
KGF 2 ಹವಾ ಮುಂದೆ ಬೀಸ್ಟ್ ಊಸ್ಟ್ ಆಗಿದೆ.. RRR ಹವಾ ಸ್ಟಾಪ್ ಆಗಿದೆ… ಯುದ್ಧಕ್ಕೂ ಮುನ್ನವೇ ಬಾಲಿವುಡ್ ನ ಜೆರ್ಸಿ ಫಲಾಯಾನ ಮಾಡಿದೆ.. ಬಾಕ್ಸ್ ಆಫೀಸ್ ನಡುಗುತ್ತಿದೆ…
ಇದು… ಇದು ನಿಜವಾಗ್ಲೂ ಚನಾಗಿರೋದು ಅಂದ್ರೆ…
ಸಿನಿಮಾ ಹೇಗಿದೆ..???
ಇದು ರಕ್ತದಲ್ಲಿ ಬರೆದ KGF ನ ಚರಿತ್ರೆಯಾಗಿದೆ.. ತಾಯಿಯ ಆಸೆಯ ಬೆನ್ನಟ್ಟಿ ಹೋಗುವ ರಾಕಿ ಕಲ್ಲು ಮುಳ್ಳಿನ ಹಾದಿಯ ಜಗದಲಿ ,,,, ಬೆಳೆದು , ರಾಕಿ ಭಾಯ್ ಆದ ಕಥೆಯಿದು..
ಸಿನಿಮಾ ಮುಗಿಯೋವರೆಗೂ ಆಡಿಯನ್ಸ್ ನ ಸೀಟ್ ತುದಿಯಲ್ಲಿ ಕೂರಿಸುವ ಎಕ್ಸೈಟ್ ಮೆಂಟ್ ಜೊತೆಗೆ ಎದೆ ಝಲ್ ಎನಿಸುವಂತಹ ಬಿಜಿಎಮ್ ,,, ರಾಕಿ ಭಾಯ್ ಡೈಲಾಗ್ಸ್ ಹೊಡೀತಿದ್ರೆ ,,, ಶಿಳ್ಳೆ ಚಪಾಳೆಗಳ ಸದ್ದು ಮತ್ತಷ್ಟು ಥ್ರಿಲ್.. ರಾಕಿ ಭಾಯ್ ಲುಕ್ , ಅವರ ಖದರ್ ಬೆಂಕಿಯಾಗಿದೆ..
ಸಿನಿಮಾದ ಸ್ಟೋರಿ ಲೈನ್ ಚಿಂದಿಯಾಗಿದೆ… ಕಥೆ ಕೊನೆವರೆಗೂ ಬೋರ್ ಆಗೋ ಮಾತೆ ಇಲ್ಲ..
ಮಾಸ್ ಸೀನ್ ಗಳಿಗೇನೂ ಕೊರತೆ ಇಲ್ಲಾ ಅನ್ನೋಕಿಂತ ಇರೋದೆಲ್ಲಾ ಬರೀ ಮಾಸ್ ಸೀನ್ ಗಳೇ.. ತಾಯಿ ಸೆಂಟಿಮೆಂಟ್ ಹೃದಯ ಮುಟ್ಟುತ್ತೆ..
ಸ್ಕ್ರೀನ್ ಪ್ಲೇ ನಲ್ಲಿ ಪ್ರಶಾಂತ್ ನೀಲ್ ಅವರಿಗೆ ಅವರೇ ಸಾಟಿ… ವಿಶ್ಯುವಾಲಿಟಿ ನೋಡ್ತಿದ್ರೆ ರೋಮಾಂಚನವಾಗುತ್ತೆ.. ಕ್ಷಣ ಕ್ಷಣಕ್ಕೂ ಥ್ರಿಲ್ ಹೆಚ್ಚಾಗುತ್ತಲೇ ಇರುತ್ತೆ… ರವೀನಾ ತಂಡನ್ ನೆಗೇಟಿವ್ ರೋಲಾ,,,, ಪಾಸಿಟಿವ್ ರೋಲಾ…??? ನಮಗೆ ಒಂದು ಕ್ಷಣ ಕನ್ಫ್ಯೂಸ್ ಆಗುತ್ತೆ..
ಬಂದೂಕಿನ ಸದ್ದು ಸಿನಿಮಾ ಪೂರ್ತಿ ಮೊಳಗುತ್ತಿದ್ದರೂ ತಾಯಿ – ಮಗನ ಸೆಂಟಿಮೆಂಟ್ ಸೆಲೆಯುತ್ತೆ..
