RRR ನಲ್ಲಿ ರಾಮ್ ಚರಣ್ ಡಾಮಿನೇಷನ್ ಬಗ್ಗೆ ರಾಜಮೌಳಿ ರಿಯಾಕ್ಷನ್
ಮಾರ್ಚ್ 25 ರಂದು ವಿಶ್ವಾದ್ಯಂತ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿರುವ RRR ಸಿನಿಮಾ ಈಗಾಗಲೇ 700 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ.. ಇನ್ನೂ ಕೆಲವೇ ದಿನಗಳಲ್ಲಿ ಬಾಹುಬಲಿ ರೆಕಾರ್ಡ್ ಬ್ರೇಕ್ ಮಾಡಬಹುದು ಎನ್ನಲಾಗ್ತಿದೆ..
ಸಿನಿಮಾದಲ್ಲಿ ರಾಮ್ ಚರಣ್ ಜ್ಯೂ. ಎನ್ ಟಿ ಆರ್ ಅವರ ಪಾತ್ರವನ್ನ ಜನ ಮೆಚ್ಚಿ ಕೊಂಡಾಡ್ತಿದ್ದಾರೆ.. ಅದ್ರಲ್ಲೂ ರಾಮ್ ಚರಣ್ ಅವರ ಪಾತ್ರಕ್ಕೆ ಅದ್ರದ್ದೇ ಆದ ಮಹತ್ವವಿದೆ.. ಆದ್ರೆ ಈ ಸಿನಿಮಾದಲ್ಲಿ ರಾಮ್ ಚರಣ್ ಅವರ ಪಾತ್ರಕ್ಕೆ ಪ್ರಾಮುಖ್ಯತೆ ನೀಡಲಾಗಿದೆ ಎಂದೇ ಹಲವರು ಅಭಿಪ್ರಾಯ ಪಟ್ಟಿದ್ದು , NTR ಅಬಿಮಾನಿಗಳಿಗೂ ಕೊಂಚ ಅಸಮಾಧಾ ಉಂಟಾಗಿದೆ ಎನ್ನಲಾಗ್ತಿದೆ…
KGF 2 RRR ಗಿಂತಲೂ ಕೆಟ್ಟ ಸಿನಿಮಾ : ವಿಮರ್ಶಕ KRK ತಲೆ ಸರಿ ಇಲ್ಲ ಎಂದ ನೆಟ್ಟಿಗರು..!!!
ಆದ್ರೆ ಇತ್ತೀಚೆಗೆ ಮುಂಬೈನಲ್ಲಿ ನಡೆದ ಸಕ್ಸಸ್ ಮೀಟ್ನಲ್ಲಿ ವರದಿಗಾರರೊಬ್ಬರು ರಾಮ್ ಚರಣ್ ಅವರನ್ನು ಈ ಬಗ್ಗೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಚರಣ್, ಒಂದು ಕ್ಷಣ ಕೂಡ ನಾನು ಆ ರೀತಿ ಅಂದುಕೊಳ್ಳುವುದಿಲ್ಲ.
ಡಾಮಿನೇಷನ್ ಅನ್ನೋ ಪದವನ್ನ ನಾನು ನಂಬೋದಿಲ್ಲ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದರು.
ಆದ್ರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವಾಗಿ ಚರ್ಚೆ ನಡೆಯುತ್ತಲೇ ಇದೆ.
ಇದೀಗ ಈ ಬಗ್ಗೆ ರಾಜಮೌಳಿ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದರಲ್ಲಿ ಯಾವುದೇ ಡಾಮಿನೇಷನ್ ಇಲ್ಲ.. ತಾರಕ್ ಮತ್ತು ಚರಣ್ ಇಬ್ಬರೂ ತಮ್ಮ ಬೆಸ್ಟ್ ನೀಡಿದ್ದಾರೆ ಎಂದಿದ್ದಾರೆ ರಾಜಮೌಳಿ.
‘ಚರಣ್ ಡಾಮಿನೇಷನ್ ಹೆಚ್ಚಾಗಿದೆ ಅನ್ನೋದು ಸರಿಯಾದದ್ದಲ್ಲ. ಯಾವುದಾದರೂ ನಾವು ನೋಡುವ ದೃಷ್ಟಿಯಲ್ಲಿದೆ. ಕ್ಲೈಮ್ಯಾಕ್ಸ್ ನಲ್ಲಿ ರಾಮ್ ಚರಣ್ ಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಇರುವುದರಿಂದ.. ಅದನ್ನು ನೋಡಿ ಹೊರ ಬರುವ ಪ್ರೇಕ್ಷಕರಿಗೆ ಚರಣ್ ಡಾಮಿನೇಷನ್ ಇದ್ದಂತೆ ಅನಿಸಬಹುದು. ಅದೇ ಭೀಮುಡೋ ಹಾಡಿನ ಬಳಿ ಕ್ಲೈಮ್ಯಾಕ್ಸ್ ಇದ್ದರೆ ಎನ್ ಟಿಆರ್ ಡಾಮಿನೇಷನ್ ಇದ್ದ ರೀತಿ ಅನಿಸುತ್ತಿತ್ತು ಎಂದಿದ್ದಾರೆ ರಾಜಮೌಳಿ.