Beast : ತಮಿಳುನಾಡಿನಲ್ಲಿ ಸಿನಿಮಾ ಬ್ಯಾನ್ ಮಾಡುವಂತೆ ಆಗ್ರಹಿಸಿದ ಶಾಸಕ..!!!
ಏಪ್ರಿಲ್ 13 ರಂದು ರಿಲೀಸ್ ಆದ ಬೀಸ್ಟ್ KGF 2 ಮುಂದೆ ಡಲ್ ಆಗಿದೆ.. ತಮಿಳುನಾಡಿನಲ್ಲೂ ಬೀಸ್ಟ್ ಮುಂದೆ KGF 2 ಅಬ್ಬರಿಸುತ್ತಿದೆ.. ಬೀಸ್ಟ್ ಸಿನಿಮಾಗೆ ಹೇಳಿಕೊಳ್ಳುವಂತಹ ಉತ್ತಮ ರೆಸ್ಪಾನ್ಸ್ ಸಿಗ್ತಿಲ್ಲ.. ವಿಜಯ್ ಅವರ ಅಪಿಯರೆನ್ಸ್ ಅವರ ನಟನೆಗೆ ಫುಲ್ ಮಾರ್ಕ್ಸ್ ಸಿಕ್ರೂ ,,, ಸಿನಿಮಾ ಬಗ್ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿಲ್ಲ..
ಬೀಸ್ಟ್ ಸಿನಿಮಾ ರಿಲೀಸ್ ಗೂ ಮುನ್ನವೇ ಸಾಕಷ್ಟು ಅಡಚಣೆ ಎದುರಿಸಿತ್ತು.. ಸಿನಿಮಾಗೆ ಕತಾರ್ , ಕುವೈತ್ ನಲ್ಲಿ ನಿಷೇಧ ಹೇರಲಾಗಿತ್ತು.. ಆದ್ರೀಗ ಬೀಸ್ಟ್ ಸಿನಿಮಾವನ್ನ ತಮಿಳುನಾಡಿನಲ್ಲೇ ಬ್ಯಾನ್ ಮಾಡಬೇಕಂತ ಶಾಸಕರೊಬ್ಬರು ಒತ್ತಾಯಿಸಿದ್ದಾರೆ…

ಶಾಸಕ ಜವಾಹಿರುಲ್ಲಾ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಸಿನಿಮಾ ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದಾರೆ.
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 26.40 ಕೋಟಿ ರೂಪಾಯಿಗಳೊಂದಿಗೆ ಬೃಹತ್ ಓಪನಿಂಗ್ ಕಂಡಿತು. ಈ ಚಿತ್ರವು ದಳಪತಿ ವಿಜಯ್‌ಗೆ ಎರಡನೇ ಅತಿ ಹೆಚ್ಚು ಗಳಿಕೆಯ ಸಿನಿಮಾವಾಗಿದೆ. ಸಿನಿಮಾದಲ್ಲಿ ಮಾಲ್ ಮೇಲೆ ದಾಳಿ ಮಾಡುವ ಭಯೋತ್ಪಾದಕರ ವಿರುದ್ಧ ಹೋರಾಡಲು ಬರುವ Raw ಏಜೆಂಟ್ ಆಗಿ ವಿಜಯ್ ಕಾಣಿಸಿಕೊಂಡಿದ್ದಾರೆ.. ಆದ್ರೆ ಈ ಸಿನಿಮಾದಲ್ಲಿ ಮುಸ್ಲಿಂ ಸಮುದಾಯವನ್ನು ಅವಮಾನಿಸಲಾಗಿದೆ ಎಂದು ಜಹೀರುಲ್ಲಾ ಬಾವಿಸಿ ಸಿನಿಮಾ ನಿಷೇಧಕ್ಕೆ ಆಗ್ರಹಿಸಿದ್ದಾರೆ..