ಭೂಲೋಕದ ನರಕ ( KGF) ದಲ್ಲಿ ಗರುಡನ ಹತ್ಯೆ ಮಾಡಿದ ನಂತರ ಅಲ್ಲಿಂದ ರಾಕಿ ವಾಪಸ್ ಬಂದಿದ್ದು ಹೇಗೆ… ಬರೋ ಅಷ್ಟ್ರಲ್ಲಿ ಪವರ್ ಫುಲ್ ಆಗಿ ಬದಲಾಗಿದ್ದು ಹೇಗೆ ಎಲ್ಲಾ ಗೊತ್ತಾಗುತ್ತೆ.. ಪ್ರಕಾಶ್ ರಾಜ್ ಅವರ ಪಾತ್ರಕ್ಕೆ ಅದರದ್ದೇ ಆದ ಮಹತ್ವವಿದೆ..
ಸಂಜಯ್ ದತ್ ಅವರ ಅಧೀರನ ಪಾತ್ರ ಡೇರಿಂಗ್ ಆಗಿದೆ.. ಸ್ಕ್ರೀನ್ ಅಪಿಯರೆನ್ಸ್ ಗೆ ಎದೆ ನಡುಗುವಷ್ಟು ಭಯಾನಕ ಎನಿಸುತ್ತೆ..
ನಿರ್ದೇಶಕರ ಆಶಯಕ್ಕೆ ತಕ್ಕಂತೆ ಸೊಗಸಾದ ಕೆಲಸ ನೀಡಿದ್ದಾರೆ ಛಾಯಾಗ್ರಾಹಕ ಭುವನ್ ಗೌಡರು. ಅತ್ಯದ್ಭುತವಾಗಿ ದೃಶ್ಯಗಳನ್ನು ಸೆರೆಹಿಡಿದಿರುವ ಅವರು, ಹೊಸದೊಂದು ಲೋಕವನ್ನೇ ಸೃಷ್ಟಿಸಿದ್ದಾರೆ.
ರಾಕಿ ಭಾಯ್ ಲೋಕ ನೋಡ್ತಿದ್ರೆ ಅವರ ಲೋಕಕ್ಕೆ ನಾವು ಹೋಗ್ಬಾರದೇ ಅನ್ಸುದ್ರೂ,,, ಅಬ್ಬಾ ಅಲ್ಲಿದ್ರೆ ನಾವು ನಮ್ದ ಪರಿಸ್ಥಿತಿ ಹೇಗಿರುತಿತ್ತು ಅನ್ಸುತ್ತೆ… KGF ನ ರಕ್ತ ಚರಿತ್ರೆಯ ಕಥೆ ಕೆಜಿರೆಫ್ ನಲ್ಲಿ ಮಾಸ್ ಸೀನ್ ಗಳು , ತಾಯಿ ಸೆಂಟಿಮೆಂಟ್ ಬಿಜಿಎಂ ಹೈಲೇಟ್ ಆದ್ರೂ ,,, ಕೆಜಿಎಫ್ 1 ಕ್ಕೆ ಹೋಲಿಸಿದರೆ, ಒಂದಷ್ಟು ಅಂಶಗಳು ಮಿಸ್ಸಿಂಗ್ ಎಂಬ ಭಾವ ಅಲ್ಲಲ್ಲಿ ಕಾಡುತ್ತದೆ… ಆದ್ರೂ ಅದ್ಭುತವಾಗಿ ಮೂಡಿಬಂದಿರುವ ಸಿನಿಮಾ ಇಂತಹ ಸಣ್ಣ ಪುಟ್ಟ ತಪ್ಪುಗಳನ್ನ ಮರೆಸುತ್ತದೆ..
ಗುಂಡಿನ ಮೊರೆತ ಅತಿಯಾಯ್ತು ಎನಿಸಿದ್ರೂ ,, ಓವರ್ ಆಲ್ ಆಗಿ ಯೋಚಿಸಿದಾಗ ಇಟ್ಸ್ ಓಕೆ ಅನ್ಸಿತ್ತೆ.. ಅಮ್ಮ-ಮಗನ ಎಮೋಷನ್ಸ್ ಗೆ ಇನ್ನಷ್ಟು ಒತ್ತು ನೀಡಿದ್ರೆ ಇನ್ನೂ ಅದ್ಭುತವಾಗಿರುತಿತ್ತು ಅನ್ಸುತ್ತೆ..
ತೂಫಾನ್ ಹಾಡು ಯೂಟ್ಯೂಬ್ ನಲ್ಲಿ ದಿಲ್ ಖುಷ್ ಮಾಡಿದ್ರೆ ,,, ಥಿಯೇಟರ್ ನಲ್ಲಿ ದಿಲ್ ಧಕ್ ಎನ್ಸುತ್ತೆ… ಗಗನವೇ ನೀ ಹಾಡು ಯೂಟ್ಯೂಬ್ ನಲ್ಲಿ ಸೌಂಡ್ ಮಾಡಿದ್ದು ಬೇರೆ ಥಿಯೇಟರ್ ನಲ್ಲಿ ಕಣ್ಣೀರು ತರಿಸುವ ರೇಂಗ್ ಗೆ ಮನಮುಟ್ಟುತ್ತೆ.. ಆ ಲಿರಿಕ್ಸ್ ಗೆ ಸೀಟ್ ಮೇಲೆ ಕೂತಿರೋ ಆಡಿಯನ್ಸ್ ಕಣ್ಣಂಚು ಒದ್ದದೆಯಾಗದೇ ಇರೋದು ಕಷ್ಟ.. ಸಾಹಸ ಸಂಯೋಜನೆ ಸೂಪರ್ ಆಗಿದೆ.. ಆದ್ರೂ ಅಧೀರನ ಜೊತೆಗೆ ರಾಕಿ ಭಾಯ್ ಮುಖಾಮುಖಿ ಫೈಟ್ ಇನ್ನಷ್ಟು ಪರಿಣಾಮಕಾರಿಯಾಗಿದ್ರೆ ಸಿನಿಮಾದ ಪ್ಲಸ್ ಪಾಯಿಂಟ್ ಗೆ ಬೋನಸ್ ರೀತಿ ಆಡ್ ಆಗ್ತಿತ್ತು..
ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನವೇ KGF 2 ಕರ್ನಾಟಕದಲ್ಲಿ 38 ಕೋಟಿ , ಹಿಂದಿ ಅವತರಣಿಕೆಯಲ್ಲಿ 40 ಕೋಟಿಗೂ ಅದಿಕ ಕಲೆಕ್ಷನ್ ಮಾಡಿದೆ.. ಓವರ್ ಆಲ್ ಆಗಿ ಕೇವಲ ಭಾರತದಲ್ಲೇ 134 ಕೋಟಿ ರೂಪಾಯಿ ಗಳಿಸಿದೆ.. ಅದು ಫಸ್ಟ್ ಡೇ… ಗ್ಲೋಬಲ್ ಆಗಿ ತೆಗೆದುಕೊಂಡ್ರೆ ಬಾಕ್ಸ್ ಆಫೀಸ್ ಕಲಲೆಕ್ಷನ್ ಫಸ್ಟ್ ಡೇ , ಬಾಹುಬಲಿ , ಬಾಹುಬಲಿ 2 , RRR , ಬೀಸ್ಟ್ ಎಲ್ಲದರ ರೆಕಾರ್ಡ್ ಚಿಂದಿ ಚಿತ್ರಾನ್ನ ಮಾಡಿದೆ..
ಹೌದು… ವಿಮರ್ಶಕರ ವರದಿಇಗಳ ಪ್ರಕಾರ ಸಿನಿಮಾ ಗ್ಲೋಬಲ್ ವೈಸ್ ಫಸ್ಟ್ ಡೇ 2550 -275 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ.. ಇದು ಕನ್ನಡ ಸಿನಿಮಾರಂಗದ ಇತಿಹಾಸದಲ್ಲೇ ಮೊದಲು.. ಕನ್ನಡಿಗರ ಹೆಮ್ಮೆ KGF 2…
ಓವರ್ ಆಲ್ ಆಗಿ ಸಿನಿಮಾ ತೂಫಾನ್ ,,, ಸುಂಟರಗಾಳಿ , ಸುನಾಮಿ , ಚಂಡಮಾರುತ , ಬಿರುಗಾಳಿ ಎಲ್ಲವನ್ನೂ ಒಟ್ಟಾಗಿ ಎಬ್ಬಿಸಿ , ಬಾಲಿವುಡ್ ಡಲ್ ಅನ್ನೋದನ್ನ ಫಸ್ಟ್ ಡೇ ಕಲೆಕ್ಷನ್ ಮೂಲಕ ಸಾಬೀತು ಮಾಡಿದೆ..
KGF 2 ಸೂಪರಃ , ಸೂಪರಸ್ಯ , ಸೂಪರೋಭವ….. ನೀವೇನ್ ಹೇಳ್ತೀರಾ… ಸಿನಿಮಾ ನೋಡಿ ನಿಮಗೇನನ್ನಿಸ್ತು , ಕಮೆಂಟ್ ಮಾಡಿ ತಿಳಿಸಿ…
RRR ನಲ್ಲಿ ರಾಮ್ ಚರಣ್ ಡಾಮಿನೇಷನ್ ಬಗ್ಗೆ ರಾಜಮೌಳಿ ರಿಯಾಕ್ಷನ್
KGF 2 RRR ಗಿಂತಲೂ ಕೆಟ್ಟ ಸಿನಿಮಾ : ವಿಮರ್ಶಕ KRK ತಲೆ ಸರಿ ಇಲ್ಲ ಎಂದ ನೆಟ್ಟಿಗರು..!!!
– ನಮ್ರಾತಾ ರಾವ್ –